Bedroom Tips For Unmarried: ಮನೆಯಲ್ಲಿರುವ ಪ್ರತಿಯೊಂದು ವಸ್ತು ವಾಸ್ತುವಿನ ಜೊತೆಗೆ ಸಂಬಂಧ ಹೊಂದಿದೆ. ವಾಸ್ತು ದೋಷ ಹಾಗೂ ಗ್ರಹಗಳಿಗೆ ಸಂಬಂಧಿಸಿದ ಅಶುಭ ಪರಿಣಾಮಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆಳು, ವಿವಾದಗಳು, ವಿವಾಹದಲ್ಲಿ ಅಡೆತಡೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಅವಿವಾಹಿತ ತರುಣ-ತರುಣಿಯರ ಕೋಣೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ಅವಿವಾಹಿತರ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸುವುದು ನಿಷಿದ್ಧ ಎನ್ನಲಾಗಿದೆ. ಅದರಲ್ಲಿಯೂ ವಿಶೇಷವಾಗಿ ನೀವು ಮದುವೆಗಾಗಿ ಬಾಳಸಂಗಾತಿಯ ಹುಡುಕಾಟ ನಡೆಸುತ್ತಿರುವಾಗ ಖಂಡಿತವಾಗಿಯೂ ಕೂಡ ವಾಸ್ತು ನಿಯಮಗಳನ್ನು ಅನುಸರಿಸಿ ಎಂದು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ನೀವು ನಿಮ್ಮ ಮಲಗುವ ಕೊನೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು ಎನ್ನಲಾಗಿದೆ. ಹೀಗೆ ಮಾಡುವುದರಿಂದ ವಿವಾಹದಲ್ಲಿ ಅಡೆತಡೆಗಳು ಎದುರಾಗುತ್ತವೆ. ಅಂತಹ ವಸ್ತುಗಳು ಯಾವುವು ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಫೋಟೋ
ಕೋಣೆಯ ಆಕರ್ಷಣೆಗಾಗಿ ಜನರು ಯಾವಾಗಲು ತಮ್ಮ ಕೊನೆಯಲ್ಲಿ ಆಕರ್ಷಕ ಪೇಂಟಿಂಗ್ ಅನ್ನು ಅಳವಡಿಸುತ್ತಾರೆ. ವಿವಾಹಕ್ಕೆ ಯೋಗ್ಯ ಜಾತಕದವರು ತಮ್ಮ ಶಯನ ಕಕ್ಷೆಯಲ್ಲಿ ಹರಿಯುತ್ತಿರುವ ನೀರು, ನದಿ, ಸರೋವರ ಇತ್ಯಾದಿಗಳ ಫೋಟೋಗಳನ್ನು ಇರಿಸಬಾರದು. ವಾಸ್ತು ಪ್ರಕಾರ ಈ ಪೋಸ್ಟರ್ ಗಳು ವಿವಾಹದಲ್ಲಿ ಅಡಚಣೆಗಳನ್ನು ಉಂಟು ಮಾಡುತ್ತವೆ. ತಕ್ಷಣವೆ ಅವುಗಳನ್ನು ನಿಮ್ಮ ಮಲಗುವ ಕೋಣೆಯಿಂದ ಹೊರಹಾಕಿ. ಆದರೆ, ಸುಂದರ ಹೂವುಗಳು ಹಾಗೂ ಲವ್ ಬರ್ಡ್ಸ್ ಫೋಟೋಗಳನ್ನು ನೀವು ಅಳವಡಿಸಬಹುದು.


ಕೋಣೆಯ ಮೇಲ್ಚಾವಣಿ
ಅವಿವಾಹಿತರ ಕೋಣೆಯ ಮಧ್ಯಭಾಗದಲ್ಲಿ ಬೀಮ್ ಅಥವಾ ಪಿಲ್ಲರ್ ಇರುವುದು ವಾಸ್ತುಶಾಸ್ತ್ರದ ಪ್ರಕಾರ ಅಶುಭ ಎಂದು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ವಿವಾಹ ಯೋಗ್ಯರ ಕೋಣೆಯ ಮೇಲ್ಚಾವಣಿ ಇಬ್ಭಾಗವಾಗಿರಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 


ಮಲಗುವ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ, ನೀವು ಮಲಗುವ ದಿಕ್ಕು ಹಲವು ಸಂಕಷ್ಟಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಹೀಗಿರುವಾಗ ಮದುವೆಗಾಗಿ ಬಾಳಸಂಗಾತಿಯ ಹುಡುಕಾಟದಲ್ಲಿರುವವರು ತಮ್ಮ ಮಲಗುವ ಕೊನೆಯಲ್ಲಿ ವಿಶೇಷವಾಗಿ ದಕ್ಷಿಣ ದಿಕ್ಕಿನತ್ತ ತಲೆ ಹಾಕಿ ಮಲಗಬಾರದು. ಉತ್ತರ-ಪಶ್ಚಿಮ ದಿಕ್ಕು ಮಲಗಲು ಉತ್ತಮ ದಿಕ್ಕು ಎಂದು ಹೇಳಲಾಗುತ್ತದೆ. ಮಲಗುವ ದಿಕ್ಕು ತಪ್ಪಾಗಿದ್ದರೆ, ವಿವಾಹದಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಇದಲ್ಲದೆ ನೀವು ಮಲಗುವ ಮಂಚದ ತಲೆಭಾಗ ಕಿಟಕಿ ಅಥವಾ ಗೋಡೆಗೆ ಹೊಂದಿಕೊಂಡಂತೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟ ಷೂಟ್ ಅಪ್ ಆದ್ರೆ ಹೇಗೆ ನಿಯಂತ್ರಿಸಬೇಕು?


ಹಾಸಿಗೆ
ವಿವಾಹಕ್ಕೆ ಯೋಗ್ಯರಾದವರು ಯಾವಾಗಲು ತಮ್ಮ ಕೊನೆಯಲ್ಲಿ ಸಿಂಗಲ್ ಬೆಡ್ ಹಾಸಿಗೆಯ ಮೇಲೆ ಮಾತ್ರ ಮಲಗಬೇಕು. ಮಂಚದ ಕೆಲಭಾಗದಲ್ಲಿ ಲೋಹದ ಪಾತ್ರೆಗಳನ್ನು ಇಡಬೇಡಿ. ವಾಸ್ತು ಪ್ರಕಾರ ಇದು ಅನುಚಿತವಾಗಿದೆ. ಮಂಚದ ಮುಂಭಾಗದಲ್ಲಿ ಒಂದು ವೇಳೆ ಟಾಯ್ಲೆಟ್ ಅಥವಾ ಬಾತ್ ರೂಮ್ ಬಾಗಿಲು ಇದ್ದರೆ, ಪ್ರತಿ ಬಾರಿ ಬಳಕೆಯ ನಂತರ ಅದರ ಬಾಗಿಲು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅದರಿಂದ ಕೋಣೆಯಲ್ಲಿ ನಕಾರಾತ್ಮಕತೆಯ ಸಂಚಾರವಾಗುತ್ತದೆ ಮತ್ತು ವಿವಾಹದಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗುತ್ತದೆ. 


ಇದನ್ನೂ ಓದಿ-ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಬೇಕೆ? ಈ ಪಾನೀಯ ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.