ಬೆಂಗಳೂರು : ನಗು ಎಲ್ಲರಿಗೂ ಬಹಳ ಮುಖ್ಯ.ನಗು ಮುಖವಿಟ್ಟುಕೊಂಡರೆ ಜೀವನದಲ್ಲಿ ಅರ್ಧ ಗೆದ್ದಂತೆಯೇ.ನಗು ಬೀರಬೇಕಾದರೆ ಹಲ್ಲುಗಳು ಸುಂದರವಾಗಿರುವುದು ಮುಖ್ಯ.  ಹಳದಿ ಮತ್ತು ಹುಳುಕು ಹಲ್ಲುಗಳು ಕೆಲವೊಮ್ಮೆ ನಿಮ್ಮನ್ನು ಮುಜುಗರಕ್ಕೀಡುಮಾಡುತ್ತವೆ. ಹಲ್ಲುಗಳಲ್ಲಿ ಸಣ್ಣ ಕಪ್ಪು ಕುಳಿಗಳು ಕಾಣಿಸಿಕೊಂಡರೆ ಅದನ್ನು ದಂತ ಹುಳುಗಳು ಎಂದು ಕರೆಯಲಾಗುತ್ತದೆ.ಹಲ್ಲಿನ ಹುಳುಕು ಹೆಚ್ಚಾಗುತ್ತಾ ಹೋದಂತೆ ಹಲ್ಲುಗಳು ಟೊಳ್ಳಾಗಲು ಪ್ರಾರಂಭಿಸುತ್ತವೆ.ಹಲ್ಲು ಕುಳಿಗಳಿಗೆ ಹಲವು ಕಾರಣಗಳಿರಬಹುದು.ಹಲ್ಲುಗಳನ್ನು ಸರಿಯಾಗಿ ಉಜ್ಜದೆ ಇರುವುದು, ಬಾಯಿಯಲ್ಲಿ ಬ್ಯಾಕ್ಟೀರಿಯಾದ ಸೋಂಕು,ಸಿಹಿ ಪದಾರ್ಥಗಳ ಅತಿಯಾದ ಸೇವನೆ ಅಥವಾ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ.ನೀವು ಕೂಡಾ ಹಲ್ಲಿನ ಹುಳುಕಿನಿಂದ ತೊಂದರೆಗೆ ಒಳಗಾಗಿದ್ದರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಹಲ್ಲಿನ ಹುಳುಕಿಗೆ ಮನೆ ಮದ್ದು : 
ಬೆಳ್ಳುಳ್ಳಿ : 

ಭಾರತೀಯ ಅಡುಗೆಮನೆಯಲ್ಲಿರುವ ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.ಬೆಳ್ಳುಳ್ಳಿಯನ್ನು ಹಲವು ಬಗೆಯ ಖಾದ್ಯಗಳಲ್ಲಿ ಘಮಕ್ಕಾಗಿ ಮತ್ತು ರುಚಿಗಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಇದನ್ನು ಅತ್ಯುತ್ತಮ ನೋವು ನಿವಾರಕವನ್ನಾಗಿ ಮಾಡುತ್ತದೆ.ಇದು ಹಲ್ಲುನೋವು ಮತ್ತು ಹುಳುಗಳಿಂದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ : ಮಧುಮೇಹಕ್ಕಷ್ಟೇ ಅಲ್ಲ ಕೂದಲು, ಚರ್ಮದ ಆರೈಕೆಗೂ ಅತ್ಯುತ್ತಮ ಮನೆಮದ್ದು 'ಜಾಮೂನ್ ಹಣ್ಣು'


ನಿಂಬೆ :
ನಿಂಬೆಹಣ್ಣಿನ ಸೇವನೆಯು ದಂತಕ್ಷಯವನ್ನು ಹೋಗಲಾಡಿಸಲು ಸಹಕಾರಿ.ನಿಂಬೆಯನ್ನು ವಿಟಮಿನ್ ಸಿ ಯ ಶ್ರೀಮಂತ ಮೂಲವೆಂದು ಪರಿಗಣಿಸಲಾಗಿದೆ.ಇದರಲ್ಲಿರುವ ಆಮ್ಲಗಳು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಮೂಲಕ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ ತುಂಡನ್ನು ನಿಮ್ಮ ಬಾಯಿಯಲ್ಲಿ ಸ್ವಲ್ಪ ಹೊತ್ತು ಹಾಕಿಕೊಳ್ಳಿ.ಸ್ವಲ್ಪ  ಹೊತ್ತಿನ ಬಳಿಕ ಅಗಿಯಿರಿ. ನಂತರ ಬಾಯಿಯನ್ನು ಶುದ್ದ ನೀರಿನಿಂದ ತೊಳೆಯಿರಿ.ಹಲ್ಲು ನೋವಿನಿಂದ ಪರಿಹಾರ ಸಿಗುತ್ತದೆ.ಹೀಗೆ ಮಾಡುವುದರಿಂದ ಹಲ್ಲಿನ ಹುಳುಕು ಕೂಡಾ ಕಡಿಮೆಯಾಗುತ್ತದೆ. 


ಉಪ್ಪು ನೀರು : 
ಉಪ್ಪು ಯಾವುದೇ ಆಹಾರದ ರುಚಿಯನ್ನು ಹೆಚ್ಚಿಸಲೂ ಬಹುದು, ಹಾಲು ಮಾಡಲೂ ಬಹುದು.ಹಲ್ಲಿನ ಹುಳುಕು ಮತ್ತು ನೋವಿಗೆ ಚಿಕಿತ್ಸೆ ನೀಡಲು ಉಪ್ಪು ನೀರು ತುಂಬಾ ಉಪಯುಕ್ತವಾಗಿದೆ.ಇದು ನಿಮ್ಮ ಬಾಯಿಯನ್ನು ಬ್ಯಾಕ್ಟೀರಿಯಾದಿಂದ ಮುಕ್ತವಾಗಿರಿಸುತ್ತದೆ.  ಹಲ್ಲಿನ ಹುಳುಕನ್ನು ಬುಡದಿಂದಲೇ ದೂರ ಮಾಡುತ್ತದೆ. ಉಪ್ಪು ನೀರು ನಮ್ಮ ಬಾಯಿಯಿಂದ ಆಸಿಡ್ ಅನ್ನು ಹೊರ ಹಾಕುವ ಮೂಲಕ ಬಾಯಿಯ pH ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ.


ಇದನ್ನೂ ಓದಿ : ಚಿಕನ್‌, ಮಟನ್‌ ಗಿಂತಲೂ ಹೆಚ್ಚು ಪ್ರೋಟೀನ್‌ ಹೊಂದಿದೆ ಈ ಸಸ್ಯಹಾರಿ ಪದಾರ್ಥ..! ಬೆಲೆಯೂ ಕಮ್ಮಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.