Treatment of constipation : ಮಲಬದ್ಧತೆಯ ಸಮಸ್ಯೆ ಕೆಲವೊಮ್ಮೆ ನಮ್ಮನ್ನು ಬಹಳಷ್ಟು ತೊಂದರೆಗೆ ಈಡು ಮಾಡುತ್ತದೆ.ಅನೇಕ ಬಾರಿ ಮಲಬದ್ಧತೆಯಿಂದಾಗಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಮಲಬದ್ಧತೆಗೆ ಕಾರಣ ಅನೇಕವಿರಬಹುದು.ಆದರೆ, ಇದರಿಂದಾಗಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ,ಅದಕ್ಕೆ ಆಂತರಿಕ ಕಾರಣವನ್ನು ಕಂಡುಹಿಡಿಯುವುದು ಮುಖ್ಯ. ಇಲ್ಲವಾದರೆ ಆ ಔಷಧಿಗಳನ್ನು ಬಳಸುವವರೆಗೆ ಮಾತ್ರ ಪರಿಹಾರ ಸಿಗುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಬುಡದಿಂದಲೇ  ತೊಡೆದುಹಾಕಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಈ  ಮನೆಮದ್ದುಗಳು ಮಲಬದ್ಧತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.  ಅದು ಕೂಡಾ ಯಾವುದೇ ಅಡ್ಡಪರಿಣಾಮಗಳಿಲ್ಲದೆ.


COMMERCIAL BREAK
SCROLL TO CONTINUE READING

ಈ ವಿಶೇಷ ಪುಡಿಯನ್ನು ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ : 
ಮಲಬದ್ಧತೆಯ ಸಮಸ್ಯೆಯು ಸಾಕಷ್ಟು ತ್ರಾಸದಾಯಕವಾಗಿರುತ್ತದೆ. ಮಲಬದ್ಧತೆ ರೋಗಿಗಳಿಗೆ ಮಜ್ಜಿಗೆ ತುಂಬಾ ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಆದರೆ ಮಲಬದ್ಧತೆ ಬೇಗ ದೂರವಾಗಬೇಕೆಂದರೆ ಮಜ್ಜಿಗೆಯಲ್ಲಿ ತ್ರಿಫಲ ಚೂರ್ಣ ಬೆರೆಸಿ ಕುಡಿಯಬಹುದು. ತ್ರಿಫಲ ಚೂರ್ಣವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 


ಇದನ್ನೂ ಓದಿ :ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!


ಸೇವಿಸುವ ಸಮಯ ಯಾವುದು ? : 
ಮಲಬದ್ಧತೆಯನ್ನು ತೊಡೆದುಹಾಕಲು,ಸಂಜೆ ತ್ರಿಫಲಾ ಪುಡಿಯನ್ನು ಸೇವಿಸುವಂತೆ ಹೇಳಲಾಗುತ್ತದೆ. ಆದರೆ ಇದನ್ನು ಮಜ್ಜಿಗೆಯೊಂದಿಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಸಂಜೆಯ ಬದಲು ಬೆಳಿಗ್ಗೆ ಸೇವಿಸಬೇಕು. ಈ ರೀತಿ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವುದು ಸಾಧ್ಯವಾಗುತ್ತದೆ. ಒಂದು ವೇಳೆ ಬೆಳಿಗ್ಗೆ ಸೇವಿಸುವುದು ನಿಮಗೆ ಇಷ್ಟವಾಗದೆ ಹೋದರೆ ಮಧ್ಯಾಹ್ನವೂ ಸೇವಿಸಬಹುದು.


ವೈದ್ಯರ ಸಲಹೆ ಅಗತ್ಯ : 
ಕೆಲವೊಮ್ಮೆ ಮಲಬದ್ಧತೆ ಮತ್ತೆ ಮತ್ತೆ ಉಂಟಾದಾಗ, ಅದು ಕೆಲವು ಆಂತರಿಕ ಕಾಯಿಲೆಯ ಸಂಕೇತವಾಗಿರಬಹುದು.ಹಾಗಾಗಿ ಯಾವುದನ್ನೂ ನಿರ್ಲಕ್ಷಿಸಬಾರದು.  ಮಲಬದ್ಧತೆ ಪದೇ ಪದೇ ಸಂಭವಿಸುತ್ತಿದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ. ಇದರಿಂದ ಆಂತರಿಕ ರೋಗವನ್ನು ಪತ್ತೆ ಹಚ್ಚಬಹುದು. 


ಇದನ್ನೂ ಓದಿ : Health Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.