Tulsi Benefits: ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಕಂಡು ಬರುವ ಸಸ್ಯ ಎಂದರೆ ತುಳಸಿ. ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನವನ್ನು ಪಡೆದಿರುವ ತುಳಸಿ ಸಸ್ಯ, ಔಷಧೀಯ ಗಣಿಯೂ ಹೌದು. ಹಿಂದೆಲ್ಲಾ, ಸಾಮಾನ್ಯ ಶೀತ, ನೆಗಡಿಯಿಂದ ಪರಿಹಾರಕ್ಕಾಗಿ ತುಳಸಿ ರಸವನ್ನು ಕುಡಿಸಲಾಗುತ್ತಿತ್ತು. ಆದರೆ, ತುಳಸಿ ಕೇವಲ ಶೀತ, ಕೆಮ್ಮಿನಿಂದ ಮಾತ್ರವಲ್ಲ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 


COMMERCIAL BREAK
SCROLL TO CONTINUE READING

ವಿಶೇಷವೆಂದರೆ, ತುಳಸಿ ಎಲೆಗಳು ಮಾತ್ರವಲ್ಲ, ತುಳಸಿ ಸಸ್ಯದ ಪ್ರತಿಯೊಂದು ಭಾಗವೂ ಕೂಡ ಆರೋಗ್ಯಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ತುಳಸಿ ಬಳಕೆಯಿಂದ ಹಲವು ಗಂಭೀರ ಆರೋಗ್ಯ ಕಾಯಿಲೆಗಳಿಂದಲೂ ಪರಿಹಾರ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ..? 


ತುಳಸಿ ಸಸ್ಯದ ಪ್ರಯೋಜನಗಳು: 
ಆರೋಗ್ಯಕ್ಕೆ ತುಳಸಿ ಸಸ್ಯದಿಂದ ಸಿಗುವ ಅದ್ಭುತ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 
* ಗಾಯದಿಂದ ಪರಿಹಾರ: 

ಮಕ್ಕಳು ಆಟವಾಡುವಾಗ ಬೀಳುವುದು, ಗಾಯ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಈ ಸಮಯದಲ್ಲಿ ತಕ್ಷಣ ತುಳಸಿ ದಳವನ್ನು ಒಸೆದು ಅದರ ರಸವನ್ನು ಗಾಯದ ಮೇಲೆ ಹಿಂಡಿದರೆ ಗಾಯ ಬೇಗ ವಾಸಿಯಾಗುತ್ತದೆ. ವಾಸ್ತವವಾಗಿ, ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು ಇದು ಗಾಯವನ್ನು ಬಹುಬೇಗ ಗುಣಪಡಿಸುತ್ತದೆ. 


ಇದನ್ನೂ ಓದಿ- ಕಪ್ಪು ಬಣ್ಣದ ಈ ಒಣಹಣ್ಣನ್ನು ನಿತ್ಯ ತಿಂದರೆ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ


* ಚರ್ಮಕ್ಕೆ ಪ್ರಯೋಜನಕಾರಿ: 
ತುಳಸಿ ಸಸ್ಯವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಪಡೆಯಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಯಮಿತವಾಗಿ ತುಳಸಿ ಬಳಸುವುದರಿಂದ ಇದು ಮೊಡವೆಗಳಿಂದ ಮುಕ್ತಿ ನೀಡಿ, ಸ್ವಚ್ಛವಾದ ಚರ್ಮವನ್ನು ಪಡೆಯಲು ಪ್ರಯೋಜನಕಾರಿ ಆಗಿದೆ. 


*  ನೋವಿನಿಂದ ಪರಿಹಾರ: 
ಸಾಮಾನ್ಯವಾಗಿ ಕಾಡುವ ಕಾಲು ನೋವು, ಬೆನ್ನು ನೋವಿನಂತಹ ಸಂದರ್ಭದಲ್ಲಿ ಕೆಲವು ತುಳಸಿ ಎಲೆಗಳನ್ನು ಸಾಸಿವೆ ಎಣ್ಣೆಯೊಂದಿಗೆ ಹುರಿದು  ಅದಕ್ಕೆ ಬೆಳ್ಳುಳ್ಳಿ ರಸವನ್ನು ಸೇರಿಸಿ ನೋವಿರುವ ಜಾಗಕ್ಕೆ ಲೇಪಿಸಿದರೆ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. 


* ಬಾಯಿಯ ದುರ್ವಾಸನೆಯಿಂದ ಪರಿಹಾರ: 
ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ತುಳಸಿ ಎಲೆಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ನಿತ್ಯ ಒಂದೆರಡು ತುಳಸಿ ಎಲೆಗಳನ್ನು ಅಗಿಯುವುದರಿಂದ ಕೆಲವೇ ದಿನಗಳಲ್ಲಿ ಬಾಯಿಯ ದುರ್ವಾಸನೆ ದೂರವಾಗುತ್ತದೆ. 


ಇದನ್ನೂ ಓದಿ- ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ಏನು ತಿಂದರೆ ಒಳ್ಳೆಯದು?


* ದೈಹಿಕ ದೌರ್ಬಲ್ಯ: 
ನಿಯಮಿತವಾಗಿ ತುಳಸಿ ಬೀಜಗಳನ್ನು ಬಳಸುವುದರಿಂದ ಪುರುಷರಲ್ಲಿ ದೈಹಿಕ ದೌರ್ಬಲ್ಯವನ್ನು ಕಡಿಮೆ ಮಾಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.