ಬೆಂಗಳೂರು : ಮಧುಮೇಹವು ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಕಾಯಿಲೆಯಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕಾದರೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಅಗತ್ಯ. ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಡಲು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವನ್ನು ಸೇವಿಸುವುದರೊಂದಿಗೆ ಔಷಧಿಗಳ ಜೊತೆಗೆ ನಿಮ್ಮ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಿಸುವ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಇಲ್ಲಿ ನಾವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾದ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಹೇಳಲಿದ್ದೇವೆ. ಈ ಪುಡಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಪ್ರತಿದಿನ ಒಂದು ಚಮಚ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪುಡಿಗಳನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡಾ ಬೀರುವುದಿಲ್ಲ.  


ಇದನ್ನೂ ಓದಿ : ಶುಗರ್ ಸಮಸ್ಯೆ ಇರುವವರು ಈ ಪಾನೀಯಗಳನ್ನು ಸೇವಿಸಿ ನಿಶ್ಚಿಂತೆಯಾಗಿರಬಹುದು !


ಚಕ್ಕೆ ಪುಡಿ :
 ಚಕ್ಕೆ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.  ಚಕ್ಕೆಯನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ನೀರಿನಲ್ಲಿ ಕಲಸಿ ಸೇವಿಸಬಹುದು. 


 ನೇರಳೆ ಹಣ್ಣಿನ ಬೀಜಗಳು :
 ನೇರಳೆ ಹಣ್ಣಿನ ಬೀಜಗಳನ್ನು ತೊಳೆದು ಒಣಗಿಸಿ, ಬೀಜದ ಮೇಲ್ಭಾಗವನ್ನು ತೆಗೆದುಹಾಕಿ. ನಂತರ ಒಳಗಿನ ಬೀಜವನ್ನು ಪುಡಿಮಾಡಿ  ಇಟ್ಟುಕೊಳ್ಳಿ. ಈ ಪುಡಿಯನ್ನು  ನೀರಿನೊಂದಿಗೆ ಬೆರೆಸಿ ಸವಿಯಬಹುದು. 


 ನುಗ್ಗೆ ಸೊಪ್ಪಿನ ಪುಡಿ : 
 ನುಗ್ಗೆ ಸೊಪ್ಪು, ಅದರ ಹೂವುಗಳು,  ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಇದು ಅತ್ಯುತ್ತಮ ಮೂಲಿಕೆಯಾಗಿದೆ.  ನುಗ್ಗೆ ಸೊಪ್ಪನ್ನು ಒಣಗಿಸಿಪುಡಿ ಮಾಡಿ ಇಟ್ಟುಕೊಳ್ಳಿ, ನಿತ್ಯ  ಈ ಪುಡಿಯನ್ನು ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಮತ್ತ ಏರಿಕೆಯಾಗುವುದೇ ಇಲ್ಲ. 
 
ಇದನ್ನೂ ಓದಿ : Health Tips: ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!


ಮೆಂತ್ಯೆ ಬೀಜದ ಪುಡಿ :
ಮೆಂತ್ಯೆಯನ್ನು ಪುಡಿಮಾಡಿ  ಇಟ್ಟುಕೊಂಡು ಅದನ್ನು ನಿತ್ಯವೂ ಸೇವಿಸಿ.  ಮೆಂತ್ಯ ಬೀಜಗಳು ಇನ್ಸುಲಿನ್ ಹೆಚ್ಚಿಸುವ ಕೆಲಸ ಮಾಡುತ್ತದೆ.


ಸಾಸಿವೆ ಪುಡಿ :
ಸಾಸಿವೆ ಕಾಳಿನ ಪುಡಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಯುರ್ವೇದ ಔಷಧವಾಗಿಯೂ ಕೆಲಸ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿರುವುದರಿಂದ, ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ನೆಲ್ಲಿ ಕಾಯಿ ಪುಡಿ:
ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿಯು ಕ್ರೋಮಿಯಂನಲ್ಲಿಯೂ ಸಮೃದ್ಧವಾಗಿದೆ. ಈ ಖನಿಜವು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ನೆಲ್ಲಿಕಾಯಿ ಇನ್ಸುಲಿನ್ ಸ್ರವಿಸುವಿಕೆಯನ್ನು ಸಮತೋಲನಗೊಳಿಸುತ್ತದೆ. ನೆಲ್ಲಿಕಾಯಿಯಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣವು ಇನ್ಸುಲಿನ್ ಹೀರಿಕೊಳ್ಳಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಹಸಿರು ಕಾಫಿ ಮತ್ತು ಅದರ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?


ಸೇವಿಸುವ ಬಗೆ ಹೇಗೆ ? :
ಎಲ್ಲಾ ಪುಡಿಗಳನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಚಮಚ ಬೆಚ್ಚಗಿನ ನೀರಿನೊಂದಿಗೆ ಸೇವಿಸಿ. ನೀವು ಬೇಕಾದರೆ ಒಂದೊಂದೇ ಪುಡಿಯನ್ನು ಪ್ರತ್ಯೇಕವಾಗಿಯೂ ಸೇವಿಸಬಹುದು.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.