Vegetables to Avoid in Uric Acid: ದಿನನಿತ್ಯದ ಆಹಾರದಲ್ಲಿ ಅನೇಕ ತರಕಾರಿಗಳನ್ನು ತಿನ್ನುತ್ತೇವೆ. ಕೆಲವು ತರಕಾರಿಗಳು ಒಂದಷ್ಟು ಆರೋಗ್ಯ ಸಮಸಮ್ಯೆ ಇರುವವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರು ಒಂಷ್ಟು ತರಕಾರಿಗಳನ್ನು ತಿನ್ನಬಾರದು. ಇದರಿಂದ ಕೀಲು ನೋವು ಮತ್ತಷ್ಟು ಹೆಚ್ಚಾಗುವುದು.


COMMERCIAL BREAK
SCROLL TO CONTINUE READING

ಈ ತರಕಾರಿಗಳು ಹೆಚ್ಚಿನ ಪ್ಯೂರಿನ್ ಅನ್ನು ಹೊಂದಿರುತ್ತವೆ. ಇದು ಹೆಚ್ಚಿನ ಯೂರಿಕ್ ಆಮ್ಲ, ಕೀಲು ನೋವು ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಯೂರಿಕ್ ಆಸಿಡ್ ಹರಳುಗಳು ಕಾಲ್ಬೆರಳುಗಳು ಮತ್ತು ಕೀಲುಗಳಲ್ಲಿ ಸೇರಿಕೊಳ್ಳುತ್ತದೆ. ಇದು ತೀವ್ರವಾದ ನೋವನ್ನು ಉಂಟುಮಾಡುತ್ತದೆ.


ಬದನೆಕಾಯಿ: ಇದು ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿದೆ. ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡಬಹುದು. ನೀವು ಅದನ್ನು ತಿನ್ನದಿರುವುದು ಒಳ್ಳೆಯದು.


ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳ ನೀರನ್ನು ಸೇವಿಸಿ; ನಿಮ್ಮ ಆರೋಗ್ಯಕ್ಕೆ ವರ ನೀಡುತ್ತೆ ಈ ನೈಸರ್ಗಿಕ ಪಾನೀಯ!


ಪಾಲಕ್‌ : ಚಳಿಗಾಲದಲ್ಲಿ ಜನರು ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುತ್ತಾರೆ. ಆದರೆ ಈ ಸೊಪ್ಪು ಯೂರಿಕ್ ಆಸಿಡ್‌ ಸಮಸ್ಯೆ ಇರುವ ರೋಗಿಗಳಿಗೆ ಅಪಾಯಕಾರಿ. ಕಿಡ್ನಿ ಸ್ಟೋನ್‌ ಸಮಸ್ಯೆಯಿದ್ದವರು ಸಹ ಪಾಲಕ ತಿನ್ನುವುದನ್ನು ತಪ್ಪಿಸಬೇಕು.


ಬ್ರೊಕೊಲಿ: ಬ್ರೊಕೋಲಿ ತಿನ್ನುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚಾಗಬಹುದು. ಇದು ಕಾಲುಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟುಮಾಡಬಹುದು. ಇದನ್ನು ತಡೆಗಟ್ಟಲು, ಬ್ರೊಕೊಲಿ ತಿನ್ನುವುದನ್ನು ತಪ್ಪಿಸಬೇಕು.


ಅಣಬೆ: ಅಣಬೆಗಳನ್ನು ತಿನ್ನುವುದರಿಂದ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣವಾಗುವ ಪ್ಯೂರಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.  ನೀವು ಅದನ್ನು ಸೇವಿಸುವುದನ್ನು ತಪ್ಪಿಸಬೇಕು.


ಹೂಕೋಸು: ಹೂಕೋಸು ಹೆಚ್ಚಿನ ಪ್ರಮಾಣದ ಪ್ಯೂರಿನ್ ಅನ್ನು ಹೊಂದಿರುತ್ತದೆ. ಇದನ್ನು ತಿಂದರೆ ಅಧಿಕ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತದೆ. ಇದನ್ನು ತಿನ್ನುವುದರಿಂದ ಕೀಲು ನೋವಿನ ಸಮಸ್ಯೆ ಹೆಚ್ಚಾಗಬಹುದು.


(ಗಮನಿಸಿ: ನಮ್ಮ ಲೇಖನವು ಮಾಹಿತಿಯನ್ನು ಒದಗಿಸಲು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಸಂಪರ್ಕಿಸಿ.)


ಇದನ್ನೂ ಓದಿ: ಈ ತರಕಾರಿ ಕಚ್ಚಿ ತಿಂದರೆ ಸಾಕು ತಕ್ಷಣ ಡೌನ್‌ ಆಗುತ್ತೆ ಶುಗರ್‌ ಲೆವಲ್‌; ದಿನಕ್ಕೊಮ್ಮೆ ತಿಂದರೆ ಬರೋದೇ ಇಲ್ಲ ಮಧುಮೇಹ!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.