How  to Avoid Kidney Stone : ಕಿಡ್ನಿ ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಅಂಗವಾಗಿದೆ. ನಮ್ಮ ರಕ್ತವನ್ನು ಫಿಲ್ಟರ್ ಮಾಡುವುದು, ದೇಹದ ಕಲ್ಮಷಗಳನ್ನು ದೇಹದಿಂದ ಹೊರ ತೆಗೆದುಹಾಕುವುದು ಮತ್ತು ಕೆಲವು ಹಾರ್ಮೋನುಗಳನ್ನು ಉತ್ಪಾದಿಸುವುದು ಇದರ ಕಾರ್ಯವಾಗಿದೆ. ನಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಂಡಾಗ, ಕಿಡ್ನಿ ತನ್ನ ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಕಿಡ್ನಿಯನ್ನು ಆರೋಗ್ಯವಾಗಿಡಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಆದರೆ, ನಾವು ಅಡುಗೆಯಲ್ಲಿ ಬಳಸುವ ಮೂರು ವಸ್ತುಗಳೇ ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. 


COMMERCIAL BREAK
SCROLL TO CONTINUE READING

ಬಿಳಿ ಉಪ್ಪು : 
ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು ನಮ್ಮ ಮೂತ್ರಪಿಂಡದ ಆರೋಗ್ಯವನ್ನು ಹಾಳು ಮಾಡುತ್ತದೆ.ಉಪ್ಪು ಸೋಡಿಯಂನ ದೊಡ್ಡ ಮೂಲವಾಗಿದೆ. ಹಾಗಾಗಿ ಇದು ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಆಹಾರದಲ್ಲಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು.


ಇದನ್ನೂ ಓದಿ : ಪೇರಲ ಹಣ್ಣನ್ನು ಈ ಆರೋಗ್ಯ ಸಮಸ್ಯೆಯಿದ್ದರೆ ಸೇವಿಸಬಾರದು


ಸಕ್ಕರೆ : 
ಅತಿಯಾದ ಸಕ್ಕರೆಯ ಸೇವನೆಯು ನಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು 180mg/dl ಅನ್ನು ಮೀರಿದಾಗ, ನಮ್ಮ ಮೂತ್ರಪಿಂಡಗಳು ಅದನ್ನು ಫಿಲ್ಟರ್ ಮಾಡಲು ಕಷ್ಟವಾಗುತ್ತದೆ. ಇದು ಭವಿಷ್ಯದಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.


ಬೀಜ ಇರುವ ತರಕಾರಿಗಳು : 
ನಮ್ಮ ಅಡುಗೆಮನೆಯಲ್ಲಿ ಸಣ್ಣ ಬೀಜಗಳನ್ನು ಹೊಂದಿರುವ ಅನೇಕ ತರಕಾರಿಗಳನ್ನು ನಾವು ಬಳಸುತ್ತೇವೆ. ಟೊಮೆಟೊ, ಬದನೆ, ಉದ್ದಿನಬೇಳೆ, ಮುಂತಾದ ಆಹಾರಗಳು ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. 


ಮೂತ್ರಪಿಂಡದ ಕಲ್ಲುಗಳನ್ನು ತೊಡೆದುಹಾಕಲು ಮನೆಮದ್ದುಗಳು : 
 ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿ : 

ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು, ನಿತ್ಯ 6 ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕು. ನೈಸರ್ಗಿಕವಾಗಿ ಕಲ್ಲುಗಳನ್ನು ತೆಗೆದುಹಾಕುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ.


ಇದನ್ನೂ ಓದಿ : Uric Acid Home Remedy: ಯೂರಿಕ್ ಆಸಿಡ್ ಕಡಿಮೆ ಮಾಡುತ್ತದೆ ಕೇವಲ 10 ರೂಪಾಯಿಗೆ ಸಿಗುವ ಈ ವಸ್ತು !


ತುಳಸಿ  : 
ಅಸಿಟಿಕ್ ಆಮ್ಲವು ತುಳಸಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು  ಕಿಡ್ನಿ ಸ್ಟೋನ್ ಅನ್ನು ಒಡೆಯಲು ಸಹಾಯ ಮಾಡುತ್ತದೆ. ಇದರ ಸೇವನೆಯು ಕಿಡ್ನಿ ಸ್ಟೋನ್ ನೋವಿನಿಂದ ಕೂಡಾ ನಿಮಗೆ ಪರಿಹಾರವನ್ನು ನೀಡುತ್ತದೆ.


ಆಪಲ್ ವಿನೆಗರ್ : 
ಮೂತ್ರಪಿಂಡಗಳ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಆಪಲ್ ಸೈಡರ್ ವಿನೆಗರ್ ಬಹಳ ಪರಿಣಾಮಕಾರಿಯಾಗಿದೆ. ಆಪಲ್ ವಿನೆಗರ್‌ನಲ್ಲಿ ಕಂಡುಬರುವ ಸಿಟ್ರಿಕ್ ಆಮ್ಲ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು  ಸಹಾಯ ಮಾಡುತ್ತದೆ. 


ವೀಟ್ ಗ್ರಾಸ್ :
ವೀಟ್ ಗ್ರಾಸ್ ನಮ್ಮ ಮೂತ್ರದ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳು ಹೊರಬರಲು ಹೆಚ್ಚು ಸುಲಭವಾಗುತ್ತದೆ. ವೀಟ್ ಗ್ರಾಸ್ ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಮೂತ್ರನಾಳದಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.