Salt Side Effects: ಉಪ್ಪು ದೇಹಕ್ಕೆ ಅಗತ್ಯ. ನಮ್ಮ ದೇಹಕ್ಕೆ ಅಗತ್ಯವಿರುವ 90 ಪ್ರತಿಶತದಷ್ಟು ಸೋಡಿಯಂ ಉಪ್ಪಿನಿಂದ ಸಿಗುತ್ತದೆ. ತಜ್ಞರು ಹೇಳುವಂತೆ ದಿನಕ್ಕೆ 2300 ಮಿ.ಗ್ರಾಂ ಅಂದರೆ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ ನಾವು ತಿನ್ನುವ ಆಹಾರದಲ್ಲಿ ಉಪ್ಪನ್ನು ಬಳಸುತ್ತೇವೆ. ಆದರೆ.. ಅದರ ಅತಿಯಾದ ಸೇವನೆಯು ಹಾನಿಕಾರಕವಾಗಿದೆ. ನಿಮ್ಮ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚಿನ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ದೌರ್ಬಲ್ಯದಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.   


ಅಧಿಕ ರಕ್ತದೊತ್ತಡ: ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದನ್ನು ಅಧಿಕ ರಕ್ತದೊತ್ತಡ ಎನ್ನುತ್ತಾರೆ. ಅಧಿಕ ರಕ್ತದೊತ್ತಡ ಹೃದ್ರೋಗಕ್ಕೆ ಕಾರಣವಾಗುತ್ತದೆ. ಇದರ ಲಕ್ಷಣಗಳು ತಲೆನೋವು, ತಲೆಸುತ್ತು, ಹೃದಯದ ಬಡಿತದ ವೇಗ.. ಈ ಲಕ್ಷಣಗಳನ್ನು ಅನುಭವಿಸಿದರೆ ನಿಮ್ಮ ದೇಹದಲ್ಲಿ ಉಪ್ಪು ಜಾಸ್ತಿಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಾಗಾದರೆ ತಕ್ಷಣ ಇದನ್ನು ನಿಯಂತ್ರಿಸಬೇಕು ಎನ್ನುತ್ತಾರೆ ವೈದ್ಯಕೀಯ ತಜ್ಞರು. 


ಇದನ್ನೂ ಓದಿ: ಈ 5 ತರಕಾರಿಗಳನ್ನು ಕುದಿಸಿದರೆ ಪೋಷಕಾಂಶದ ಮಟ್ಟದಲ್ಲಿ ಹೆಚ್ಚಳ..!


ದೇಹದಲ್ಲಿ ಊತ: ಹೆಚ್ಚು ಉಪ್ಪು ತಿಂದರೆ ದೇಹವು ನೀರನ್ನು ಉಳಿಸಿಕೊಳ್ಳಬಹುದು. ಇದು ಕೈ, ಕಾಲು, ಮುಖ, ಹೊಟ್ಟೆಯಲ್ಲಿ ಊತವನ್ನು ಉಂಟು ಮಾಡುತ್ತದೆ. ಈ ಊತವು ನಿಮ್ಮ ದೇಹದಲ್ಲಿ ಹೆಚ್ಚಿದ ಉಪ್ಪಿನ ಸಂಕೇತವಾಗಿದೆ. ಅದನ್ನು ಕಡಿಮೆ ಮಾಡಬೇಕಾಗಿದೆ.


ಆಗಾಗ್ಗೆ ಬಾಯಾರಿಕೆ: ಹೆಚ್ಚು ಉಪ್ಪು ಸೇವನೆಯು ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ಇದು ಹೆಚ್ಚುವರಿ ಉಪ್ಪನ್ನು ತೊಡೆದುಹಾಕಲು ದೇಹವು ಪ್ರಯತ್ನಿಸುವ ಮಾರ್ಗವಾಗಿದೆ. ಹೆಚ್ಚು ಉಪ್ಪು ತಿನ್ನುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. 


ಮೂತ್ರದಲ್ಲಿನ ಬದಲಾವಣೆಗಳು: ಅತಿಯಾದ ಉಪ್ಪು ಸೇವನೆಯಿಂದ ಮೂತ್ರದ ಗಾಢ ಬಣ್ಣಕ್ಕೆ ಕಾರಣವಾಗಬಹುದು. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಸಂಕೇತವಾಗಿದೆ. ಇದರಿಂದಾಗಿ ಮೂತ್ರಪಿಂಡ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಬಹಳ ಮುಖ್ಯ.


ಆಯಾಸ - ದೌರ್ಬಲ್ಯ: ಹೆಚ್ಚುವರಿ ಉಪ್ಪು ದೇಹದಲ್ಲಿ ದೌರ್ಬಲ್ಯ ಮತ್ತು ಆಯಾಸವನ್ನು ಉಂಟುಮಾಡುತ್ತದೆ. ಏಕೆಂದರೆ ಇದು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ. ಈ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಕೂದಲು ಕಪ್ಪಾಗಿ ಸೊಂಟ ದಾಟಿ ಬೆಳೆಯುವುದು !


ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.