Toe Ring Benefits: ಕಾಲುಂಗುರವನ್ನು ಧರಿಸುವುದು ಹಿಂದೂ ಧರ್ಮದ ಸಂಸ್ಕೃತಿ ಮಾತ್ರವಲ್ಲ, ಇದರಿಂದ ಮಹಿಳೆಯರಿಗೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಕಾಲುಂಗುರಗಳನ್ನು ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಹಿಡಿದು ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುವವರೆಗೆ ಪ್ರಯೋಜನಗಳಿವೆ. ಕಾಲುಂಗರ ಧರಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ....


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರತಿದಿನ ಏಲಕ್ಕಿ ಹಾಲು ಕುಡಿಯುವುದರಿಂದ ದೇಹಕ್ಕೆ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗ್ತುತ್ತೆ..!


ಕಾಲುಂಗುರ ಧರಿಸುವುದರ ಪ್ರಯೋಜನಗಳು


● ಕಾಲಿನ ೨ನೇ ಬೆರಳಿನ ನರ ಮತ್ತು ಸ್ತ್ರೀಯ ಗರ್ಭಕೋಶಕ್ಕೆ ನೇರ ಸಂಪರ್ಕ ಹೊಂದಿರುತ್ತದೆ ಎನ್ನಲಾಗುತ್ತದೆ. 
● ಕಾಲುಂಗುರ ಧರಿಸುವುದರಿಂದ ಮುಟ್ಟು ನಿಯಮಿತವಾಗಿ ಆಗುತ್ತದೆ ಮತ್ತು ಗರ್ಭಕೋಶದ ಆರೋಗ್ಯಕ್ಕೂ ಹಿತಕರ. 
● ಕಾಲುಂಗುರ ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುತ್ತದೆ. 
● ಬೆಳ್ಳಿ ಎಲ್ಲಾ ಲೋಹಗಳಿಗಿಂತಲೂ ಹೆಚ್ಚು ಉಷ್ಣ ವಾಹಕತೆಯನ್ನು ಹೊಂದಿದ್ದು, ದೇಹದಲ್ಲಿನ ಅಧಿಕ ಉಷ್ಣತೆಯನ್ನು ಇದು ತಗ್ಗಿಸುತ್ತದೆ. 
● ಬೆಳ್ಳಿ ಕಾಲುಂಗುರ ಧರಿಸುವುದರಿಂದ ವಿವಾಹಿತ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.
● ೨ನೇ ಬೆರಳಿಗೆ ಮಸಾಜ್ ಮಾಡುವ ಮೂಲಕ ಸ್ತ್ರೀರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು 
● ಬೆಳ್ಳಿಯ ಕಾಲುಂಗುರವನ್ನು ಹೆಚ್ಚು ಬಳಕೆ ಮಾಡುವುದು ಏಕೆಂದರೆ ಇದು ಭೂಮಿಯಿಂದ ಮತ್ತು ದೇಹದಿಂದ ಉತ್ಪತ್ತಿಯಾಗುವ ಉಷ್ಣ ಶಕ್ತಿಯನ್ನು ಹೀರಿಕೊಳ್ಳುತ್ತದೆ 
● ವಿವಾಹಿತ ಮಹಿಳೆಯರಲ್ಲಿ ಇದು ಒತ್ತಡ ನಿವಾರಣೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
● ಜ್ಯೋತಿಷ್ಯದ ಪ್ರಕಾರ, ಕಾಲ್ಬೆರಳ ಉಂಗುರದ ಬೆಳ್ಳಿಯ ಲೋಹವು ಚಂದ್ರನು ದೇಹದ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 
● ಚಂದ್ರನು ಮನಸ್ಸು ಮತ್ತು ಹೃದಯವನ್ನು ಶಾಂತಗೊಳಿಸುತ್ತಾನೆ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನೀವು ಶಾಂತವಾಗಿದ್ದರೆ ನಿಮ್ಮ ರಕ್ತದೊತ್ತಡವನ್ನು ಸಹ ನೀವು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ.
● ಕಾಲ್ಬೆರಳ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. 


ಇದನ್ನೂ ಓದಿ: ಊಟಕ್ಕೂ ಮುನ್ನ ʼಈʼ ಹಣ್ಣು ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್..!‌ ಮತ್ತೆಂದೂ ಹೆಚ್ಚಾಗಲ್ಲ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.