ಈ ಹಣ್ಣು ಯೂರಿಕ್ ಆಸಿಡ್ ಹರಳುಗಳನ್ನು ಫಿಲ್ಟರ್ ಮಾಡುತ್ತೆ; ಇದನ್ನ ಹೇಗೆ ಸೇವಿಸಬೇಕೆಂದು ತಿಳಿದುಕೊಳ್ಳಿರಿ!!
How to control uric acid?: ಯೂರಿಕ್ ಆಮ್ಲದ ಹೆಚ್ಚಳದಿಂದ ದೇಹದಲ್ಲಿ ಕೀಲು ನೋವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದ ಎದ್ದು ಕುಳಿತುಕೊಳ್ಳಲೂ ಸಹ ತೊಂದರೆಯಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಈ ಹಣ್ಣನ್ನು ಬಳಸಬೇಕು.
Papaya intake in uric acid: ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಿದ ಪ್ರಮಾಣವನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ. ಯೂರಿಕ್ ಆಮ್ಲದ ಹೆಚ್ಚಳದಿಂದ ದೇಹದ ಕೀಲುಗಳಲ್ಲಿ ತೀವ್ರವಾದ ನೋವು ಇರುತ್ತದೆ. ಮೊಣಕಾಲು ನೋವು ತುಂಬಾ ಹೆಚ್ಚಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಎದ್ದೇಳಲು ಮತ್ತು ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ವಿಟಮಿನ್ಗಳು, ಖನಿಜಗಳು ಮತ್ತು ಪ್ರೋಟೀನ್ಗಳನ್ನು ಹೇರಳವಾಗಿ ಸೇವಿಸಬೇಕು. ನೀವು ಪಪ್ಪಾಯಿಯ ಮೂಲಕವೂ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು. ಪಪ್ಪಾಯಿಯಲ್ಲಿ ವಿಟಮಿನ್ ʼಸಿʼ ಸಮೃದ್ಧವಾಗಿದೆ, ಆದ್ದರಿಂದ ಅವು ಹೆಚ್ಚಿನ ಮಟ್ಟದ ಯೂರಿಕ್ ಆಮ್ಲವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಅಧ್ಯಯನಗಳು ಪ್ರತಿದಿನ 500 ಮಿಗ್ರಾಂ ವಿಟಮಿನ್ ʼಸಿʼ ತೆಗೆದುಕೊಳ್ಳುವುದರಿಂದ ಗೌಟ್ ನೋವನ್ನು ನಿರ್ವಹಿಸಲು ಜನರಿಗೆ ಸಹಾಯ ಮಾಡುತ್ತದೆ ಎಂದು ಹೇಳಿವೆ.
ಹಸಿ ಪಪ್ಪಾಯಿಯು ಯೂರಿಕ್ ಆಮ್ಲವನ್ನು ಹೇಗೆ ನಿಯಂತ್ರಿಸುತ್ತದೆ?
ಹಸಿ ಪಪ್ಪಾಯಿಯಲ್ಲಿ ವಿಟಮಿನ್ ʼಸಿʼ, ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಪಪ್ಪಾಯಿಯಲ್ಲಿರುವ ಫೈಬರ್ ಯೂರಿಕ್ ಆಸಿಡ್ ರೋಗಿಗಳಿಗೆ ಕೀಲು ನೋವಿನಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಹಸಿ ಪಪ್ಪಾಯಿಯನ್ನು ನೈಸರ್ಗಿಕ ನೋವು ನಿವಾರಕ ಎಂದೂ ಕರೆಯುತ್ತಾರೆ. ಇದರಲ್ಲಿ ಪಾಪೈನ್ ಎಂಬ ಕಿಣ್ವ ಇರುವುದರಿಂದ ದೇಹದಲ್ಲಿ ಸೈಟೊಕಿನ್ ಎಂಬ ಪ್ರೊಟೀನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಪಪ್ಪಾಯಿಯನ್ನು ಹೀಗೆ ಸೇವಿಸಿ
ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವನ್ನು ನಿಯಂತ್ರಿಸಲು, ನೀವು ಪಪ್ಪಾಯಿಯನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಹಸಿ ಪಪ್ಪಾಯಿಯನ್ನು ಜ್ಯೂಸ್ ಮತ್ತು ಡಿಕಾಕ್ಷನ್ ಮಾಡಿ ಕೂಡ ಕುಡಿಯಬಹುದು. ಹಸಿ ಪಪ್ಪಾಯಿಯ ಕಷಾಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಕಷಾಯ ಮಾಡಲು 2 ಲೀಟರ್ ನೀರನ್ನು ಕುದಿಸಿ. ನಂತರ ಹಸಿ ಪಪ್ಪಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದರೊಳಗಿನ ಬೀಜಗಳನ್ನು ತೆಗೆಯಿರಿ. ಈ ತುಂಡುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಂತರ ಈ ನೀರಿನಲ್ಲಿ 2 ಚಮಚ ಗ್ರೀನ್ ಟೀ ಸೇರಿಸಿ ಕುದಿಸಿ. ಈ ಕಷಾಯವನ್ನು ದಿನಕ್ಕೆ 3 ರಿಂದ 4 ಬಾರಿ ಸೇವಿಸುವುದರಿಂದ ಪ್ರಯೋಜನಕಾರಿ. ಇದು ನಿಮ್ಮ ದೇಹದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿನ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಇದನ್ನೂ ಓದಿ: ಗ್ಯಾಸ್, ಅಜೀರ್ಣ, ಎದೆಯು ಸಮಸ್ಯೆಯಿಂದ ಕ್ಷಣಾರ್ಧದಲ್ಲಿ ಮುಕ್ತಿ ನೀಡುತ್ತೆ ಈ ಪಾನೀಯ! ಬೇಕಿದ್ರೆ ಟ್ರೈ ಮಾಡಿ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.