Pabhojan Gold Tea: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಾಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾವನ್ನು ಜೋರಹಾಟ್ ಹರಾಜು ಕೇಂದ್ರವು ಕೆಜಿಗೆ 1 ಲಕ್ಷ ರೂ.ಗೆ ಮಾರಾಟ ಮಾಡಿದೆ. ಇದು ಈ ಚಹಾಕ್ಕೆ ಸಿಕ್ಕ ಈ ವರ್ಷದ ಗರಿಷ್ಠ ಬೆಲೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜೋರಹಾಟ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು, ಪಾಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಹರಾಜಿಗಿಟ್ಟ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗೋಲ್ಡನ್ ಬಣ್ಣದ ಚಹಾ ತುಂಬಾ ವಿಶೇಷವಾಗಿದೆ
ಪಭೋಜನ್ ಗೋಲ್ಡ್ ಟೀ ಒಂದು ಉತ್ತಮ ಆಫ್ಟರ್ ಟೇಸ್ಟ್ ಜೊತೆಗೆ ಹೊಳಪಾದ ಹಳದಿ ಬಣ್ಣದ ಟೀ ಆಗಿದೆ ಮತ್ತು ಚಹಾ ತೋಟದಿಂದ ಉತ್ತಮವಾದ ಎರಡನೇ ಫ್ಲ್ಯಾಶ್ ಯುಕ್ತಿಗಳಿಂದ ತಯಾರಿಸಲಾಗುತ್ತದೆ. ಈ ಕಾರಣದಿಂದಾಗಿ ಚಹಾವು ಗೋಲ್ಡನ್ ಬಣ್ಣದ್ದಾಗಿರುತ್ತದೆ ಮತ್ತು ಅದರ ಬಣ್ಣವು ಹೊಳಪಿನಿಂದ ಹೊರಹೊಮ್ಮುತ್ತದೆ.


ಈ ಕುರಿತು ಮಾತನಾಡಿರುವ ಇಸಾಹ್ ಟೀ ಸಿಇಒ, ಬಿಜಿತ್ ಶರ್ಮಾ,  ಇದು ತಮ್ಮ ಗ್ರಾಹಕರಿಗೆ ಅಸ್ಸಾಂನ ಅತ್ಯುತ್ತಮ ಚಹಾ ಮಿಶ್ರಣಗಳಲ್ಲಿ ಒಂದನ್ನು ಒದಗಿಸಲು  ಈ ಚಹಾ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. 


ಚಹಾ ಪ್ರಿಯರಿಗೆ ವಿಶೇಷ
ಇದೊಂದು ಅಪರೂಪದ ಚಹಾ ಆಗಿದ್ದು, ಚಹಾ ಪ್ರಿಯರಿಗೆ ಇದು ಉತ್ತಮ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.  ನಮ್ಮ ಗ್ರಾಹಕರು ವಿಶ್ವಾದ್ಯಂತ ಹರಡಿದ್ದಾರೆ ಮತ್ತು ಚಹಾದ ವೈವಿಧ್ಯತೆ ಮತ್ತು ರುಚಿಯ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ನಮಗೆ ಅವರಿಗೆ ಅಸ್ಸಾಂನ ನಿಜವಾದ ಚಹಾದ ರುಚಿಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಲು ನಾವು ಸಂತೋಷಪಡುತ್ತೇವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Anti-Aging Diet: 35 ಪ್ಲಸ್ ಬಳಿಕವೂ ಸ್ವೀಟ್ 16 ರಂತೆ ಕಾಣಿಸಿಕೊಳ್ಳಬೇಕೆ? ಈ ಉಪಾಯ ಅನುಸರಿಸಿ ನೋಡಿ!


ದಾಖಲೆ ಬೆಲೆ ಲಭಿಸಿದೆ
ಹರಾಜು ಪ್ರಕ್ರಿಯೆಯ ಬಳಿಕ ಮಾತನಾರಿರುವ ಪಾಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಒಡತಿ ರಾಖಿ ದತ್ತಾ ಸೈಕಿಯಾ, “ನಾವು ಈ ಅಪರೂಪದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ ಮತ್ತು ಅದಕ್ಕೆ ಸಿಕ್ಕ ದಾಖಲೆ ಮೀರುವ ಮೊತ್ತದಿಂದ ಸಾಕಷ್ಟು ಖುಷಿಯಾಗಿದ್ದೇವೆ. ಇದು ಇತಿಹಾಸ ಸೃಷ್ಟಿಸಿದೆ. ನಾವು ಗಳಿಸಿದ ಬೆಲೆಯಿಂದ ಅಸ್ಸಾಂ ಚಹಾ ಉದ್ಯಮವು ತಾನು ಕಳೆದುಹೋದ ಖ್ಯಾತಿಯನ್ನು ಮರಳಿ ಪಡೆಯಲು ಸಹಾಯ ಮಾಡಲಿದೆ" ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Diabetes Test: ಮಧುಮೇಹ ತಪಾಸಣೆಯ ವೇಳೆ ಈ ತಪ್ಪು ಮಾಡಬೇಡಿ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ!


ಈ ವಿಧದ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾಕ್ಕೆ ವಿವೇಚನಾಶೀಲ ಗ್ರಾಹಕರು, ಚಹಾ ಅಭಿಜ್ಞರು ಮತ್ತು ಖರೀದಿದಾರರಿಂದ ಹೆಚ್ಚಿನ ಬೇಡಿಕೆಯ ನಂತರ ಈ ತಳಿಯನ್ನು ಮೊದಲ ಬಾರಿಗೆ ತಯಾರಿಸಲಾಗಿದೆ ಎಂದು ಸೈಕಿಯಾ ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.