ಈ ರೋಗಲಕ್ಷಣಗಳು ದೇಹದಲ್ಲಿ ಫೈಬರ್ ಕೊರತೆಯ ಸೂಚನೆಯೂ ಆಗಿರಬಹುದು!
Fiber Deficiency Symptoms: ಫೈಬರ್ ಜೀರ್ಣವಾಗದ ಕಾರ್ಬೋಹೈಡ್ರೇಟ್ ಆಗಿದ್ದು ಅದು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಫೈಬರ್ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Fiber Deficiency Symptoms: ಪ್ರತಿ ವ್ಯಕ್ತಿಗೂ ಆರೋಗ್ಯವಂತರಾಗಿರಲು ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳ ಹೊರತಾಯಿ ಫೈಬರ್ ಕೂಡ ಬಹಳ ಮುಖ್ಯ. ಉದರದ ಆರೋಗ್ಯಕ್ಕೆ ಸಂಬಂಧಿಸಿದಂತೆ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಫೈಬರ್ ಕೊರತೆಯು ಅಜೀರ್ಣ, ಮಲಬದ್ಧತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ, ನಮ್ಮ ದೈನಂದಿನ ಆಹಾರದಲ್ಲಿ ಫೈಬರ್ ರಿಚ್ ಆಹಾರಗಳ ಸೇವನೆಯೂ ಬಹಳ ಮುಖ್ಯ.
ಸಾಮಾನ್ಯವಾಗಿ, ನಮ್ಮ ದೇಹದಲ್ಲಿನ ಕೆಲವು ರೋಗ ಲಕ್ಷಣಗಳು ದೇಹದಲ್ಲಿ ಫೈಬರ್ ಕೊರತೆಯ ಸಂಕೇತವೂ (Fiber Deficiency Symptoms) ಆಗಿರಬಹುದು. ಅಂತಹ ಸೂಚನೆಗಳು ಯಾವುವು ಎಂದು ತಿಳಿಯೋಣ...
ಮಲಬದ್ಧತೆ ಸಮಸ್ಯೆ:
ನಮ್ಮಲ್ಲಿ ಕೆಲವರಿಗೆ ಮಲಬದ್ಧತೆ ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಈ ಸಮಸ್ಯೆಗೆ ಫೈಬರ್ ಕೊರತೆಯೇ ಪ್ರಮುಖ ಕಾರಣವಾಗಿದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ನಾರಿನಾಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.
ಇದನ್ನೂ ಓದಿ- ಯೂರಿಕ್ ಆಸಿಡ್ ಕರಗಿಸಿ ದೇಹದಿಂದ ಹೊರಹಾಕಲು ಜೇನು ತುಪ್ಪದೊಂದಿಗೆ ಈ ವಸ್ತು ಬೆರೆಸಿ ತಿನ್ನಿ !
ಹಸಿವು ಹೆಚ್ಚಾಗುವುದು:
ನೀವು ಏನೇ ಸೇವಿಸಿದರೂ ಕೂಡ ಪದೇ ಪದೇ ಹಸಿವಾಗುತ್ತಿದ್ದರೆ ಅಥವಾ ತುಂಬಾ ಬೇಗ ಹಸಿವಾಗುತ್ತಿದ್ದರೆ ಇದೂ ಸಹ ನಿಮ್ಮ ಆಹಾರದಲ್ಲಿ ಫೈಬರ್ ಕೊರತೆಯ ಸಂಕೇತವಾಗಿದೆ.
ತೂಕ ಹೆಚ್ಚಾಗುವುದು:
ನಿರಂತರವಾಗಿ ಫೈಬರ್ ಕೊರತೆಯಿರುವ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು.
ಕೊಲೆಸ್ಟ್ರಾಲ್ ಹೆಚ್ಚಳ:
ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಿದ್ದರೆ ಅದು ಸಹ ನಿಮ್ಮ ಆಹಾರದಲ್ಲಿ ಫೈಬರ್ ಕೊರತೆಯ ಸೂಚನೆಯಾಗಿರುತ್ತದೆ. ವಾಸ್ತವವಾಗಿ, ಫೈಬರ್ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಫೈಬರ್ ಕಡಿಮೆ ಇರುವ ಆಹಾರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಇದನ್ನೂ ಓದಿ- Kidney Stone: ನಿಮ್ಮ ಈ ಅಭ್ಯಾಸಗಳಿಂದ ಹೆಚ್ಚುತ್ತೆ ಕಿಡ್ನಿ ಸ್ಟೋನ್ ಅಪಾಯ
ವಾಕರಿಕೆ ಸಮಸ್ಯೆ:
ನಿತ್ಯ ಮುಂಜಾನೆ ಎದ್ದ ಕೂಡಲೇ ನಿಮಗೆ ವಾಂತಿ, ವಾಕರಿಕೆಯಂತಹ ಸಮಸ್ಯೆ ಕಾಡುತ್ತಿದ್ದರೆ ಇದು ಕೂಡ ನಿಮ್ಮ ದೇಹದಲ್ಲಿ ಫೈಬರ್ ಕೊರತೆಯನ್ನು ಸೂಚಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.