Weight Loss Tips : ವ್ಯಾಯಾಮವಿಲ್ಲದೆ ನೀವು ತೂಕ ಇಳಿಸಿಕೊಳ್ಳಬೇಕೆ? ಹಾಗಿದ್ರೆ, ಈ ಸ್ಪೆಷಲ್ ಚಹಾ ಸೇವಿಸಿ!
ಇಲ್ಲಿ ನಾವು ನಿಮಗೆ ಆಹಾರವನ್ನು ಅನುಸರಿಸಲು ಹೇಳುತ್ತಿಲ್ಲ, ಆದರೆ ಕೆಲವು ವಿಶೇಷ ಚಹಾ ಕುಡಿಯುವ ಮೂಲಕ ತೂಕವನ್ನು ಕಳೆದುಕೊಳ್ಳಲು ತುಂಬಾ ಸುಲಭವಾಗಿದೆ.
ತೂಕವನ್ನು ಕಳೆದುಕೊಳ್ಳಲು, ಜನ ವಿವಿಧ ಆಹಾರ, ಪಾನೀಯ ಸೇವಿಸುತ್ತಾರೆ. ಅಲ್ಲದೆ, ಕಡಿಮೆ ಆಹಾರವನ್ನು ಕೂಡ ಸೇವಿಸುತ್ತಾರೆ. ಆದರೆ ಇದರಿಂದ ಯಾವುದೇ ಬದಲಾವಣೆಗಳು ಕಂಡು ಬರುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿರುವುದರಿಂದ ಬೊಜ್ಜು ಬೆಳೆಯುತ್ತಿದೆ. ಕರೋನಾದಿಂದಾಗಿ ಜಿಮ್‌ಗಳು ಸಹ ಬಂದ್ ಆಗಿವೆ. ಅಲ್ಲದೆ, ಅನೇಕ ಜನರಿಗೆ ವ್ಯಾಯಾಮ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ಈ ಸ್ಪೆಷಲ್ ಚಹಾ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದು ಎಂದರೆ ನಂಬುತ್ತೀರಾ? ಹೌದು ನಂಬಲೆ ಬೇಕು. ಇಲ್ಲಿ ನಾವು ನಿಮಗೆ ಆಹಾರವನ್ನು ಅನುಸರಿಸಲು ಹೇಳುತ್ತಿಲ್ಲ, ಆದರೆ ಕೆಲವು ವಿಶೇಷ ಚಹಾ ಕುಡಿಯುವ ಮೂಲಕ ತೂಕವನ್ನು ಕಳೆದುಕೊಳ್ಳಲು ತುಂಬಾ ಸುಲಭವಾಗಿದೆ.
ತೂಕ ಇಳಿಕೆಗೆ ಗ್ರೀನ್ ಟೀ ಪ್ರಯೋಜನ
ಗ್ರೀನ್ ಟೀ(Green Tea) ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನೀವು ತಿಳಿದಿರಲೇಬೇಕು. ಹೆಚ್ಚಿನ ಜನ ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಕುಡಿಯುತ್ತಾರೆ. ಈ ಚಹಾವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದನ್ನು ಕುಡಿಯುವುದರಿಂದ, ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಫಿಟ್ ಆಗಿರಬಹುದು.
ಇದನ್ನೂ ಓದಿ : Hair Oil: ನೆತ್ತಿಗೆ ಬಿಸಿ ಎಣ್ಣೆ ಹಚ್ಚುವ ಅಭ್ಯಾಸ ನಿಮಗೂ ಇದೆಯೇ? ಇದನ್ನೊಮ್ಮೆ ಓದಿ
ಹೊಟ್ಟೆಯ ಕೊಬ್ಬಿಗೆ ಬ್ಲಾಕ್ ಟೀ ಪ್ರಯೋಜನಗಳು
ಅನೇಕ ಜನರು ಹೊಟ್ಟೆಯ ಕೊಬ್ಬಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ, ಇದಕ್ಕಾಗಿ ಅವರು ಕೊಬ್ಬು ಕರಗಿಸಿಕೊಳ್ಳಲು ಅಥವಾ ತೂಕ ಇಳಿಕೆಯ ಉತ್ಪನ್ನಗಳನ್ನು ಬಳಸುತ್ತಾರೆ. ಇದನ್ನು ತಪ್ಪಿಸಲು, ನೀವು ಬ್ಲಾಕ್ ಟೀ ಕುಡಿಯುವುದು ಬಹಳ ಉತ್ತಮ. ಇದರಲ್ಲಿ ವಿಶೇಷ ಪದಾರ್ಥಗಳಿವೆ. ಇದರಲ್ಲಿನ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳ ಪ್ರಮಾಣವು ಕಂಡುಬರುತ್ತದೆ.
ಲೇಮನ್ ಟೀ
ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು(Weight Loss) ಬಯಸಿದರೆ, ನೀವು ಲೇಮನ್ ಟೀ ಕುಡಿಯಬಹುದು. ಶುಂಠಿ ಮತ್ತು ನಿಂಬೆ ಚಹಾವು ನಿಮ್ಮ ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದಲ್ಲದೆ, ಲೇಮನ್ ಟೀ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ : Cloves Benefits : ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕರಿ 'ಲವಂಗ'! ಪ್ರತಿದಿನ ಬೆಳ್ಳಗೆ ಹೀಗೆ ಸೇವಿಸಿ
ಊಲಾಂಗ್ ಟೀ
ಓಲಾಂಗ್ ಟೀ ಚೈನೀಸ್ ಟೀ ಎಂದು ಕರೆಯುತ್ತಾರೆ. ಕೊಬ್ಬನ್ನು ಸುಡುವಲ್ಲಿ ಊಲಾಂಗ್ ಟೀ ತುಂಬಾ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ನಿಮ್ಮ ದೇಹದ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಈ ಚಹಾವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಈ ಚಹಾವನ್ನು ಕ್ಯಾಟೆಚಿನ್ ಮತ್ತು ಕೆಫೀನ್ ನಿಂದ ತಯಾರಿಸಲಾಗುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.