Health Benefits Of Arjun Bark:ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀವೂ ಕೂಡ ಅರ್ಜುನ ಮರವನ್ನು ನೋಡಿರಬಹುದು, ಆದರೆ ಅದರ ಅದ್ಭುತ ಪ್ರಯೋಜನಗಳು ನಿಮಗೆ ತಿಳಿದಿವೆಯೇ? ಈ ಮರದ ಔಷಧೀಯ ಗುಣಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಅರ್ಜುನ ತೊಗಟೆಯನ್ನು ಆಯುರ್ವೇದ ಔಷಧವೆಂದು ಪರಿಗಣಿಸಲಾಗಿದೆ. ಅನೇಕ ರೋಗಗಳನ್ನು ಗುಣಪಡಿಸಲು ಇದನ್ನು ಶತಮಾನಗಳಿಂದಲೂ ಬಳಸಲಾಗುತ್ತದೆ. ಅರ್ಜುನ ತೊಗಟೆಯ ನೀರಿನಲ್ಲಿ ಹಲವು ಆ್ಯಂಟಿಆಕ್ಸಿಡೆಂಟ್ಸಗಳು ಕಂಡುಬರುತ್ತದೆ. ಹೀಗಾಗಿ ಇದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಸೋಂಕು, ಗಂಟಲು ನೋವು, ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ಕೇವಲ ಚಿಟಿಕೆ ಹೊಡೆಯೋದ್ರಲ್ಲಿ ನಿವಾರಿಸುತ್ತದೆ. ಅರ್ಜುನ ತೊಗಟೆಯ ನೀರು ಸೇವನೆಯಿಂದಾಗುವ ಪ್ರಮುಖ ಆರು ಪ್ರಯೋಜನಗಳ (Health News In Kannada) ಕುರಿತು ತಿಳಿದುಕೊಳ್ಳೋಣ ಬನ್ನಿ, 
 
1. ಮಧುಮೇಹ
ಮಧುಮೇಹವನ್ನು ನಿಯಂತ್ರಿಸಲು ಅರ್ಜುನ್ ತೊಗಟೆಯನ್ನು ಬಳಸಲಾಗುತ್ತದೆ. ಇದರಲ್ಲಿ ಕಂಡುಬರುವ ಕೆಲವು ವಿಶೇಷ ಕಿಣ್ವಗಳು ಮತ್ತು ಮಧುಮೇಹ ವಿರೋಧಿ ಗುಣಲಕ್ಷಣಗಳು ಮೂತ್ರಪಿಂಡ ಮತ್ತು ಯಕೃತ್ತಿನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹ ರೋಗಿಗಳಿಗೆ ಅರ್ಜುನ್ ತೊಗಟೆಯ ನೀರನ್ನು (Arjun Bark Water) ಕುಡಿಯಲು ಸಲಹೆ ನೀಡಲಾಗುತ್ತದೆ.
 
2. ಹೃದಯ ರೋಗ
ಅರ್ಜುನ್ ತೊಗಟೆ  ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಲು ಮತ್ತು ಅದರ ದಕ್ಷತೆಯನ್ನು ಸುಧಾರಿಸಲು ಪ್ರಯೋಜನಕಾರಿಯಾಗಿದೆ. ಇಲಿಗಳ ಆಧಾರದ ಮೇಲೆ NCBI ನಡೆಸಿದ ಸಂಶೋಧನೆಯು ಅರ್ಜುನ ತೊಗಟೆಯಲ್ಲಿ ಟ್ರೈಟರ್ಪಿನಾಯ್ಡ್ ಎಂಬ ವಿಶೇಷ ರಾಸಾಯನಿಕವನ್ನು ಹೊಂದಿದೆ ಎಂದು ಕಂಡುಹಿಡಿದಿದೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
 
3. ಶೀತ ಮತ್ತು ಕೆಮ್ಮು
ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಅರ್ಜುನ್ ತೊಗಟೆಯನ್ನು ಅನಾದಿಕಾಲದಿಂದ ಬಳಸಲಾಗುತ್ತಿದೆ. ಈ ತೊಗಟೆಯ ನೀರು ಕಟ್ಟಿದ ಮೂಗಿನಿಂದ ಉಪಶಮನವನ್ನು ನೀಡುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿ ಮಾಡುವ ಮೂಲಕ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
 
4. ಉಸಿರಾಟದ ಕಾಯಿಲೆ
ಆಯುರ್ವೇದದಲ್ಲಿ, ಅರ್ಜುನ ತೊಗಟೆಯ ನೀರನ್ನು ಉಸಿರಾಟದ ಕಾಯಿಲೆಗಳಿಗೆ ಬಹಳ ಪರಿಣಾಮಕಾರಿ ಎಂದು ಹೇಳಲಾಗಿದೆ. ಅಸ್ತಮಾದಂತಹ ಉಸಿರಾಟ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ನೀಡುವಲ್ಲಿ ಇದು ಹೆಚ್ಚು ಉಪಯೋಗಕಾರಿ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಅಡುಗೆ ಮನೆಯಲ್ಲಿರುವ ಈ 4 ವಸ್ತು ಬಳಸಿ ಕೂದಲು ಸ್ವಚ್ಛಗೊಳಿಸಿ, ಕೂದಲು ಉದುರುವುದಿಲ್ಲ!
 
5. ಅಧಿಕ ರಕ್ತದೊತ್ತಡ
ಅರ್ಜುನ್ ತೊಗಟೆಯಲ್ಲಿ ಟ್ರೈಟರ್ಪಿನಾಯ್ಡ್ ರಾಸಾಯನಿಕಗಳು ಕಂಡುಬರುತ್ತವೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ ನಿವಾರಕ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-ಒಂದೇ ವಾರದಲ್ಲಿ 2 ಕೆಜಿ ತೂಕ ಇಳಿಸಲು ಇಂದಿನಿಂದಲೇ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಲು ಆರಂಭಿಸಿ!
 
6. ಜೀರ್ಣಕ್ರಿಯೆ
ಜೀರ್ಣಕ್ರಿಯೆ ಉತ್ತಮವಾಗಬೇಕಾದರೆ ಅರ್ಜುನನ ತೊಗಟೆಯ ನೀರನ್ನು ಕುಡಿಯಬೇಕು. ಇದು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದರ ಬಳಕೆಯಿಂದ ಜೀರ್ಣಕ್ರಿಯೆ ಬಲಗೊಳ್ಳುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ