ಹಲ್ಲಿನಲ್ಲಿ ಸೇರಿಕೊಂಡಿರುವ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ ಈ ವಸ್ತುಗಳು !
ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ನೀವು ದಂತವೈದ್ಯರ ಬಳಿಗೆ ಹೋಗಬಹುದಾದರೂ, ಹಳದಿ ಹಲ್ಲುಗಳನ್ನು ಮುತ್ತುಗಳಂತೆ ಹೊಳೆಯುವಂತೆ ಮಾಡುವ ಕೆಲವು ಸುಲಭ ಪರಿಹಾರಗಳು ನಿಮ್ಮ ಮನೆಯಲ್ಲಿಯೇ ಇರುತ್ತವೆ.
ಬೆಂಗಳೂರು : ಹಳದಿ ಹಲ್ಲುಗಳು ಯಾರೊಂದಿಗಾದರೂ ಮಾತನಾಡುವಾಗ ಅಥವಾ ಇತರರ ಮುಂದೆ ನಗುವಾಗ ಮುಜುಗರವನ್ನು ಉಂಟುಮಾಡಬಹುದು. ಹಲ್ಲುಗಳ ಹಳದಿ ಬಣ್ಣವು ಅನೇಕ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ಸಿಹಿತಿಂಡಿಗಳನ್ನು ಸೇವಿಸುವುದು ಮತ್ತು ಹಲ್ಲಿನ ಬಗ್ಗೆ ಸರಿಯಾದ ಕಾಳಜಿ ವಹಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ ಹಲ್ಲುಗಳ ಮೇಲೆ ಹಳದಿ ಕಲೆಗಳು ಉಳಿಯಲು ಕಾರಣವಾಗುತ್ತದೆ. ಪ್ರತಿದಿನ ತಿನ್ನುವ ಆಹಾರದ ಕಣಗಳು ಹಲ್ಲುಗಳ ಮೇಲೆ ಸಂಗ್ರಹವಾಗುತ್ತವೆ. ಇದು ಹಳದಿ ಹಲ್ಲುಗಳಿಗೆ ದೊಡ್ಡ ಕಾರಣವಾಗಿದೆ.
ತಂಬಾಕು ಸೇವನೆ, ಅತಿಯಾದ ಕಾಫಿ ಮತ್ತು ಚಹಾ ಸೇವನೆ, ಧೂಮಪಾನ, ಒರಲ್ ಹೆಲ್ತ್ ಬಗ್ಗೆ ಹೆಚ್ಚಿನ ಗಮನ ಹರಿಸದೆ ಇರುವುದು, ಹಲ್ಲಿನ ದಂತಕವಚವನ್ನು ಬಾಧಿಸುವ ರೋಗಗಳು, ಇತ್ಯಾದಿ, ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಕಾರಣ ವಾಗುವ ಅಂಶಗಳಾಗಿವೆ. ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ನೀವು ದಂತವೈದ್ಯರ ಬಳಿಗೆ ಹೋಗಬಹುದಾದರೂ, ಹಳದಿ ಹಲ್ಲುಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡುವ ಕೆಲವು ಸುಲಭ ಪರಿಹಾರಗಳು ನಿಮ್ಮ ಮನೆಯಲ್ಲಿಯೇ ಇರುತ್ತವೆ.
ಇದನ್ನೂ ಓದಿ : ಬದನೆ ಕಂಡು ಮೂಗು ಮುರಿಯಬೇಡಿ! ಎರಡು ಅಪಾಯಕಾರಿ ಕಾಯಿಲೆ ತಡೆಯುವ ಶಕ್ತಿ ಇದಕ್ಕಿದೆ !
ತುಳಸಿ ಎಲೆಗಳು ಮತ್ತು ಒಣಗಿದ ಕಿತ್ತಳೆ ಸಿಪ್ಪೆಗಳು:
ಮೊದಲು 7 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಅದರ ನಂತರ ಸ್ವಲ್ಪ ಪ್ರಮಾಣದ ಒಣಗಿದ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಕೂಡಾ ನುಣ್ಣಗೆ ಪುಡಿಯಾಗಿ ಪುಡಿಮಾಡಿ. ನಂತರ ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೇರವಾಗಿ ನಿಮ್ಮ ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನಂತರ ಸರಳ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ. ಹಲ್ಲುಗಳಿಗೆ ಈ ಮನೆಮದ್ದು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಆದ್ದರಿಂದ ನೀವು ದಿನಕ್ಕೆ ಒಮ್ಮೆ ಅಥವಾ ವಾರದಲ್ಲಿ ಹಲವಾರು ಬಾರಿ ಈ ಪರಿಹಾರವನ್ನು ಮಾಡಬಹುದು.
ಅಡಿಗೆ ಸೋಡಾ ಮತ್ತು ನೀರು:
ಮೊದಲು 2 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ಹಲ್ಲುಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಇರಿಸಿ. ನಂತರ ನಿಮ್ಮ ಬಾಯಿಯನ್ನು ತೊಳೆಯಿರಿ. ಪ್ರತಿ ರಾತ್ರಿ ಮಲಗುವ ಮುನ್ನ ಈ ರೀತಿ ಮಾಡುತ್ತಾ ಬಂದರೆ ಹಲ್ಲಿನಲ್ಲಿ ಆಂಟಿ ಕುಳಿತಿರುವ ಈ ಕಲೆಗಳು ಮಾಯವಾಗುತ್ತವೆ.
ಇದನ್ನೂ ಓದಿ : ಪಪ್ಪಾಯಿ ಎಲ್ಲರಿಗೂ ಒಳ್ಳೆಯದಲ್ಲ, ಈ ಸಮಸ್ಯೆಯಿದ್ದರೆ ತಪ್ಪಿಯೂ ತಿನ್ನಬೇಡಿ
ಉಪ್ಪು ಮತ್ತು ನಿಂಬೆ ರಸ:
ಮೊದಲು ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣದಿಂದ ಹಲ್ಲುಜ್ಜಿದರೆ ಹಲ್ಲಿನಲ್ಲಿರುವ ಹಳದಿ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು.
ಆಪಲ್ ಸೈಡರ್ ವಿನೆಗರ್ ಮತ್ತು ಬಿಸಿ ನೀರು:
ಮೊದಲು ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಈ ನೀರಿನಿಂದ ಚೆನಾಗಿ ಗಾರ್ಗಲ್ ಮಾಡಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಮನೆಮದ್ದನ್ನು ಅನುಸರಿಕೊಂಡು ಬರಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.