Jaundice Control Tips: ದೇಶಾದ್ಯಂತ ಮಳೆಗಾಲ ಆರಂಭವಾಗಿದೆ. ಈ ಋತುವಿನಲ್ಲಿ ತಿನ್ನುವುದು ಮತ್ತು ಕುಡಿಯುವ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಾಮಾಲೆ ರೋಗವು ಈ ಋತುವಿನಲ್ಲಿ ಹೆಚ್ಚಿನ ಜನರನ್ನು ಗುರಿಯಾಗಿಸುತ್ತದೆ. ಈ ಅಪಾಯಕಾರಿ ಕಾಯಿಲೆಯಲ್ಲಿ, ವ್ಯಕ್ತಿಯ ಕಣ್ಣುಗಳು ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದೇ ವೇಳೆ, ದೇಹದ ಅನೇಕ ಬಿಳಿ ಭಾಗಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ವ್ಯಕ್ತಿಯ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಾಮಾಲೆಯನ್ನು ಜಾಂಡಿಸ್ ಎಂದೂ ಕರೆಯುತ್ತಾರೆ. ಈ ರೋಗದಲ್ಲಿ, ಬಿಲಿರುಬಿನ್ ರಕ್ತದಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲ ದೇಹದಲ್ಲಿ ರಕ್ತದ ಕೊರತೆಯೂ ಎದುರಾಗುತ್ತದೆ.


COMMERCIAL BREAK
SCROLL TO CONTINUE READING

ಇಂತಹ ಪರಿಸ್ಥಿತಿಯಲ್ಲಿ, ಕಾಮಾಲೆ ರೋಗ ಎದುರಿಸುತ್ತಿರುವ ಯಾವುದೇ ಓರ್ವ ವ್ಯಕ್ತಿ ತನ್ನ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ತನ್ಮೂಲಕ ಈ ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಳ್ಳಬಹುದು. ಕಾಮಾಲೆಯಲ್ಲಿ ನೀವು ತಿನ್ನಬಹುದಾದ ಮತ್ತು ತಿನ್ನಬಾರದ  ಕೆಲವು ಆಹಾರಗಳ ಹೆಸರನ್ನು ಇಂದು ನಾವು ನಿಮಗೆ ಹೇಳುತ್ತೇವೆ, ಅವುಗಳನ್ನು ನೀವು ನಿಮ್ಮ ದಿನನಿತ್ಯದ ಡೈಟ್ ನಲ್ಲಿ ಅನುಸರಿಸಬೇಕು. ಈ ಆಹಾರಗಳಿಂದ ಯಕೃತ್ತಿನ ಮೇಲೂ ಕೂಡ ಕೆಟ್ಟ ಪರಿಣಾಮ ಉಂಟಾಗಲೂ ಪ್ರಾರಂಭಿಸುತ್ತದೆ. ಆದ್ದರಿಂದ, ಜಾಂಡೀಸ್ನಲ್ಲಿ ಯಾವ ತರಕಾರಿಗಳನ್ನು ಸೇವಿಸಬಾರದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 


1. ಎಣ್ಣೆ, ಮಸಾಲೆ, ಜಿಡ್ಡಿನಿಂದ ಕೂಡಿದ ಆಹಾರ ಪದಾರ್ಥ
ಆರೋಗ್ಯ ತಜ್ಞರ ಅಭಿಪ್ರಾಯದ ಪ್ರಕಾರ, ಯಾರಿಗಾದರೂ ಕಾಮಾಲೆ ಇದ್ದರೆ, ಮೊದಲನೆಯದಾಗಿ ಅವರು ಜಿಡ್ಡಿನ, ಕರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಇಂತಹ  ಆಹಾರವನ್ನು ನಿಮ್ಮ ಆಹಾರದಿಂದ ತಕ್ಷಣವೇ ಹೊರಗಿಡಬೇಕು. ಏಕೆಂದರೆ ಇದು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ, ಇದು ಕಾಮಾಲೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯಕವಾಗುವುದಿಲ್ಲ. ಹೀಗಾಗಿ ಆದಷ್ಟು ಸರಳ ಆಹಾರವನ್ನು ಸೇವಿಸಲು ಪ್ರಯತ್ನಿಸಿ.


2. ಚಹಾ ಮತ್ತು ಕಾಫಿಯನ್ನು ತಪ್ಪಿಸಿ
ಚಹಾ ಮತ್ತು ಕಾಫಿ ಕೆಫೀನ್‌ನ ಉತ್ತಮ ಮೂಲಗಲಾಗಿವೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ನೀವು ಅವುಗಳನ್ನು ಅತಿಯಾಗಿ ಸೇವಿಸಿದರೆ, ಅದು ಜಾಂಡೀಸ್ ರೋಗಿಗಳಿಗೆ ಹಾನಿಕಾರಕವಾಗಿದೆ. ಹೀಗಾಗಿ ಕಾಮಾಲೆ ರೋಗಿಗಳು ಇದನ್ನು ತಪ್ಪಿಸಬೇಕು.


3. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ
ಜಾಂಡೀಸ್ ಅನ್ನು ತ್ವರಿತವಾಗಿ ತೊಡೆದುಹಾಕಲು, ಇನ್ನೂ ಒಂದು ಕೆಲಸವನ್ನು ಮಾಡುವುದು ಅವಶ್ಯಕ, ಅದೇನೆಂದರೆ  ಆಹಾರದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು. ಹೌದು, ರಿಫೈನ್ಡ್ ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಕಾರ್ನ್ ಸಿರಪ್ ಕಂಡುಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರ ಸೇವನೆಯಿಂದ ಯಕೃತ್ತಿಗೆ ಹಾನಿ ಮತ್ತು ಅನಗತ್ಯ ಕೊಬ್ಬು ಸಂಗ್ರಹ ಸಂಗ್ರಹಕ್ಕೆ ಕಾರಣವಾಗುತ್ತದೆ. ಹೀಗಾಗಿ ಜಾಂಡೀಸ್ ರೋಗಿಗಳು ಕೆಲವೇ ಸಿಹಿ ಪದಾರ್ಥಗಳನ್ನು ಸೇವಿಸಬೇಕು.


ಇದನ್ನೂ ಓದಿ-Health Tips: ಮಧುಮೇಹ ನಿಯಂತ್ರಣದ ಜೊತೆಗೆ ಹೃದ್ರೋಗದಿಂದ ಕೂಡ ರಕ್ಷಿಸುತ್ತದೆ ಈ ತರಕಾರಿ!


4. ಬಾಳೆಹಣ್ಣು ಸೇವನೆ ಬೇಡ
ಹಣ್ಣುಗಳ ಸೇವನೆಯಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ನೀವೂ ಕೂಡ ಭಾವಿಸುತ್ತಿದ್ದಾರೆ, ಅದು ತಪ್ಪು. ಕಾಮಾಲೆಯಲ್ಲಿ ಬಾಳೆಹಣ್ಣು ತಿನ್ನುವುದನ್ನು ನಿಷೇಧಿಸಲಾಗಿದೆ. ವಾಸ್ತವದಲ್ಲಿ, ಬಾಳೆಹಣ್ಣಿನಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ. ಈ ಕಾರಣದಿಂದಾಗಿ, ಜೀರ್ಣಕ್ರಿಯೆಯ ಪ್ರಕ್ರಿಯೆಯು ಹದಗೆಡುತ್ತದೆ. ಮತ್ತೊಂದೆಡೆ, ಜಾಂಡೀಸ್ನಲ್ಲಿನ ದೌರ್ಬಲ್ಯದಿಂದಾಗಿ, ಜೀರ್ಣಕ್ರಿಯೆಯು ಆಗಲೇ ತುಂಬಾ ದುರ್ಬಲವಾಗಿರುತ್ತದೆ.  ಅಷ್ಟೇ ಅಲ್ಲ, ಜಾಂಡೀಸ್ ನಲ್ಲಿ ಅಪಾಯಕಾರಿಯಾದ ಬಾಳೆಹಣ್ಣನ್ನು ಸೇವಿಸುವುದರಿಂದ ರೋಗಿಯ ದೇಹದಲ್ಲಿ ಬಿಲರುಬ್ಬಿನ್ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.


ಇದನ್ನೂ ಓದಿ-Cheese Side Effects: ನೀವೂ ಪಿಜ್ಜಾ-ಬರ್ಗರ್ ಜೊತೆಗೆ ಹೆಚ್ಚುವರಿ ಚೀಸ್ ಸೇವಿಸುತ್ತೀರಾ? ಈ ಸುದ್ದಿ ಓದಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.