ನವದೆಹಲಿ :  ಮನೆಯಲ್ಲಿ ಸಾಮಾನ್ಯವಾಗಿ ಕರಿದ ತಿಂಡಿಗಳನ್ನು ಮಾಡಿಯೇ ಮಾಡುತ್ತೇವೆ. ಆದರೆ ಹೆಚ್ಚಿನವರಿಗೆ ಕರಿದ ಪದಾರ್ಥಗಳನ್ನು ಮಾಡಿದ ನಂತರ ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವ ಅಭ್ಯಾಸವಿರುತ್ತದೆ (Used Cooking Oil). ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ. ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ (Side effects of Used Cooking Oil).  ಇದು ಅನೇಕ ರೋಗಗಳಿಗೂ ಕಾರನಾಗುತ್ತದೆ. 


COMMERCIAL BREAK
SCROLL TO CONTINUE READING

ಎಣ್ಣೆಯನ್ನು ಬಿಸಿ ಮಾಡುವಾಗ ಅದರಿಂದ ಟಾಕ್ಸಿನ್ ಬಿಡುಗಡೆಯಾಗುತ್ತದೆ. ಪದೇ ಪದೇ ಎಣ್ಣೆಯನ್ನು ಬಿಸಿ ಮಾಡಿದಾಗ, ಅದರಲ್ಲಿರುವ ಕೊಬ್ಬಿನ ಅಣುಗಳು ಒಡೆಯಲು ಆರಂಭವಾಗುತ್ತದೆ. ಈ ಪರಿಣಾಮವಾಗಿ ಎಣ್ಣೆಯಿಂದ (Cooking oil) ಕೆಟ್ಟ ವಾಸನೆ ಬರುತ್ತದೆ. ಇದೆ ಎಣ್ಣೆಯನ್ನು ಉಪಯೋಗಿಸಿ ತಯಾರಿಸಿದ ಆಹಾರ ಕೂಡಾ ಅದೇ ವಾಸನೆ ಬರುತ್ತದೆ. ಅಲ್ಲದೆ, ಆಹಾರ  ಹಾಳಾಗುತ್ತದೆ. 


ಇದನ್ನೂ ಓದಿ : Upset Stomach : ಹೊಟ್ಟೆಯ ಪ್ರತಿಯೊಂದು ಸಮಸ್ಯೆಗೆ ತಪ್ಪದೆ ಸೇವಿಸಿ ಈ 5 ಆಹಾರಗಳನ್ನ..!


ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ : 
ಹಲವು ಬಾರಿ ಬಿಸಿ ಮಾಡಿದ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು (Food) ತಿನ್ನುವುದರಿಂದ ಅದರಲ್ಲಿರುವ ಕೊಬ್ಬು ದೇಹಕ್ಕೆ ಹೋಗುತ್ತದೆ. ಇದರಿಂದ ಕೊಲೆಸ್ಟ್ರಾಲ್  ಹೆಚ್ಚುತ್ತದೆ. ಇದು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.


ಲಿವರ್ ಕ್ಯಾನ್ಸರ್ : 
ಪದೇ ಪದೇ ಬಿಸಿ ಮಾಡಿದ ಎಣ್ಣೆ ಅಥವಾ ಉಳಿದ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಕ್ಯಾನ್ಸರ್ (cancer) ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಇದು ಹೊಟ್ಟೆಯ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್, ಪಿತ್ತಜನಕಾಂಗದ ಕ್ಯಾನ್ಸರ್ ಮತ್ತು ಇತರ ರೀತಿಯ ಕ್ಯಾನ್ಸರ್ ಗೆ ಕಾರಣವಾಗಬಹುದು. 


ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು: 
ಉಳಿದಿರುವ ಎಣ್ಣೆಯನ್ನು ಮತ್ತೆ ಮತ್ತೆ ಬಳಸಿ, ಆಹಾರ ತಯಾರಿಸುವುದರಿಂದ ಹೊಟ್ಟೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆಳು ಬರಬಹುದು. ಈ ಕಾರಣದಿಂದಾಗಿ ಅಲ್ ಜೈಮರ್, ಅಸಿಡಿಟಿ (Acidity) ಮತ್ತು ಇತರ ಗಂಭೀರ ರೋಗಗಳನ್ನು ಕೂಡಾ ತರಬಹುದು. 


ಇದನ್ನೂ ಓದಿ : Bitter Gourd Juice: ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಈ ಜ್ಯೂಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ