ನವದೆಹಲಿ: ಹೈದ್ರಾಬಾದ್: ನಗರ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಬಯಾಲಜಿ ಹಾಗೂ ನವದೆಹಲಿಯ AIIMS ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಒಂದು ಅಧ್ಯಯನ ಪ್ರಕಾರ ಸಾಂಪ್ರದಾಯಿಕ ಯೋಗಾಭ್ಯಾಸ ವೀರ್ಯಾಣುಗಳ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಈ ಸಕಾರಾತ್ಮಕ ಬದಲಾವಣೆಗಳನ್ನು ಸ್ಪರ್ಮ್ ಎಪಿಜೇನೆಟಿಕ್ ಚೆಂಜಿಸ್, DNA ಮೆಥೈಲೈಸೆಷನ್ ಗಳಲ್ಲಿ ಗಮನಿಸಬಹುದಾಗಿದೆ ಎಂದು ಅಧ್ಯಯನ ಹೇಳಿದೆ


COMMERCIAL BREAK
SCROLL TO CONTINUE READING

ಸರಿಯಾಗಿಲ್ಲದ  ಜೀವನಶೈಲಿ ಮತ್ತು ಸಾಮಾಜಿಕ ಅಭ್ಯಾಸಗಳು ವೀರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದುಅಧ್ಯಯನ ಹೇಳಿದ್ದು, ಇದರ ಪರಿಣಾಮವಾಗಿ ಪುರುಷ ಸಂತಾನೋತ್ಪತ್ತಿ ಆರೋಗ್ಯ ಕುಸಿಯುತ್ತದೆ. ಈ ಕುರಿತು ಮಂಗಳವಾರ CCMB ವಿಜ್ನಾಪ್ತಿಯೊಂದನ್ನು ಜಾರಿಗೊಳಿಸಿದ್ದು, ಯೋಗ ಆಧಾರಿತ ಜೀವನ ಶೈಲಿ ಆಧುನಿಕ ಚಿಕಿತ್ಸೆಗೆ ಸಹಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ಹೇಳಿದೆ.


ಈ ಕುರಿತು ಹೇಳಿಕೆ ನೀಡಿರುವ CCMB ನಿರ್ದೇಶಕ ರಾಕೇಶ್ ಮಿಶ್ರಾ, "ಇದೊಂದು ಸಣ್ಣ ಪ್ರಮಾಣದ ಜನಸಮೂಹದ ಮೇಲೆ ಮೇಲೆ ನಡೆಸಲಾಗಿರುವ ಪೈಲಟ್ ಅಧ್ಯಯನವಾಗಿದ್ದು, ಯೋಗ ಆಧಾರಿತ ಜೀವನಶೈಲಿಯ ಹಸ್ತಕ್ಷೇಪ (YBLI) ಬಂಜೆತನದ ಮೇಲೆ ಬೀರುತ್ತಿರುವ ಸಕಾರಾತ್ಮಕ ಅಧ್ಯಯನದ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ" ಎಂದು ಹೇಳಿದ್ದಾರೆ.