ಈ ರೋಗಗಳ ಮೂಲವೇ ಟೊಮ್ಯಾಟೋ ! ಪ್ರತಿ ಅಡುಗೆಯಲ್ಲಿ ಬಳಸುವ ಮುನ್ನ ಎಚ್ಚರ
Tomatoes Side Effects For Health: ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಟೊಮ್ಯಾಟೋ ತಿನ್ನುವುದರಿಂದ ಕೆಲವೊಂದು ಸಮಸ್ಯೆಗಳು ತಲೆದೋರುವುದು.
Tomatoes Side Effects For Health: ಟೊಮ್ಯಾಟೋವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಟೊಮ್ಯಾಟೊ ಹಣ್ಣು ಆಂಟಿ-ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳ ಆಗರವಾಗಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಂತ ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಟೊಮ್ಯಾಟೋ ತಿನ್ನುವುದರಿಂದ ತಲೆದೋರುವುದು ಈ ಸಮಸ್ಯೆ :
ಅಸಿಡಿಟಿ ಸಮಸ್ಯೆ :
ಟೊಮ್ಯಾಟೋದಲ್ಲಿ ಉತ್ತಮ ಪ್ರಮಾಣದ ವಿಟಮಿನ್-ಸಿ ಇದೆ. ಹಾಗಾಗಿ ಟೊಮ್ಯಾಟೋ ಆಮ್ಲೀಯ ಗುಣವನ್ನು ಹೊಂದಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ಟೊಮ್ಯಾಟೋವನ್ನು ಎಲ್ಲಾ ಅಡುಗೆಯಲ್ಲಿ ಬಳಸುವ ಮುನ್ನ ಯೋಚಿಸಿ ಬಳಸಿ.
ಇದನ್ನೂ ಓದಿ : ಹೃದಯಾಘಾತ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ದೂರ ಸರಿಸುತ್ತದೆ ಈ ಒಂದು ಧಾನ್ಯ
ಗ್ಯಾಸ್ ಸಮಸ್ಯೆ:
ಗ್ಯಾಸ್ ಸಮಸ್ಯೆ ಇರುವವರು ಹೆಚ್ಚು ಟೊಮೆಟೊ ಸೇವಿಸಬಾರದು. ಟೊಮ್ಯಾಟೋ ಸೇವನೆ ಹೊಟ್ಟೆಯಲ್ಲಿ ಗ್ಯಾಸ್ ರಚನೆಗೆ ಕಾರಣವಾಗಬಹುದು. ಗ್ಯಾಸ್ ಸಮಸ್ಯೆಯಿಂದ ಪಾರಾಗಲು ಟೊಮ್ಯಾಟೋ ಸೇವನೆಯಿಂದ ದೂರವಿರಬೇಕು.
ಕಿಡ್ನಿ ಸ್ಟೋನ್ ಸಮಸ್ಯೆ :
ಕಿಡ್ನಿ ಸ್ಟೋನ್ ರೋಗಿಗಳು ತಪ್ಪಿಯೂ ಟೊಮ್ಯಾಟೋ ಸೇವಿಸಬಾರದು. ಟೊಮ್ಯಾಟೋ ಬೀಜಗಳಿಂದ ಕಿಡ್ನಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಕಿಡ್ನಿ ಸ್ಟೋನ್ ಇರುವವರು ಟೊಮ್ಯಾಟೋ ಹಣ್ಣು ಸೇವಿಸಬೇಕು ಎಂದಾದರೆ, ಮೊದಲು ಅದರ ಬೀಜಗಳನ್ನು ಪ್ರತ್ಯೇಕಿಸಿಕೊಳ್ಳಬೇಕು.
ಇದನ್ನೂ ಓದಿ : Health Tips: ಬಿಪಿ-ಶುಗರ್ ಅಷ್ಟೇ ಅಲ್ಲ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭಕಾರಿ ಈ ಹಸಿರು ತರಕಾರಿ
ಎದೆಯುರಿ :
ಟೊಮ್ಯಾಟೋವನ್ನು ಹೆಚ್ಚು ಸೇವಿಸಿದರೆ, ಎದೆಯುರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ ಹೇಳಿದ ಹಾಗೆ ಟೊಮ್ಯಾಟೋದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಎದೆಯುರಿ ಮುಂತಾದ ಸಮಸ್ಯೆಗಳು ಕೂಡಾ ತಲೆದೋರಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.