ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಿದರೆ ಹೊಟ್ಟೆಯ ಸಮಸ್ಯೆ ಎದುರಾಗುವುದಿಲ್ಲ !
Spices Can Help Digestion:ಕೆಲವು ಮಸಾಲೆಗಳನ್ನು ಆಹಾರದಲ್ಲಿ ಬಳಸಲೇಬೇಕು. ಈ ಮಸಾಲೆಗಳನ್ನು ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
Spices Can Help Digestion : ಭಾರತದಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ಮಸಾಲೆಗಳನ್ನು ಬಳಸಿ ಅಡುಗೆಯನ್ನು ರುಚಿಕರವಾಗಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಮಸಾಲೆಗಳನ್ನು ಬಳಸುವುದು ಕೆಲವೊಮ್ಮೆ ಜೀರ್ಣಕ್ರಿಯೆಯನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ವೈದ್ಯರು ಮಸಾಲೆಯುಕ್ತ ಆಹಾರವನ್ನು ಸೇವಿಸದಂತೆ ಸಲಹೆ ನೀಡುತ್ತಾರೆ. ಆದರೆ ಕೆಲವು ಮಸಾಲೆಗಳನ್ನು ಆಹಾರದಲ್ಲಿ ಬಳಸಲೇಬೇಕು. ಈ ಮಸಾಲೆಗಳನ್ನು ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಅಡುಗೆ ಮಾಡುವಾಗ ಈ ಮಸಾಲೆಯನ್ನು ಖಂಡಿತವಾಗಿಯೂ ಬಳಸಿ :
ಜೀರಿಗೆ :
ಜೀರಿಗೆ ಬಳಕೆಯಿಂದ ಆಹಾರದ ಘಮ ಹೆಚ್ಚುವುದು ಮಾತ್ರವಲ್ಲ, ರುಚಿಯೂ ಹೆಚ್ಚುತ್ತದೆ. ಇದರೊಂದಿಗೆ ಜೀರಿಗೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ಅದರಲ್ಲಿ ಜೀರಿಗೆ ಸೇರಿಸುವುದನ್ನು ಮರೆಯಬೇಡಿ.
ಇದನ್ನೂ ಓದಿ : Health Tips: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಈ ಹಿಟ್ಟಿನ ದೋಸೆ ಸೇವಿಸಿ: ಒಂದು ವಾರದಲ್ಲಿ ಮಧುಮೇಹ ಮಾಯ
ಓಮ ಕಾಳು :
ಓಮ ಕಾಳು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಡಿಮೆ ಮಾಡಲು ಮತ್ತು ಶೀತದಿಂದ ಪರಿಹಾರಕ್ಕಾಗಿ ಓಮ ಕಾಳನ್ನು ಬಳಸಲಾಗುತ್ತದೆ. ಯಾವುದೇ ಮಸಾಲೆಯುಕ್ತ ಆಹಾರವನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಮಕಾಳನ್ನು ಸೇರಿಸಿ. ಇದು ಎಲ್ಲಾ ರೀತಿಯ ಮಸಾಲೆಗಳು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇಂಗು :
ಇಂಗನ್ನು ಬೇಳೆಯಿಂದ ಹಿಡಿದು, ಎಲ್ಲಾ ಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಹೊಟ್ಟೆ ನೋವು, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಇಂಗು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಅಡುಗೆಯಲ್ಲಿ ಇಂಗನ್ನು ಬಳಸಿ.
ಇದನ್ನೂ ಓದಿ : Foods To Avoid Eating With Tea : ಚಹಾ ಜೊತೆ ಈ ಆಹಾರ ಪದಾರ್ಥಗಳನ್ನು ಸೇವಿಸಿದ್ರೆ ಆರೋಗ್ಯಕ್ಕಿದೆ ಅಪಾಯ!
ಸೋಂಫು :
ಸೋಂಫನ್ನು ಅನೇಕ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಅದಕ್ಕಾಗಿಯೇಪ್ರತಿ ಅಡುಗೆಯಲ್ಲಿ ಇಂಗನ್ನು ಬಳಸುವಂತೆ ಸೂಚಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.