Home Remedies For Migraine Headaches: ಮೈಗ್ರೇನ್ ಸಮಸ್ಯೆಯು ನಿಯಮಿತ ತಲೆನೋವಿಗಿಂತ ಭಿನ್ನವಾಗಿರುತ್ತದೆ. ಮೈಗ್ರೇನ್ ಸಂದರ್ಭದಲ್ಲಿ ಧ್ವನಿ ಕಿರಿಕಿರಿ ಎಂದೆನಿಸುವುದರ ಜೊತೆಗೆ, ತೀವ್ರವಾದ ಕಣ್ಣು ನೋವು, ವಾಕರಿಕೆಯಂತಹ ಹಲವು ಲಕ್ಷಣಗಳು ಕಂಡುಬರಬಹುದು.  ಕೆಲವು ನೈಸರ್ಗಿಕ ಪರಿಹಾರಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 


COMMERCIAL BREAK
SCROLL TO CONTINUE READING

ಮೈಗ್ರೇನ್ ನಿವಾರಣೆಗೆ ಮನೆಮದ್ದು: 
ಮೈಗ್ರೇನ್ ಸಮಸ್ಯೆಯನ್ನು (Migraine Problems) ತಡೆಗಟ್ಟುವಲ್ಲಿ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ, ಸರಿಯಾದ ಸಮಯಕ್ಕೆ ಆಹಾರ ಸೇವನೆಯನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಹಸಿವಿನಿಂದಾಗಿ ಮೈಗ್ರೇನ್ ಬರುತ್ತಿದ್ದರೆ ಹೆಚ್ಚು ಸಮಯ ಹಸಿವಿನಿಂದ ಇರುವುದನ್ನು ತಪ್ಪಿಸಿ. 


ಇದನ್ನೂ ಓದಿ- High Uric Acid: ಔಷಧಿಗಳಿಲ್ಲದೆ ಯೂರಿಕ್ ಆಸಿಡ್ ನಿಯಂತ್ರಿಸಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು


ಶುಂಠಿ: 
ನಿಮಗೆ ಮೈಗ್ರೇನ್ ತಲೆನೋವಿನ (Migraine Headache) ಸಂದರ್ಭದಲ್ಲಿ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಈ ಸಂದರ್ಭದಲ್ಲಿ ಶುಂಠಿ ಟೀ ಸೇವನೆಯು ಪ್ರಯೋಜನಕಾರಿ ಎನ್ನಲಾಗುವುದು. 


ಪುದೀನಾ ಎಣ್ಣೆ: 
ಮೈಗ್ರೇನ್ ನಿವಾರಣೆಗೆ (Migraine Relief) ಪುದೀನಾ ಎಣ್ಣೆ ಪ್ರಯೋಜನಕಾರಿ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಪುದೀನಾ ಎಣ್ಣೆಯು ಒತ್ತಡದ ತಲೆನೋವಿಗೆ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಅಸ್ತಮಾ ರೋಗಿಗಳ ಮೇಲೆ ಏರ್ ಕಂಡೀಷನರ್‌ಗಳು ಹೇಗೆ ಪರಿಣಾಮ ಬೀರುತ್ತವೆ..?


ಯೋಗ: 
ಯೋಗ, ಧ್ಯಾನ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕ. ಅದರಲ್ಲೂ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಯೋಗವನ್ನು ಸೇರಿಸಿ. ಇದರಿಂದಾಗಿ, ಒತ್ತಡ, ಆತಂಕ, ಮುಟ್ಟಿನ ಸಮಯದಲ್ಲಿ ಕಾಡುವ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 


ಮೈಗ್ರೇನ್‌ ಸಮಸ್ಯೆ ನಿವಾರಣೆಗೆ ನೈಸರ್ಗಿಕ ವಿಧಾನಗಳು ಪರಿಣಾಮಕಾರಿಯೇ ಆಗಿದ್ದರೂ ಸಹ ನೀವು ಆಗಾಗ್ಗೆ ಮೈಗ್ರೇನ್‌ನಿಂದ ಬಳಲುತ್ತಿದ್ದರೆ, ಪರಿಣಾಮಕಾರಿ ಚಿಕಿತ್ಸಾ ಯೋಜನೆಯನ್ನು ಅಭಿವೃದ್ಧಿಪಡಿಸಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.