Mulberry Health Benefits: ಮಲ್ಬೆರಿ ಅಥವಾ ಕನ್ನಡದಲ್ಲಿ ಹಿಪ್ಪುನೇರಳೆ ಕರೆಯಲಾಗುವ ಈ ಹಣ್ಣು ನೋಡಲು ಒಂದು ಚಿಕ್ಕ, ರಸಭರಿತ ಮತ್ತು ಟೇಸ್ಟಿ ಹಣ್ಣಾಗಿದೆ, ಇದು ಕೆಂಪು, ಕಪ್ಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಈ ಹಣ್ಣು ಹೇರಳವಾಗಿ ಏಪ್ರಿಲ್ ತಿಂಗಳಿನಲ್ಲಿ ಅಂದರೆ ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭದ ಮೊದಲು ಹೇರಳ ಪ್ರಮಾಣದಲ್ಲಿ ಬೆಳೆಯುತ್ತದೆ. ನಿಮ್ಮ ಹತ್ತಿರ ಎಲ್ಲೋ ಹಿಪ್ಪುನೇರಳೆ ಮರವಿದ್ದರೆ, ಮಾಗಿದ ಮಲ್ಬರಿಗಳು ಮುರಿದು ನೆಲದ ಮೇಲೆ ಚದುರಿಹೋಗಿರುವುದನ್ನು ನೀವು ನೋಡಬಹುದು.


COMMERCIAL BREAK
SCROLL TO CONTINUE READING

ಈ ಹಣ್ಣನ್ನು ತಿನ್ನಲು ರುಚಿಯಾಗಿರುತ್ತದೆ, ಇದು ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಮಲ್ಬರಿಯ ಪೋಷಕಾಂಶಗಳ ಬಗ್ಗೆ ನಾವು ಮಾತನಾಡುವುದಾದರೆ, ಈ ಹಣ್ಣು ವಿಟಮಿನ್ ಸಿ ಮತ್ತು ಕೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಅಗತ್ಯ ಪೋಷಕಾಂಶಗಳಿಗೆ ಉಗ್ರಾಣವಾಗಿದೆ.


ಮಲ್ಬೆರಿ ಫೈಬರ್ ಮತ್ತು ಫ್ಲೇವನಾಯ್ಡ್ಗಳಲ್ಲಿ ಸಮೃದ್ಧವಾಗಿದೆ. ಈ ಹಣ್ಣನ್ನು ಸೇವಿಸುವುದರಿಂದ ಉರಿಯೂತವನ್ನು ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಹುಳಿ-ಸಿಹಿ ಹಣ್ಣಿನ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮಲ್ಬೆರಿ ಎಂದರೇನು?
ಮಲ್ಬೆರಿ (ಮೊರಸ್ ಆಲ್ಬಾ ಅಥವಾ ಮಲ್ಬೆರಿ) ಒಂದು ಮರವಾಗಿದೆ ಮತ್ತು ಮಲ್ಬೆರಿ ಎಂದು ಕರೆಯಲ್ಪಡುವ ಸಣ್ಣ, ರಸಭರಿತವಾದ, ಸೂಕ್ಷ್ಮವಾದ ಕೆಂಪು-ಕಪ್ಪು ಅಥವಾ ಬಿಳಿ ಹಣ್ಣುಗಳನ್ನು ಇದು ನೀಡುತ್ತದೆ.  ಈ ಮರಗಳು ಏಷ್ಯಾ, ಯುರೋಪ್ ಮತ್ತು ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನೀವು ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದರೆ ಈ ಹಣ್ಣನ್ನು ಖಂಡಿತಾ ತಿನ್ನಲೇಬೇಕು. ಈ ಹಣ್ಣು ಮಾವು, ಸೇಬು ಅಥವಾ ಸೀಬೆ ಹಣ್ಣಿನಷ್ಟು ಪ್ರಸಿದ್ಧವಾಗಿಲ್ಲ, ಆದರೆ ಇದರ ಪ್ರಯೋಜನಗಳು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು.


ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ
ನೀವು ಮಧುಮೇಹಿಗಳಾಗಿದ್ದರೆ, ಈ ಹಣ್ಣು ನಿಮಗೆ ಉತ್ತಮ ಆಹಾರವಾಗಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎನ್ಸಿಬಿಐನಲ್ಲಿ ಪ್ರಕಟಗೊಂಡ ಸಂಶೋಧನೆಯ ಪ್ರಕಾರ ಈ ಹಣ್ಣಿನಲ್ಲಿರುವ ಕೆಲವು ರಾಸಾಯನಿಕಗಳು ಟೈಪ್-2 ಮಧುಮೇಹದ ಚಿಕಿತ್ಸೆಗೆ ಬಳಸುವ ಔಷಧಿಗಳಂತೆಯೇ ಇವೆ ಎನ್ನಲಾಗಿದೆ.


ಜೀರ್ಣಕ್ರಿಯೆಯನ್ನು ಬಲಪಡಿಸಿ ಆರೋಗ್ಯಕರವಾಗಿರಿಸುತ್ತದೆ
ಉತ್ತಮ ಪ್ರಮಾಣದ ಫೈಬರ್ ಮಲ್ಬೆರಿಯಲ್ಲಿ ಕಂಡುಬರುತ್ತದೆ, ಇದು ಜೀರ್ಣಕ್ರಿಯೆಯ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ಮಲವನ್ನು ಮೃದುಗೊಳಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ಸೆಳೆತ ನಿವಾರಣೆಯಾಗುತ್ತವೆ.


ರಕ್ತ ಪರಿಚಲನೆ ಸುಧಾರಿಸುತ್ತದೆ
ಮಲ್ಬೆರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇವು ರಕ್ತನಾಳಗಳ ಕಾರ್ಯನಿರ್ವಹಣೆಯನ್ನು ವಿಸ್ತರಿಸುವ ಮೂಲಕ ಸುಧಾರಿಸುತ್ತದೆ, ಇದರಿಂದಾಗಿ ರಕ್ತದ ಹರಿವನ್ನು ಸುಧಾರಿಸುತ್ತವೇ. ಹಿಪ್ಪುನೇರಳೆ ಕಬ್ಬಿಣದಲ್ಲಿ ಸಮೃದ್ಧವಾಗಿದೆ ಮತ್ತು ಕಬ್ಬಿಣದ ಉಪಸ್ಥಿತಿಯಿಂದಾಗಿ ಇದು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಇತ್ತೀಚೆಗೆ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಮಲ್ಬೆರಿಗಳು ಆಂಥೋಸಯಾನಿನ್‌ಗಳಿಂದ ಸಮೃದ್ಧವಾಗಿವೆ, ಇವು ಕ್ಯಾನ್ಸರ್ ಕೋಶಗಳಿಗೆ ಕೊಳ್ಳಿ ಇಡುತ್ತವೆ. ಇವು  ರೆಸ್ವೆರಾಟ್ರೊಲ್ ಅನ್ನು ಸಹ ಹೊಂದಿವೆ ಮತ್ತು ಅವು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದರಿಂದಾಗಿ ಕರುಳಿನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಥೈರಾಯ್ಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.


ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಕಪ್ಪು-ಕಪ್ಪು ಸಿಹಿ ಮಲ್ಬೆರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಮತ್ತು ಅಗ್ಗದ ಮಾರ್ಗವಾಗಿದೆ. ಮಲ್ಬೆರಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ ಮತ್ತು ಈ ಹಣ್ಣು ರೋಗನಿರೋಧಕ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸಲು ಕಾರಣವಾಗಿದೆ.


ಇದನ್ನೂ ಓದಿ-Health Tips: ಹೊಕ್ಕುಳದಲ್ಲಿ ಎರಡು ಹನಿ ಈ ಎಣ್ಣೆ ಹಾಕಿ ಮ್ಯಾಜಿಕ್ ನೋಡಿ!


ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಕಬ್ಬಿಣ ಇವು ನಮ್ಮ ದೇಹದಲ್ಲಿ  ಸದೃಢ ಮೂಳೆಗಳಿಗೆ ಅವಶ್ಯಕವಾಗಿವೆ. ಹಿಪ್ಪುನೇರಳೆ ಈ ಎಲ್ಲದರಲ್ಲೂ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತದಂತಹ ಮೂಳೆ ಅಸ್ವಸ್ಥತೆಗಳನ್ನು ತಡೆಯುತ್ತದೆ ಮತ್ತು ಮೂಳೆಗಳನ್ನು ಒಳಗಿನಿಂದ ಬಲಪಡಿಸುತ್ತದೆ.


ಇದನ್ನೂ ಓದಿ-Bad Cholesterol: ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತೆ ಈ ಡ್ರಿಂಕ್!


ಮಲ್ಬೆರಿ ತಿನ್ನುವ ಇತರ ಪ್ರಯೋಜನಗಳು
ಹಿಪ್ಪುನೇರಳೆಯು ಯಕೃತ್ತನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಮೆದುಳನ್ನು ಆರೋಗ್ಯವಾಗಿಡಲು ಮತ್ತು ಆಲ್ಝೈಮರ್ ಅನ್ನು ದೂರವಿಡಲು ಸಹಕಾರಿಯಾಗಿದೆ. ಹಿಪ್ಪುನೇರಳೆಯಲ್ಲಿರುವ ಫ್ಲೇವನಾಯ್ಡ್‌ಗಳ ಕಾರಣ, ಇದು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Weight Loss Tips: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಲು ಈ ನೀರು ವರದಾನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.