ಬೆಂಗಳೂರು : ಪೌಷ್ಟಿಕಾಂಶದ (Nutrient)  ಕಣಜ ದಾಲ್ ಅಥವಾ ಬೇಳೆ. ಮಕ್ಕಳು ಊಟ ಅರ್ಧಕ್ಕೆ ಬಿಟ್ಟರೆ `ಸ್ವಲ್ಪ ದಾಲ್ ಅದರೂ ತಿನ್ನೋ' ಅಂತಾ ಅಮ್ಮ ಗೋಗರೆಯುವುದು ನಿಮಗೆ ಈಗ ನೆನಪಾಗುತ್ತಿರುಬಹುದು. ದಾಲ್ ಅಥವಾ ಬೇಳೆಯಲ್ಲಿ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ.  ಭಾರತೀಯರ ಊಟ ದಾಲ್ ಇಲ್ಲದೆ ಪೂರ್ಣ ಆಗುವುದಿಲ್ಲ.  ಕೆಲವರು ಮಧ್ಯಾಹ್ನದ ಊಟಕ್ಕೆ,  ಇನ್ನು ಕೆಲವರು ರಾತ್ರಿ ಊಟಕ್ಕೆ (Dinner) ದಾಲ್ ತಿನ್ನುತ್ತಾರೆ. ರಾತ್ರಿ ಊಟಕ್ಕೆ ದಾಲ್ ತಿನ್ನಬಾರದು ಎಂಬ ಸಲಹೆಯನ್ನೂ ಕೆಲವರು ಕೊಡುತ್ತಾರೆ. ರಾತ್ರಿ ಊಟಕ್ಕೆ ದಾಲ್ ತಿನ್ನಬಹುದೇ, ತಿನ್ನಬಾರದೇ.? ರಾತ್ರಿ ಊಟಕ್ಕೆ ದಾಲ್ ತಿಂದರೆ ಏನಾಗುತ್ತದೆ.? ಈ ಪ್ರಶ್ನೆಗಳು ಸಹಜವಾಗಿ ನಿಮ್ಮಲ್ಲಿ ಮೂಡಬಹುದು. 


COMMERCIAL BREAK
SCROLL TO CONTINUE READING

ದಾಲ್ ರಾತ್ರಿ ತಿಂದರೆ ಏನು ಸಮಸ್ಯೆ..? : 
ರಾತ್ರಿ ದಾಲ್ ತಿನ್ನುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರಾತ್ರಿ ವೇಳೆ ದಾಲ್ ತಿನ್ನಬಹುದು. ಆದರೆ, ಯಾವ ದಾಲ್ (Dal) ತಿನ್ನಬೇಕು ಅನ್ನೋದನ್ನು ಮೊದಲು ನಿರ್ಧರಿಸಿಕೊಳ್ಳಬೇಕು. ಯಾಕೆಂದರೆ, ರಾತ್ರಿಯ ವೇಳೆ ನಮ್ಮ ಜೀರ್ಣಕ್ರಿಯೆ (Digestion)  ಮಾಮೂಲಿಗಿಂತ ಸ್ವಲ್ಪ ನಿಧಾನವಾಗಿರುತ್ತದೆ. ಹಾಗಾಗಿ, ಬೇಗ ಪಚನವಾಗಬಹುದಾದ ಬೇಳೆಯನ್ನು ಮಾತ್ರ ರಾತ್ರಿ ತಿನ್ನಬೇಕು. ಹಲವು ಬಗೆಯ ಬೇಳೆ ಮಾರ್ಕೆಟ್ನದಲ್ಲಿ(Market) ಸಿಗುತ್ತದೆ. ಕೆಲವು ಬೇಳೆ ಬೇಗ ಜೀರ್ಣವಾಗುತ್ತದೆ. ಇನ್ನು ಕೆಲವು ಜೀರ್ಣವಾಗಲು ಸ್ವಲ್ಪ ಸಮಯ ತಗೊಳ್ಳುತ್ತವೆ. ಕೆಲವು ದಾಲ್ಗೆಳು ಡೈಜೆಸ್ಟಿವ್ ಸಿಸ್ಟಮನ್ನು ಬಿಗಡಾಯಿಸಿಬಿಡುತ್ತದೆ. ಮಧ್ಯಾಹ್ನದ ಊಟಕ್ಕೆ (Lunch) ದಾಲ್ ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು. 


ಇದನ್ನೂ ಓದಿ : ಮೈಮರೆತು ಮಲಗಲು 7 ಸೂತ್ರಗಳು..! ಕ್ಷಣದಲ್ಲಿ ನಿದ್ರಾದೇವಿಯ ಒಲಿಸಿಕೊಳ್ಳಿ..!


ಡಿನ್ನರ್ ಗೆ ಯಾವ ದಾಲ್ ಸೂಕ್ತ..?
ರಾತ್ರಿ ಊಟಕ್ಕೆ ಬೇಗ ಜೀರ್ಣ ಆಗುವಂಥ ದಾಲ್ ತಿನ್ನಬೇಕು. 
ಹಾಗೇ ನೋಡಿದರೆ ರಾತ್ರಿ ತಿನ್ನಲು ಹೆಸರು ಬೇಳೆ ತುಂಬಾ ಉತ್ತಮ. ಇದು ತುಂಬಾ ಲಘುವಾಗಿರುತ್ತದೆ. ರಾತ್ರಿ ವೇಳೆ ಬೇಗ ಜೀರ್ಣವಾಗುತ್ತದೆ. ನೀವು ರಾತ್ರಿ ಊಟಕ್ಕೆ ದಾಲ್ ತಿನ್ನುವಿರಾದರೆ, ಹೆಸರುಬೇಳೆ (Moong Dal) ತಿನ್ನಿ. ಅದಕ್ಕಿಂತ ಒಳ್ಳೆಯ ಬೇಳೆ ಇನ್ನೊಂದಿಲ್ಲ. ಪಚನಕ್ರಿಯೆಯ ದೃಷ್ಟಿಯಲ್ಲಿ ಹೆಸರು ಇನ್ನೂ ಒಳ್ಳೆಯದು.  ಡಿನ್ನರ್ ಯಾವತ್ತೂ ಹೆವಿ ಇರಬಾರದು. ಡಿನ್ನರಿನಲ್ಲಿ ಹುರಿದ ವಸ್ತುಗಳನ್ನು ತಿನ್ನಬಾರದು. ಕಿಚಡಿ  ಮತ್ತು ದಾಲ್ ಪರ್ಫೆಕ್ಟ್ ಡಿನ್ನರ್. ಇದರಿಂದ ರಾತ್ರಿ ಸಾಕಷ್ಟು ಪೋಷಕಾಂಶ ಸಿಗುತ್ತದೆ. ಬೇಗ ಜೀರ್ಣವಾಗುತ್ತದೆ. ಜೊತೆಗೆ ರಾತ್ರಿ ಗಾಢನಿದ್ದೆಯೂ (Deep Sleep) ಬರುತ್ತದೆ.


ಇದನ್ನೂ ಓದಿ : Morning Mistakes : ಬೆಳಗ್ಗೆ ಎದ್ದು ಯಾವತ್ತಿಗೂ ಈ ಹತ್ತು ತಪ್ಪುಗಳನ್ನು ಮಾಡಬೇಡಿ.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.