Guava Fruit ( Parle hannu): ಚಳಿಗಾಲದಲ್ಲಿ ಪೇರಳೆಯನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣು ತಿಂದರೆ ಶೀತ ಮತ್ತು ಕೆಮ್ಮು ಉಂಟಾಗುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ವಾಸ್ತವವು ನಿಖರವಾಗಿ ವಿರುದ್ಧವಾಗಿದೆ. ಆಹಾರ ತಜ್ಞರ ಪ್ರಕಾರ, ಪೇರಳೆ ಹಣ್ಣನ್ನು ಕಪ್ಪು ಉಪ್ಪನ್ನು ಸೇರಿಸಿ ತಿನ್ನವುದರಿಂದ  ಶೀತ, ಕೆಮ್ಮು ಸೇರಿದಂತೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ತೀವ್ರ ಶೀತದಿಂದ ಬಳಲುತ್ತಿರುವವರು ಪೇರಳೆಯನ್ನು ಗ್ಯಾಸ್‌ನಲ್ಲಿ ಹುರಿದು ಸೇವಿಸಬಹುದು. ಈ ಹಣ್ಣನ್ನು ರೋಗನಿರೋಧಕ ಶಕ್ತಿಗೆ ರಾಮಬಾಣವೆಂದು ಪರಿಗಣಿಸುತ್ತದೆ. 


COMMERCIAL BREAK
SCROLL TO CONTINUE READING

ಪೇರಳೆಯಲ್ಲಿ ಪೋಷಕಾಂಶಳು ಸಮೃದ್ಧವಾಗಿರರುವ ಜೊತೆಗೆ, ವಿಟಮಿನ್ ಬಿ2, ಇ ಮತ್ತು ಕೆ, ಕ್ಯಾಲ್ಸಿಯಂ, ಫಾಲಟೆ, ನಾರಿನಾಂಶ, ತಾಮ್ರ, ಕಬ್ಬಿನಾಂಶ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಪೋಸ್ಪರಸ್ ನಂತಹ ಅಂಶಗಳು ಒಳಗೊಂಡಿವೆ. ಈ ಕಾರಣದಿಂದಾಗಿ ಇದು ಋತುಮಾನದ ಸೋಂಕುಗಳ ವಿರುದ್ಧ ರಕ್ಷಿಸುವಲ್ಲಿ ಪರಿಣಾಮಕಾರಿ ಎಂದು ತಿಳಿದುಬಂದಿದೆ. ವಿಶೇಷವೆಂದರೆ ಸಕ್ಕರೆ ರೋಗಿಗಳೂ ಪೇರಳೆ ಹಣ್ಣನ್ನು ಸೇವಿಸಬಹುದು. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ಅಪಾಯವು ಇರುವುದಿಲ್ಲ.


ಇದನ್ನೂ ಓದಿ: Diabetes Control Tips: ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಎಣ್ಣೆ!


ಚಳಿಗಾಲದಲ್ಲಿ ಪೇರಳೆಯನ್ನು ತಿನ್ನವುದರಿಂದ ದೇಹದಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಈ ವಿಟಮಿನ್ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ ರೋಗಗಳನ್ನು ತಡೆಯುತ್ತದೆ. ಪೇರಳೆಯನ್ನು ತಿನ್ನುವುದರಿಂದ ಜನರು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ಪಡೆಯಬಹುದು. ಪೇರಳೆ ಹಣ್ಣಿಗೆ ಕಪ್ಪು ಉಪ್ಪನ್ನು ಸೇರಿಸಿ ತಿನ್ನವುದುರಿಂದ ಯಾವ ರೋಗಗಳು ಬರುವುದಿಲ್ಲ. ಅದಲ್ಲದೇ ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸಲಾಗಿದೆ. ಮಧುಮೇಹ ರೋಗಿಗಳಿಗೆ ಪೇರಳೆಯನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಬಹುದು. ಪೇರಳೆಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೇರಳೆಯನ್ನು ಹಗಲಿನಲ್ಲಿ ಯಾವುದೇ ಸಮಯದಲ್ಲಿ ಸೇವಿಸಬಹುದು, ಆದರೆ ರಾತ್ರಿಯಲ್ಲಿ ಅದನ್ನು ಸೇವಿಸಬಾರದು. ರಾತ್ರಿಯಲ್ಲಿ ಯಾವುದೇ ಹಣ್ಣನ್ನು ಸೇವಿಸಬಾರದು.


ಪೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು


* ಶೀತ ಮತ್ತು ಕೆಮ್ಮು ನಿವಾರಣೆಗೆ ಸಹಾಯಕ


ಇತರ ಹಣ್ಣುಗಳಿಗೆ ಹೋಲಿಸಿದರೆ ಪೇರಳೆಯಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಈ ಹಣ್ಣನ್ನು ಗ್ಯಾಸ್‌ನಲ್ಲಿ  ಚೆನ್ನಾಗಿ ಬೇಯಿಸಿ. ನಂತರ ಅದನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ ಕಪ್ಪು ಉಪ್ಪು ಸೇರಿಸಿ. ಇದರ ನಂತರ ಅದನ್ನು ಸೇವಿಸಿ. ಇದರಿಂದ ನೆಗಡಿ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು. 


ಇದನ್ನೂ ಓದಿ: ಈ ವಿಧಾನದಿಂದ ನಿಮ್ಮ ಕಾಲುಗಳನ್ನು ಬಲಗೊಳಿಸಬಹುದು..!


* . ಮುಟ್ಟಿನ ನೋವಿನಿಂದ ಮುಕ್ತಿ


ಅನೇಕ ಮಹಿಳೆಯರು ಅವಧಿಯ ಲಕ್ಷಣಗಳಾಗಿ ಕೆಟ್ಟ ಮತ್ತು ನೋವಿನ ಸೆಳೆತವನ್ನು ಅನುಭವಿಸುತ್ತಾರೆ. ಸೀಬೆ ಎಲೆಯ ಸಾರವು ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ


* ಉತ್ತಮ ದೃಷ್ಟಿಗೆ ಸಹಾಯಕ


ಪೇರಳೆ ಹಣ್ಣಿನಲ್ಲಿ ವಿಟಮಿನ್ ಎ ಇದ್ದು ಇದು ವ್ಯಕ್ತಿಯ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪೇರಲವನ್ನು ತಿನ್ನುವುದು ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ ಆದರೆ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ.


ಇದನ್ನೂ ಓದಿ: Health benefits of oranges: ಚಳಿಗಾಲದಲ್ಲಿ ಕಿತ್ತಳೆ ಸೇವನೆಯಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು


* ಮಲಬದ್ಧತೆಯ ನಿವಾರಣೆ


ಇತರ ಹಣ್ಣುಗಳಿಗೆ ಹೋಲಿಸಿದರೆ ಪೇರಲವು ಹೆಚ್ಚಿನ ಪ್ರಮಾಣದ ಉತ್ತಮ ಆಹಾರದ ಫೈಬರ್ ಅನ್ನು ಹೊಂದಿರುತ್ತದೆ. ಮಲಬದ್ಧತೆ ರೋಗಿಗಳಿಗೆ ಪೇರಳೆಯನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಬಹುದು. ಇದು ಮಲಬದ್ಧತೆಯನ್ನು ನಿವಾರಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.


* ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ


ಪೇರಳೆವು ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು ಅದು ಮಧುಮೇಹದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.


(ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ