White Hair Home Remedies : ವಯಸ್ಸಲ್ಲದ ವಯಸ್ಸಿನಲ್ಲಿ ಬಿಳಿ ಕೂದಲು ಮೂಡುವುದು ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಹೀಗೆ ತಲೆಯಲ್ಲಿ ಬಿಳಿ ಕೂದಲು ಕಾಣಿಸುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ  ಸಿಗುವ  ಹೇರ್ ಕಲರ್, ಡೈಗಳ ಮೊರೆ ಹೋಗಲಾಗುತ್ತದೆ. ಈ ಎಲ್ಲಾ ವಸ್ತುಗಳು ಬಿಳಿ ಕೂದಲಿನ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುತ್ತವೆಯಾದರೂ, ಇದು ಶಾಶ್ವತ ಪರಿಹಾರ ಅಲ್ಲ ಎನ್ನುವುದನ್ನು ಕೂಡಾ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕಲರ್ ಗಳನ್ನು ಹಚ್ಚಿದ ಕೂಡಲೇ ತಲೆ ಕೂದಲು ಕಪ್ಪಾಗುತ್ತವೆ. ಇದರ ಜೊತೆಗೆ ಕೂದಲಿನ ಗುಣಮಟ್ಟವೂ ಕ್ಷೀಣಿಸಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೂದಲನ್ನು ಯಾವುದೇ ಅಡ್ಡ ಪರಿಣಾಮ ಇಲ್ಲದೆ ಬುಡದಿಂದ ಕಪ್ಪಾಗಿಸುವುದು ಕೂಡಾ ಸಾಧ್ಯ. ಅದು ಕೂಡಾ ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ. 


COMMERCIAL BREAK
SCROLL TO CONTINUE READING

ಬಿಳಿ ಕೂದಲಿಗೆ ಮನೆಮದ್ದು : 
ನೆಲ್ಲಿಕಾಯಿ 
2 ರಿಂದ 3 ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.  ನಂತರ ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು   ಕೂದಲಿಗೆ ಹಚ್ಚಿ, ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಬಿಡಿ.   ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಈ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ.  ಮಾತ್ರವಲ್ಲ ನಿಮ್ಮ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ.  


ಇದನ್ನೂ ಓದಿ : Mouth Ulcer : ಬೇಸಿಗೆ ಬೇಗೆಗೆ ಬಾಯಲ್ಲಿ ಹುಣ್ಣು ಆಗುತ್ತಿದೆಯೇ..! ಹಾಗಿದ್ದರೇ ಇಲ್ಲಿದೆ ಪರಿಹಾ


ಬ್ಲಾಕ್ ಟೀ  :
ಒಂದು ಪಾತ್ರೆಯಲ್ಲಿ ನೀರು ಮತ್ತು 2 ಚಮಚ  ಬ್ಲಾಕ್ ಟೀ ಎಲೆಗಳನ್ನು ಹಾಕಿ ಕುದಿಸಿ. ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ. ನಂತರ, ಕೂದಲನ್ನು ತೊಳೆಯುವ ನೀರಿಗೆ ಕುದಿಸಿಟ್ಟ ಬ್ಲಾಕ್ ಟೀ ಸೇರಿಸಿ.  ಕೂದಲಿಗೆ ಈ ಮಿಶ್ರಣವನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ಬಿಡಿ.  ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ, ವಾರಕ್ಕೆ ಎರಡು ಬಾರಿಯಾದರೂ ಇದನ್ನು  ಪ್ರಯತ್ನಿಸಿ. 


ಕೆಂಪು ಹರಿವೆ ಸೊಪ್ಪು : 
ಕೆಂಪು ಹರಿವೆ ಸೊಪ್ಪನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅವುಗಳನ್ನು ಪುಡಿಮಾಡಿ. ನಂತರ ಈ ಎಲೆಗಳ ಪೇಸ್ಟ್ ಅನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಹಾಗೆಯೇ ಬಿಟ್ಟು ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. 


ಇದನ್ನೂ ಓದಿ : Drumstick Health Benefits: ನುಗ್ಗೆಕಾಯಿ ಸೇವಿಸುವುದರ ಅದ್ಭುತ ಆರೋಗ್ಯ ಪ್ರಯೋಜನಗಳು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.