ಈ ಎರಡು ವಸ್ತುಗಳನ್ನು ಬಳಸಿದರೆ ಒಂದೇ ಗಂಟೆಯಲ್ಲಿ ಬಿಳಿ ಕೂದಲು ಕಪ್ಪಾಗುವುದು ! ಒಮ್ಮೆ ಟ್ರೈ ಮಾಡಿ
Premature White Hair Problem Solution: ಹೇರ್ ಕಲರ್ ಬಳಸುವುದರಿಂದ ಕೂದಲು ಉದುರುವುದು, ಕೂದಲು ಶುಷ್ಕವಾಗುವುದು, ಅಲರ್ಜಿ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಿರುವಾಗ ಹೇರ್ ಕಲರ್ ಬದಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಉತ್ತಮ.
Premature White Hair Problem Solution : ಹಿಂದೆಲ್ಲಾ ಕೂದಲು ಬೆಳ್ಳಗಾಯಿತು ಅಂದರೆ ಅದು ವಯಸ್ಸಾದ ಲಕ್ಷಣ ಎಂದು ಹೇಳಲಾಗುತ್ತಿತ್ತು. ಆದರೆ ಈಗ ವಯಸ್ಸು 30 ಆಗುತ್ತಿದ್ದಂತೆಯೇ ಕೂದಲು ಬೆಳ್ಳಗಾಗಲು ಆರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ ಯುವತಿಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕೂದಲು ಬಿಳಿಯಾಗಲು ಕಾರಣ :
ಅವ್ಯವಸ್ಥೆಯ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಕೂದಲು ಬಿಳಿಯಾಗುವ ಹಿಂದಿರುವ ಪ್ರಮುಖ ಕಾರಣ. ಇದರ ಹೊರತಾಗಿ, ಧೂಳು, ಸೂರ್ಯನ ಬೆಳಕು ಮತ್ತು ಮಾಲಿನ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅನುವಂಶಿಕತೆ ಕೂಡಾ ಇದಕ್ಕೆ ಕಾರಣವಾಗಿರಬಹುದು.
ಇದನ್ನೂ ಓದಿ : ಬಿಳಿ ಕೂದಲಿಗೆ ಪರ್ಮನೆಂಟ್ ಪರಿಹಾರ ಈ ಹಳದಿ ಹಣ್ಣಿನ ಹೇರ್ ಮಾಸ್ಕ್
ಕೂದಲು ಕಪ್ಪಾಗಿಸಲು ನೈಸರ್ಗಿಕ ವಸ್ತು :
ಬಿಳಿ ಕೂದಲನ್ನು ಕಪ್ಪಾಗಿಸಲು ಅನೇಕ ಜನರು ರಾಸಾಯನಿಕ ಆಧಾರಿತ ಕೂದಲಿನ ಬಣ್ಣವನ್ನು ಬಳಸುತ್ತಾರೆ. ಆದರೆ, ಇದು ಕೇವಲ ತಾತ್ಕಾಲಿಕ ಪರಿಹಾರ ನೀಡುತ್ತದೆ. ಮಾತ್ರವಲ್ಲ ಪ್ರಯೋಜನದ ಬದಲಾಗಿ ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಹೇರ್ ಕಲರ್ ಬಳಸುವುದರಿಂದ ಕೂದಲು ಉದುರುವುದು, ಕೂದಲು ಶುಷ್ಕವಾಗುವುದು, ಅಲರ್ಜಿ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಿರುವಾಗ ಹೇರ್ ಕಲರ್ ಬದಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಉತ್ತಮ.
ಗೋರಂಟಿ ಮತ್ತು ಕಾಫಿ ಪೇಸ್ಟ್ :
ನೈಸರ್ಗಿಕವಾಗಿ ಕೂದಲು ಕಪ್ಪಾಗಲು, ಗೋರಂಟಿ ಮತ್ತು ಕಾಫಿ ಪೇಸ್ಟ್ ಅನ್ನು ಹಚ್ಚಬಹುದು. ಗೋರಂಟಿ ನೈಸರ್ಗಿಕ ಬಣ್ಣ ಮತ್ತು ಕಂಡಿಷನರ್ ಆಗಿದ್ದು, ಕಾಫಿಯು ಕೆಫೀನ್‌ನ ಶ್ರೀಮಂತ ಮೂಲವಾಗಿದೆ. ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಕೂದಲ ಕಾಂತಿ ಹೆಚ್ಚಿಸಿ ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ಕೂದಲಿಗೆ ಗಾಢವಾದ ಬಣ್ಣವನ್ನು ನೀಡುತ್ತದೆ. ಈ ಎರಡೂ ವಸ್ತುಗಳ ಸಂಯೋಜನೆಯು ಯಾವುದೇ ಹೇರ್ ಡೈಗಿಂತ ಕಡಿಮೆಯಿಲ್ಲ.
ಇದನ್ನೂ ಓದಿ : ಮಧುಮೇಹ ನಿಯಂತ್ರಣಕ್ಕೆ ರಾತ್ರಿ ಮಲಗುವ ಮುನ್ನ ಈ ಒಂದು ಉಪಾಯ ಮಾಡಿ ಸಾಕು !
ಬಳಸುವ ವಿಧಾನ ಹೇಗೆ? :
ಇದಕ್ಕಾಗಿ ನೀವು ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಮತ್ತು ಒಂದು ಚಮಚ ಕಾಫಿಯನ್ನು ಹಾಕಿ ಮಿಶ್ರಣ ಮಾಡಿ. ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ಅದೇ ನೀರಿಗೆ ಗೋರಂಟಿ ಪುಡಿಯನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಸುಮಾರು ಒಂದು ಗಂಟೆವರೆಗೆ ಹಾಗೆಯೇ ಬಿಡಿ. ಈಗ ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಕೂದಲಿಗೆ ಹಚ್ಚಿ. ಸುಮಾರು ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ಬಯಸಿದ ರಿಸಲ್ಟ್ ಕಾಣಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.