ಭಾರತೀಯ ಆಹಾರ ಪದ್ಧತಿಯಲ್ಲಿ ಮೊಸರಿಗೆ ಆಗ್ರಾ ಸ್ಥಾನ. ಮೊಸರಿಲ್ಲದೆ ಊಟ ಪೂರ್ಣಗೊಳ್ಳುವುದಿಲ್ಲ. ಹಾಲಿನ ಉತ್ಪನ್ನಗಳಲ್ಲಿ ಯಾವುದೇ ಸೇವಿಸಿದರೂ ಆರೋಗ್ಯಕ್ಕೆ ಲಾಭವೇ. ಮೊಸರು ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಂತೆಯೇ, ಮೊಸರನ್ನು ಸೌಂದರ್ಯ ವರ್ಧಕವಾಗಿಯೂ ಬಳಸಲಾಗುತ್ತದೆ. ಹಾಗಿದ್ದರೆ ಮೊಸರು ಸೇವನೆಯಿಂದ ಯಾವ ಯಾವ ಉಪಯೋಗಗಳಿವೆ ಎಂಬುದನ್ನು ತಿಳಿಯೋಣ


COMMERCIAL BREAK
SCROLL TO CONTINUE READING

1. ಸನ್ ಬರ್ನ್ ಹೋಗಲಾಡಿಸುತ್ತದೆ : ಅತಿಯಾದ ಬಿಸಿಲಿನಿಂದ ಚರ್ಮ ಸುಟ್ಟಂತಾಗಿ ಕಳೆಗುಂದುವುದು ಸಾಮಾನ್ಯ. ಆದರೆ, ಚರ್ಮವನ್ನು ಪುನಃ ಹೊಳೆಯುವಂತೆ ಮಾಡಲು ಮೊಸರು ಬಹಳ ಸಹಕಾರಿ. ಸಂ ಬರ್ನ್ ಆದ ಜಾಗದಲ್ಲಿ ಮೊಸರನ್ನು ಹಚ್ಚಿ 20 ರಿಂದ 25 ನಿಮಿಷದ ನಂತರ ತೊಳೆದರೆ ಚರ್ಮದ ಕಾಂತಿ ಹೆಚುತ್ತದೆ. 



2. ಮೊಡವೆ ನಿವಾರಣೆ : ಮೊಸರಿನಲ್ಲಿ ಆಂಟಿಬ್ಯಾಕ್ಟೇರಿಯಾಲ್ ಮತ್ತು ಆಂಟಿ ಫಂಗಲ್ ಅಂಶಗಳಿರುವುದರಿಂದ ಇದು ಮೊದವೆಗಳನ್ನು ನಿವಾರಿಸುತ್ತದೆ. ಗಟ್ಟಿಯಾದ ಮೊಸರನ್ನು ತೆಗೆದುಕೊಂಡು ಮೊಡವೆ ಇರುವ ಭಾಗದಲ್ಲಿ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ. ಜತೆಗೆ ನಿಯಮಿತವಾಗಿ ಮುಖಕ್ಕೆ ಮೊಸರಿನ ಪ್ಯಾಕ್ ಹಾಕುವುದರಿಂದ ನಿಮ್ಮ ತ್ವಚೆಯು ಸ್ವಚ್ಚವಾಗುವುದಲ್ಲದೆ, ಕಾಂತಿಯುತವಾಗುತ್ತದೆ. 



3. ಉತ್ತಮ ಕಂಡೀಷನರ್: ಕೂದಲಿಗೆ ಮೊಸರು ಹಚ್ಚುವುದರಿಂದ ಇದು ಹೈ ಕಂಡಿಷನರ್ ರೀತಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಮಾಯ್ಚರೈಸಿಂಗ್ ಅಂಶಗಳಿರುವುದರಿಂದ ಒರಟಾದ ಕೂದಲನ್ನು ಮೃದುವಾಗಿಸುತ್ತದೆ. ಒಂದು ಬಟ್ಟಲು ಮೊಸರು ತೆಗೆದುಕೊಂಡು, ಕೂದಲಿನ ಬುಡಕ್ಕೆ ಹಚ್ಚಿ ಶವರ್ ಕ್ಯಾಪ್'ನಿಂದ ಮುಚ್ಚಿ, 20 ನಿಮಿಷ ಹಾಗೇ ಬಿಡಿ. ನಂತರ ನಿಮ್ಮ ಕೂದಲನ್ನು ಸ್ವಲ್ಪ ಶಾಂಪೂ ಬಳಸಿ ತೊಳೆಯಿರಿ. ಮೊಸರಿನಲ್ಲಿ ವಿಟಮಿನ್ ಬಿ5 ಮತ್ತು ಡಿ ಇರುವುದರಿಂದ ನಿಮ್ಮ ಕೂದಲು ಉದುರುವುದೂ ಕಡಿಮೆಯಾಗುತ್ತದೆ. 



4. ಜೀರ್ಣಕ್ರಿಯೆ ಸರಾಗ : ನಿಮ್ಮ ದೇಹದಲ್ಲಿ ಆರೋಗ್ಯಯುತ ಬ್ಯಾಕ್ಟಿರಿಯಾಗಳು ಹೆಚ್ಚಾಗಿ, ಗ್ಯಾಸ್ಟ್ರೋ ಇಮ್ಯೂನಿಟಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. 



5. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ: ಮೊಸರಿನಲ್ಲಿ ಕ್ಯಾಲ್ಷಿಯಂ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿನ ಮೂಳೆಗಳು ಗಟ್ಟಿಗೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಕಾಂಬಿನೇಶನ್ ಇರುವುದರಿಂದ ದೇಹದ ಶಕ್ತಿ ವೃದ್ಧಿಗೆ ಸಹಕಾರಿ.