Mansoon Health tips : ಕೆಲವು ಸೋಂಕುಗಳು ಸೀನುವಿಕೆ ಅಥವಾ ಕೆಮ್ಮುವಿಕೆಯಿಂದ ಹರಡುತ್ತವೆ. ಶಿಗೆಲ್ಲ, ನೋರಾ ವೈರಸ್, ರೋಟಾ ವೈರಸ್, ಸ್ಟ್ಯಾಫ್ ವೈರಾಣುಗಳು ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗುತ್ತವೆ. ಇವು ಒಬ್ಬರಿಂದ ಇನ್ನೊಬ್ಬರಿಗೆ ಅವರು ಬಳಸುವ ವಸ್ತುಗಳ ಮೂಲಕ ಹರಡುತ್ತವೆ. ಹಾಗಾಗಿ ಕುಟುಂಬದ ಸದಸ್ಯರಾಗಲಿ ಅಥವಾ ಸ್ನೇಹಿತರಾಗಲಿ ಅವರ ಜೊತೆ ಕೆಲವು ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ. ಅಲ್ಲದೆ ಅವರು ಬಳಸಿದ ವಸ್ತುಗಳನ್ನು ಎಂದಿಗೂ ಬಳಸಬೇಡಿ.


COMMERCIAL BREAK
SCROLL TO CONTINUE READING

ಕರ್ಚೀಫ್‌ : ನಿಮ್ಮ ಕರ್ಚೀಫ್ ಅನ್ನು ಯಾವತ್ತೂ ಇತರರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಈ ಕರ್ಚೀಫ್ ನಲ್ಲಿ ಹಲವು ಬಗೆಯ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆ ಇದೆ. ಬೇರೆಯವರದ್ದೂ ಸಹ ನೀವು ಬಳಸಬೇಡಿ. ನಿಮ್ಮದನ್ನು ಇತರರಿಗೂ ನೀಡಬೇಡಿ.


ಇದನ್ನೂ ಓದಿ:ಯಾರೋ ಹೇಳಿದ್ರು ಅಂತ ಮೊಟ್ಟೆಯಲ್ಲಿರುವ ಹಳದಿ ಭಾಗ ತೆಗೆದು ತಿಂತೀರಾ..! ತಪ್ಪದೇ ತಿಳಿಯಿರಿ


ಟವೆಲ್‌ : ಟವೆಲ್ ವೈಯಕ್ತಿಕ ವಸ್ತುವಾಗಿ ಪರಿಗಣಿಸಬೇಕು. ಅನೇಕ ಜನರು ಒಂದೇ ಟವೆಲ್‌ ಅನ್ನು ಎಲ್ಲರೂ ಬಳಸುತ್ತಾರೆ. ಇದರಿಂದ ಒಬ್ಬರಿಗಿರುವ ಚರ್ಮದ ಖಾಯಿಲೆ ಸೇರಿದಂತೆ ಹಲವು ರೋಗಳು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮಳೆಯ ಹಿನ್ನೆಲೆ ಟವೆಲ್ ಬೇಗ ಒಣಗುವುದಿಲ್ಲ. ಇದರಿಂದಾಗಿ ಅವುಗಳ ಮೇಲೆ ಬ್ಯಾಕ್ಟೀರಿಯಾಗಳು ಕುಳಿತುಕೊಳ್ಳುವ ಸಾಧ್ಯತೆಯಿದೆ. ಇವು ಹಲವು ರೋಗಕ್ಕೆ ದಾರಿ ಮಾಡುತ್ತವೆ.


ಸೋಪು : ಸೋಪ್ ತ್ವಚೆಯ ಮೇಲೆ ಬ್ಯಾಕ್ಟೀರಿಯಾವನ್ನು ಬಹುಬೇಗ ಹರಡಲು ಕಾರಣವಾಗುತ್ತದೆ. ಅಧ್ಯಯನದ ಪ್ರಕಾರ, ಸುಮಾರು 62 ಪ್ರತಿಶತ ಬ್ಯಾಕ್ಟೀರಿಯಾಗಳು ಸಾಬೂನಿನಿಂದ ಹರಡುತ್ತವೆ. ಆದ್ದರಿಂದ ಇತರರು ಬಳಸುವ ಸೋಪುಗಳನ್ನು ಎಂದಿಗೂ ಬಳಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಇಡುವ ಸಾಬೂನುಗಳು ಹೆಚ್ಚಿನ ಬ್ಯಾಕ್ಟೀರಿಯಾವನ್ನು ಆಶ್ರಯಿಸುವ ಸಾಧ್ಯತೆಯಿದೆ. ಅಲ್ಲದೆ, ಇತರರು ಬಳಸುವ ಸ್ನಾನದ ಸ್ಪಂಜುಗಳು ಮತ್ತು ಲೂಫಾಗಳನ್ನು ಬಳಸುವುದನ್ನು ನೀವು ನಿಲ್ಲಿಸಿ.


ಇದನ್ನೂ ಓದಿ: ನಿಗದಿತ ಆರೋಗ್ಯ ತಪಾಸಣೆ ಭಾಗವಾಗಿ ಫಲವತ್ತತೆ ಪರೀಕ್ಷೆ ಏಕೆ ಮಾಡಿಸಬೇಕು?


ಬ್ರಷ್‌ : ಹಲ್ಲುಜ್ಜುವ ಬ್ರಷ್‌ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ವೇಗವಾಗಿ ಹರಡುತ್ತವೆ. ಒಬ್ಬರು ಬಳಸುವ ಬ್ರಷ್ ಅನ್ನು ಇನ್ನೊಬ್ಬರು ಬಳಸಬಾರದು. ಇದರಿಂದಾಗಿ ದಂತಕ್ಷಯದಂತಹ ಸಮಸ್ಯೆಗಳು ಬಹು ಬೇಗ ಬರುವ ಸಾಧ್ಯತೆ ಇರುತ್ತದೆ. ಬ್ರಷ್‌ ಮೇಲೆ ರೋಗಾಣುಗಳು ಹೆಚ್ಚಿರುತ್ತವೆ, ಇದು ಗಂಟಲಿನ ಸೋಂಕಿಗೆ ಕಾರಣವಾಗುತ್ತದೆ.


ಬಾಚಣಿಗೆ : ತಲೆಹೊಟ್ಟು, ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆ ಇವೆಲ್ಲವೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ನೀವು ಬಳಸುವ ಬಾಚಣಿಗೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇಲ್ಲದಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: ಕೇವಲ 15 ದಿನಗಳಲ್ಲಿ ಬಾಡಿ ಫ್ಯಾಟ್ ಕರಗಿಸಿ ದೇಹವನ್ನು ತೆಳ್ಳಗಾಗಿಸುತ್ತದೆ ಈ ಪಾನೀಯಗಳು


ಚಪ್ಪಲಿ : ಬಾತ್ ರೂಂನಲ್ಲಿ ಬಳಸುವ ಚಪ್ಪಲಿಗಳಲ್ಲಿ ಸೋಂಕುಗಳು ಹೆಚ್ಚು. ನೀವು ಅವುಗಳನ್ನು ಇತರರಿಗೆ ಹಾಕಿಕೊಳ್ಳಲು ನಿಡಬೇಡಿ ಅಥವಾ ಇತರರಂತೆ ಬಳಸದಂತೆ ನೋಡಿಕೊಳ್ಳಿ. ಒದ್ದೆಯಾದ ಪಾದರಕ್ಷೆಗಳನ್ನು ಬೇರೆಯವರು ಬಳಸಿದರೆ... ಅವರಿಂದ ನಿಮಗೆ ಫಂಗಲ್ ಸೋಂಕು ತಗಲುವ ಸಾಧ್ಯತೆ ಹೆಚ್ಚು.


ಲಿಪ್‌ ಬಾಮ್ : ಲಿಪ್‌ ಬಾಮ್ ಕೂಡ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ತುಟಿಗಳ ಮೇಲೆ ಸತ್ತ ಜೀವಕೋಶಗಳು ಮತ್ತು ಸೂಕ್ಷ್ಮಜೀವಿಗಳು ಲಿಪ್ ಬಾಮ್‌ ಮೇಲೆ ಇರುತ್ತವೆ. ಅದನ್ನು ಇತರ ಜನರು ಬಳಸುವುದರಿಂದ, ಅವರು ಈ ರೋಗಾಣುಗಳನ್ನು ಸಹ ಪಡೆಯಬಹುದು. ಅಲ್ಲದೆ ನೀವು ಇತರರ ಲಿಪ್‌ಬಾಮ್‌ ಬಳಸುವುದರಿಂದ ಬಾಯಿಯ ಹರ್ಪಿಸ್ನಂತಹ ರೋಗಗಳು ಹರಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.