Benefits of Dates: ಸಕ್ಕರೆ ಅಥವಾ ಸಿಹಿಯಾದ ಸಿಹಿತಿಂಡಿಗಳು ತೂಕವನ್ನು ಕಳೆದುಕೊಳ್ಳುವ ನಿಮ್ಮ ದೀರ್ಘಾವಧಿಯ ಪ್ಲಾನ್ ಜೊತೆ ಕೈಜೋಡಿಸದೆ ಇರಬಹುದು. ಆದರೆ ಇಂದು ನಾವು ಹೇಳಹೊರಟಿರುವ ಕಂದುಬಣ್ಣದ ಹಣ್ಣೊಂದು ನಿಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.   


COMMERCIAL BREAK
SCROLL TO CONTINUE READING

ಬಹುಪಾಲು ಮಧ್ಯಪ್ರಾಚ್ಯ ಆಹಾರ ಪದ್ಧತಿಗಳಲ್ಲಿ ಖರ್ಜೂರಗಳು ಬಹಳ ಹಿಂದಿನಿಂದಲೂ ಅವಿಭಾಜ್ಯ ಅಂಗವಾಗಿದೆ. ಇಂದು ನಾವು ಖರ್ಜೂರದ ಕೆಲವು ಪ್ರಯೋಜನಗಳನ್ನು ಹೇಳಲಿದ್ದೇವೆ. ನಿಮ್ಮ ಆರೋಗ್ಯಕ್ಕೆ ಖರ್ಜೂರ ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವರದಿ ಸಹಾಯ ಮಾಡಬಹುದು.


ಇದನ್ನೂ ಓದಿ: Watch: ನೋಡನೋಡುತ್ತಿದ್ದಂತೆ ಚಂದ್ರನಲ್ಲೇ ಮರೆಯಾಯ್ತು ಶುಕ್ರ! ಹಿಂದೆಂದೂ ಸಂಭವಿಸಿದ ಮಹಾಸಂಯೋಗ: ವಿಡಿಯೋ ನೋಡಿ


ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಲು ನೀವು ಈಗಾಗಲೇ ಮನಸ್ಸನ್ನು ಮಾಡಿದ್ದರೆ ಅದನ್ನು ಈ ರೀತಿ ಸೇವಿಸಿ. ಅದರ ಪರಿಣಾಮ ನಿಮಗೇ ತಿಳಿಯುವುದು.


ಹೆಚ್ಚಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಖರ್ಜೂರವನ್ನು ಬೆಳೆಯಲಾಗುತ್ತದೆ, ಖರ್ಜೂರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ. ಅಂದವಾಗಿ ಪ್ಯಾಕ್ ಮಾಡಲಾದ, ಕಿರಾಣಿ ಅಂಗಡಿಗಳಲ್ಲಿ ಅಲಂಕಾರಿಕ ಬಾಕ್ಸ್‌’ಗಳಲ್ಲಿ ನೀವು ಗುರುತಿಸುವ ಖರ್ಜೂರಗಳು ಹೆಚ್ಚಾಗಿ ಒಣಗಿಸದ ಮೆಡ್‌ಜೂಲ್ ಮತ್ತು ಡೆಗ್ಲೆಟ್ ನೂರ್ ಖರ್ಜೂರಗಳಾಗಿವೆ, ಇವೆರಡೂ ಖರ್ಜೂರದ ಪೌಷ್ಟಿಕಾಂಶದ ರೂಪಾಂತರಗಳಾಗಿವೆ.


ಜೇನುತುಪ್ಪಕ್ಕಿಂತ ಸಿಹಿಯಾಗಿರುವ ಖರ್ಜೂರಗಳು ಪೌಷ್ಟಿಕಾಂಶದ ಆರೋಗ್ಯಕರ ಗಟ್ಟಿಗಳಾಗಿವೆ. ಇದು ಕಬ್ಬಿಣದಿಂದ ಸಮೃದ್ಧವಾಗಿರುವಂತಹ ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. B1, B2, A1 ಮತ್ತು ವಿಟಮಿನ್ C ನಂತಹ ಜೀವಸತ್ವಗಳು ಇದರಲ್ಲಿದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದು ಇದರ ಪ್ರಮುಖ ಪ್ರಯೋಜನ.


ಖರ್ಜೂರದಲ್ಲಿ ನಾರಿನಂಶ ಅಧಿಕವಾಗಿದೆ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಹೊಂದುತ್ತೀರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಖರ್ಜೂರದ ಪ್ರೋಟೀನ್ ಆರೋಗ್ಯಕರ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?


ಖರ್ಜೂರಗಳು ಸ್ವಾಭಾವಿಕವಾಗಿ ಸಿಹಿಯಾಗಿರುತ್ತವೆ. ಇದರರ್ಥ ನೀವು ನಿಮ್ಮ ಹಸಿವು, ಸಿಹಿ ಕಡುಬಯಕೆಗಳನ್ನು ನೀಗಿಸಬಹುದು. ಈ ಮೂಲಕ ಆರೋಗ್ಯಕರವಾಗಿರಬಹುದು. ಬೆಲ್ಲವು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಲು ಉತ್ತಮ ಪರ್ಯಾಯವಾಗಿದೆ. ಆದರೆ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಆಹಾರದ ಜೊತೆಗೆ, ಖರ್ಜೂರವು ಹಲವಾರು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ, ಅದು ಹೃದ್ರೋಗಗಳು ಮತ್ತು ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ