ವಾಷಿಂಗ್ಟನ್: ದೇಹದ ತೂಕವನ್ನು ಯಶಸ್ವಿಯಾಗಿ ಇಳಿಸಲು ವ್ಯಾಯಾಮ ಮಾಡುವ ಸಮಯವೂ ಬಹಳ ಮುಖ್ಯವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. 


COMMERCIAL BREAK
SCROLL TO CONTINUE READING

ಯಶಸ್ವಿಯಾಗಿ ದೇಹದ ತೂಕ ಇಳಿಸಿದ ಮತ್ತು ಅತಿಯಾದ, ಸಮತೋಲಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ 375 ವಯಸ್ಕರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಪ್ರತಿನಿತ್ಯ ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡಿದ್ದಾಗಿ ತಿಳಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಮುಂಜಾನೆ ವ್ಯಾಯಾಮ ಮಾಡಿದವರಾಗಿದ್ದಾರೆ.


ಇದೇ ವೇಳೆ, ಜನರು ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ನಿರಂತರವಾಗಿ ವ್ಯಾಯಾಮ ಮಾಡುತ್ತಾರೆಯೇ ಎಂಬುದನ್ನು ಹೊರತುಪಡಿಸಿ ನಿರ್ದಿಷ್ಟ ಸಮಯದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಯಶಸ್ವಿಯಾಗಿ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.


ಈ ಅಧ್ಯಯನದ ಬಗ್ಗೆ 'ಜನರಲ್ ಆಫ್ ಒಬೇಸಿಟಿ'ಯಲ್ಲಿ ಪ್ರಕಟಿಸಲಾಗಿದ್ದು, "ಪ್ರತಿನಿತ್ಯ ವ್ಯಾಯಾಮ ಮಾಡುವ ಸಮಯದಲ್ಲಿ ಸ್ಥಿರತೆ ಹೊಂದಿರುವ ಹಾಗೂ ಯೋಜಿತ ಮತ್ತು ರಚನಾತ್ಮಕ ದೈಹಿಕ ಚಟುವಟಿಕೆಯನ್ನು ನಿರ್ವಹಿಸುವ ವ್ಯಕ್ತಿಗಳು ಹೆಚ್ಚಿನ ಮಟ್ಟದ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಲೇಖಕ ಡೇಲ್ ಬಾಂಡ್ ತಿಳಿಸಿದ್ದಾರೆ.