Piles Causing Foods: ಮೂಲವ್ಯಾಧಿಯನ್ನು ಪೈಲ್ಸ್ ಮತ್ತು ಹೆಮೊರೊಯಿಡ್ಸ್ ಎಂದೂ ಕರೆಯುತ್ತಾರೆ. ಈ ರೋಗದಲ್ಲಿ, ನಿಮ್ಮ ಮೂತ್ರಪಿಂಡ ಮತ್ತು ಗುದನಾಳದ ರಕ್ತನಾಳಗಳಲ್ಲಿ ಊತ ಮತ್ತು ರಕ್ತಸ್ರಾವ ಪ್ರಾರಂಭವಾಗುತ್ತದೆ. ಪೈಲ್ಸ್‌ನ ಹಿಂದಿನ ಮುಖ್ಯ ಕಾರಣವೆಂದರೆ ಅದು ಮಲಬದ್ಧತೆಯ ಸಮಸ್ಯೆ, ಹೀಗಾಗಿ ನಿಮಗೆ ಆಗಾಗ್ಗೆ ಮಲಬದ್ಧತೆ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಪಡೆಯಿರಿ, ಇಲ್ಲದಿದ್ದರೆ ನಿಮಗೆ ಪೈಲ್ಸ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಯಾವ ಆಹಾರಗಳು ಮಲಬದ್ಧತೆಗೆ ಕಾರಣ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಗ್ಲುಟೆನ್ ಯುಕ್ತ ಆಹಾರ 
ಗ್ಲುಟನ್ (ಒಂದು ರೀತಿಯ ಪ್ರೋಟೀನ್) ಗೋಧಿ, ಬಾರ್ಲಿಯಂತಹ ಧಾನ್ಯಗಳಲ್ಲಿ ಕಂಡುಬರುತ್ತದೆ, ಇದು ಮಲಬದ್ಧತೆ ಮತ್ತು ನಂತರ ಪೈಲ್ಸ್ ಉಂಟುಮಾಡುತ್ತದೆ. ಗ್ಲುಟನ್ ಕೆಲವು ಜನರಲ್ಲಿ ಸ್ವಯಂ ನಿರೋಧಕ ಕಾಯಿಲೆಯನ್ನು ಉಂಟುಮಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಜೀರ್ಣಕ್ರಿಯೆಯನ್ನು ಹಾನಿಗೊಳಿಸುತ್ತದೆ.


ಹಾಲು ಮತ್ತು ಡೈರಿ ಉತ್ಪನ್ನಗಳು (ಹಸುವಿನ ಹಾಲು)
ಹಸುವಿನ ಹಾಲು ಅಥವಾ ಅದರಿಂದ ತಯಾರಿಸಿದ ಡೈರಿ ಉತ್ಪನ್ನಗಳು ಕೆಲವರಲ್ಲಿ ಮಲಬದ್ಧತೆ ಮತ್ತು ಪೈಲ್ಸ್‌ಗೆ ಕಾರಣವಾಗಬಹುದು. ಹಸುವಿನ ಹಾಲಿನಲ್ಲಿ ಕಂಡುಬರುವ ಪ್ರೋಟೀನ್ ಮಲಬದ್ಧತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ವಿಷಯ ಹಲವು ಸಂಶೋಧನೆಗಳಲ್ಲೂ ಸಾಬೀತಾಗಿದೆ. ನೀವು ಹಸುವಿನ ಹಾಲಿನ ಬದಲಿಗೆ ಸೋಯಾ ಹಾಲು ತೆಗೆದುಕೊಳ್ಳಬಹುದು.


ಫಾಸ್ಟ್ ಫುಡ್ ಗಳು
ಹೆಚ್ಚು ಫಾಸ್ಟ್ ಫುಡ್ ತಿನ್ನುವವರಿಗೆ ಮಲಬದ್ಧತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಆಹಾರಗಳಲ್ಲಿ ನಾರಿನಂಶ ಕಡಿಮೆ ಮತ್ತು ಕೊಬ್ಬಿನಂಶ ಹೆಚ್ಚಾಗಿರುತ್ತದೆ. ನೀವು ಹೆಚ್ಚು ಫಾಸ್ಟ್ ಫುಡ್ ಸೇವಿಸಿದರೆ, ಅದು ನಿಮ್ಮಲ್ಲಿ ಪೈಲ್ಸ್ ಗೂ ಕೂಡ ಒಂದು ಕಾರಣವಾಗಬಹುದು. ಇವುಗಳ ಬದಲಿಗೆ ಹಸಿರು ತರಕಾರಿ, ಹಣ್ಣು ಇತ್ಯಾದಿಗಳನ್ನು ಒಳಗೊಂಡಿರುವ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಿ.


ಇದನ್ನೂ ಓದಿ-ವಿಷಕಾರಿ ಹಾವು ಕಚ್ಚಿದಾಗ ಮರೆತೂ ಈ ತಪ್ಪುಗಳನ್ನು ಮಾಡ್ಬೇಡಿ


ಕೆಂಪು ಮಾಂಸ
ಕೆಂಪು ಮಾಂಸ ಕೂಡ ಪೈಲ್ಸ್‌ಗೆ ಕಾರಣವಾಗಬಹುದು. ಇದರಲ್ಲಿ ಅತ್ಯಲ್ಪ ನಾರಿನಂಶವಿದೆ ಮತ್ತು ಕೊಬ್ಬು ತುಂಬಾ ಜಾಸ್ತಿಯಾಗಿರುತ್ತೆ. ತುಂಬಾ ಹೆವಿಯಾಗಿರುವ ಕಾರಣ, ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಮೂಲವ್ಯಾಧಿ ರೋಗಿಗಳು ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರು ಕೆಂಪು ಮಾಂಸವನ್ನು ಸೇವಿಸಬಾರದು.


ಇದನ್ನೂ ಓದಿ-ಬೆಳಗ್ಗೆ ಹಳಸಿದ ಬಾಯಿ ಈ ಪಾನೀಯ ಸೇವಿಸಿ ಮಧುಮೇಹ ನಿಯಂತ್ರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.