ಬೆಂಗಳೂರು : ಹಳದಿ ಹಲ್ಲುಗಳು ಮತ್ತು ಬಾಯಿಯ ದುರ್ವಾಸನೆಯ ಕಾರಣದಿಂದ ಮುಕ್ತವಾಗಿ ನಗಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ  ನಿರಂತರವಾಗಿ ಮುಜುಗರ ಪಡುತ್ತಿರಬೇಕಾಗುತ್ತದೆ. ನಾವು ಏನನ್ನಾದರೂ ತಿಂದ ಅಥವಾ ಕುಡಿದ ನಂತರ ಬಾಯಿಯನ್ನು ನೀರಿನಿಂದ ತೊಳೆಯದಿದ್ದರೆ ಅಥವಾ ದಿನಕ್ಕೆ ಎರಡು ಬಾರಿ ಹಲ್ಲುಜ್ಜದಿದ್ದರೆ, ಹಲ್ಲುಗಳ ಮೇಲೆ ಪ್ಲೇಕ್ ಅಥವಾ ಹಳದಿ ಪದರವು ಸಂಗ್ರಹಗೊಳ್ಳುತ್ತದೆ. ನಿಧಾನವಾಗಿ ಅದು ತನ್ನ ಹಿಡಿತವನ್ನು ಬಿಗಿಗೊಳಿಸುತ್ತದೆ. ಇದು ಹಲ್ಲುಗಳ ಬೇರುಗಳಲ್ಲಿ ಒಸಡುಗಳ ಕೆಳಗೆ ತಲುಪಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಹಲ್ಲುಗಳು ಹಳದಿಯಾಗುವುದು, ದುರ್ಬಲವಾಗುವುದು, ಬಾಯಿ ವಾಸನೆ ಬರುವುದು ಮತ್ತು ಸೋಂಕು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಮನೆಮದ್ದುಗಳು ಈ ಹಲ್ಲಿನ ಈ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದು. ಅದೂ ಕೂಡಾ ಕಡಿಮೆ ವೆಚ್ಚದಲ್ಲಿ.


COMMERCIAL BREAK
SCROLL TO CONTINUE READING

ಹಳದಿ ಹಲ್ಲು, ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ ಈ ಮನೆ ಮದ್ದು : 
ಹಳದಿ ಹಲ್ಲು, ಬಾಯಿಯ ದುರ್ವಾಸನೆ ಮತ್ತು ವಸಡು ಸಮಸ್ಯೆ ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಪೇಸ್ಟ್ ಬದಲಿಗೆ ಮನೆಯಲ್ಲಿಯೇ ತಯಾರಿಸಿದ ಆಯುರ್ವೇದ ಪುಡಿಯನ್ನು ಬಳಸಬಹುದು.  ಈ ಎಲ್ಲಾ ಸಮಸ್ಯೆಗಳಿಗೆ ಈ ಪುಡಿ ರಾಮಬಾಣವಾಗಿ ಕೆಲಸ ಮಾಡುತ್ತದೆ.


ಇದನ್ನೂ ಓದಿ : ಬಿಳಿ ಕೂದಲನ್ನು ಖರ್ಚಿಲ್ಲದೆ ಶಾಶ್ವತವಾಗಿ ಕಪ್ಪಾಗಿಸಲು ಈ ಒಂದು ಹೂವು ಸಾಕು!


ಹಲ್ಲಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು :
ಕಲ್ಲು ಉಪ್ಪು - 1 ಟೀಸ್ಪೂನ್
ಲವಂಗ ಪುಡಿ - 1 ಟೀಸ್ಪೂನ್
ದಾಲ್ಚಿನ್ನಿ ಪುಡಿ - 1 ಟೀಸ್ಪೂನ್
ಲೈಕೋರೈಸ್ ರೂಟ್ ಅಥವಾ ಜ್ಯೇಷ್ಠಮಧು  - 1 ಟೀಸ್ಪೂನ್
ಒಣ ಬೇವಿನ ಎಲೆಗಳು
ಒಣ ಪುದೀನ ಎಲೆಗಳು


ಹಲ್ಲಿನ ಪುಡಿಯನ್ನು ಈ ಕೆಳಗಿನಂತೆ ತಯಾರಿಸಿ :
ಮೇಲಿನ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ. ಅದರ ನಂತರ ಈ ಪುಡಿಯನ್ನು ಬಳಸಿ. ದೀರ್ಘಕಾಲದವರೆಗೆ ಕೆಡದಂತೆ ಉಳಿಸಲು  ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಒಂದು ಚಮಚ ಪುಡಿಯನ್ನು ತೆಗೆದುಕೊಂಡು ಹಲ್ಲುಜ್ಜುವ ಬ್ರಶ್ ಬಳಸಿ ಹಲ್ಲನ್ನು ಚೆನ್ನಾಗಿ ಬ್ರಶ್ ಮಾಡಿ. ಒಂದು ವಾರ ಈ ಪ್ರಕ್ರಿಯೆಯನ್ನು ಮಾಡುತ್ತಾ ಬಂದರೆ, ಹಲ್ಲಿನ ಬಣ್ಣ ಬದಲಾಗತೊಡಗುತ್ತದೆ. ಇದು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ. ಇದರಲ್ಲಿ ಕಲ್ಲು ಉಪ್ಪು ಹಲ್ಲುಗಳನ್ನು ಬೆಳಗಿಸುತ್ತದೆ ಮತ್ತು ಲೈಕೋರೈಸ್ ಮತ್ತು ಬೇವು ವಸಡು ಆರೋಗ್ಯವನ್ನು ಸುಧಾರಿಸುತ್ತದೆ. ಹಲ್ಲುಗಳಲ್ಲಿ ಜುಮ್ಮೆನಿಸುವಿಕೆ  ಸೆನ್ಸಿಟಿವಿಟಿ ಸಮಸ್ಯೆ ಇದ್ದರೆ ಈ ಪುಡಿ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : ತೆಂಗಿನೆಣ್ಣೆಯೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಹಚ್ಚಿದರೆ ಸಾಕು ! ಒಂದೇ ವಾರದಲ್ಲಿ ಸಂಪೂರ್ಣ ಕಪ್ಪಾಗುವುದು ಬಿಳಿ ಕೂದಲು


ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವ ಇನ್ನೊಂದು ಸಲಹೆ:
ಮಾರುಕಟ್ಟೆಯಲ್ಲಿ ಹಲವಾರು ಟೂತ್‌ಪೇಸ್ಟ್‌ಗಳು ಮತ್ತು ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ಪನ್ನಗಳು ಲಭ್ಯವಿವೆ. ಆದರೆ, ಅವುಗಳು  ದುಬಾರಿಯಾಗಿರುತ್ತವೆ. ಅಲ್ಲದೆ, ಬಳಕೆಯ ನಂತರ ಕೆಲವು ಅಡ್ಡಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆ ಕೂಡಾ ಇದೆ. ಅವುಗಳು ನಿಮ್ಮ ಹಲ್ಲುಗಳು ಮತ್ತು ಒಸಡುಗಳನ್ನು ಗಂಭೀರವಾಗಿ ಹಾನಿಗೊಳಿಸುವಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ. ಆದರೆ ಈ ಹಣ್ಣುಗಳು ಹಲ್ಲನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ. 


ಸ್ಟ್ರಾಬೆರಿಗಳು : ಸ್ಟ್ರಾಬೆರಿಗಳು ಮಾಲಿಕ್ ಆಸಿಡ್ ಹೊಂದಿರುತ್ತವೆ. ಈ ಆಸಿಡ್  ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಹಲ್ಲುಗಳ ಮೇಲಿನ  ಹಳದಿ ಪದರವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.


ಕಲ್ಲಂಗಡಿ : ಕಲ್ಲಂಗಡಿ ಹಣ್ಣಿನಲ್ಲಿ ಸ್ಟ್ರಾಬೆರಿಗಳಿಗಿಂತ ಹೆಚ್ಚು ಮ್ಯಾಲಿಕ್  ಆಸಿಡ್ ಇದೆ. ಈ ಆಸಿಡ್ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ.


ಇದನ್ನೂ ಓದಿ : Breast Cancer: ಈ 5 ಅಂಶಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು!


ಅನಾನಸ್ : ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುವಂತೆ ಮಾಡಲು ಅನಾನಸ್ ತಿನ್ನಬೇಕು. ಈ ಹಣ್ಣು ಹಲ್ಲುಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.