ಸ್ತನ ಕ್ಯಾನ್ಸರ್.. ಭಯಬೇಡ, ಈ ಮಾಹಿತಿ ತಿಳಿದಿರಲಿ ಸಾಕು.!
Breast Cancer Awareness : ಕ್ಯಾನ್ಸರ್ ಚಿಕಿತ್ಸೆಯೊಂದಿಗೆ ಉದ್ಯೋಗ ಜೀವನದಲ್ಲಿ ಸಮತೋಲನ ತರುವುದು ಸವಾಲೊಡ್ಡುವಂತಿದ್ದರೂ, ಲಭ್ಯವಿರುವ ಚಿಕಿತ್ಸೆಗಳು, ತಂತ್ರಗಳು ಮತ್ತು ಬೆಂಬಲ ಗುಂಪುಗಳ ಕುರಿತು ನಿಮ್ಮ ವೈದ್ಯರೊಡನೆ ವಿವರವಾಗಿ ಚರ್ಚಿಸುವುದು ಸೂಕ್ತ.
Breast Cancer : ಕ್ಯಾನ್ಸರ್ ಚಿಕಿತ್ಸೆಯೊಂದಿಗೆ ಉದ್ಯೋಗ ಜೀವನದಲ್ಲಿ ಸಮತೋಲನ ತರುವುದು ಸವಾಲೊಡ್ಡುವಂತಿದ್ದರೂ, ಲಭ್ಯವಿರುವ ಚಿಕಿತ್ಸೆಗಳು, ತಂತ್ರಗಳು ಮತ್ತು ಬೆಂಬಲ ಗುಂಪುಗಳ ಕುರಿತು ನಿಮ್ಮ ವೈದ್ಯರೊಡನೆ ವಿವರವಾಗಿ ಚರ್ಚಿಸುವ ಮೂಲಕ ಈ ಸ್ಥಿತಿಯನ್ನು ಹಾದುಹೋಗುವುದು ಸಾಧ್ಯ. ಇತ್ತೀಚಿನ ಬೆಳವಣಿಗೆಗಳೊಂದಿಗೆ, ಆಧುನಿಕ ಚಿಕಿತ್ಸಾ ಆಯ್ಕೆಗಳು ಇದ್ದು, ಅವು ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಮತ್ತು ತದನಂತರ ನಿಮ್ಮ ಜೀವನವನ್ನು ತೀವ್ರವಾಗಿ ಬಾಧಿಸದಂತಹ ಸಾಧ್ಯತೆಗಳನ್ನು ಹೊಂದಿವೆ. ಉದಾಹರಣೆಗೆ, ಹಲವಾರು ಕಾರ್ಪೊರೇಟ್‌ಗಳು ಬಾಯಿಯ ಮೂಲಕ ನೀಡುವಂತಹ ಕೆಮೋಥೆರಪಿಯನ್ನು ತಮ್ಮ ಆರೋಗ್ಯ ವಿಮಾ ಕೊಡುಗೆಗಳನ್ನು ಸೇರಿಸಿವೆ.
ಭಾರತೀಯ ವೈದ್ಯಕೀಯ ಹಾಗೂ ಶಿಶು ಆಂಕಾಲಜಿ(ಅರ್ಬುದರೋಗಶಾಸ್ತ್ರ) ಸಂಘದ ಅಧ್ಯಕ್ಷ ಹಾಗೂ ಬೆಂಗಳೂರಿನ ಎಚ್‌ಸಿಜಿ ಹಾಸ್ಪಿಟಲ್‌ನ ಡಾ. ಗೋವಿಂದ್ ಬಾಬು ಕೆ, “ಚಿಕಿತ್ಸೆ ಪಡೆಯುತ್ತಿರುವಾಗ ಉದ್ಯೋಗ ಮಾಡಬೇಕೆಂದು 50-60% ಕ್ಯಾನ್ಸರ್ ರೋಗಿಗಳು ಬಯಸುವುದನ್ನು ನಾನು ಗಮನಿಸಿದ್ದೇನೆ. ಚಿಕಿತ್ಸೆಯೊಂದಿಗೆ ಬರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬಹುತೇಕ ಮಂದಿ ಇದನ್ನು ಪರಿಗಣಿಸುತ್ತಾರೆ. ಅದ್ದರಿಂದ, ತಮ್ಮ ಸಾಮಾನ್ಯ ಉದ್ಯೋಗ ಶೆಡ್ಯೂಲ್‌ಗೆ ಪೂರಕವಾಗಿರುವಂತಹ ಚಿಕಿತ್ಸಾ ತಂತ್ರವನ್ನು ಆಯ್ಕೆ ಮಾಡಿಕೊಳ್ಳುವುದು ರೋಗಿಗಳಿಗೆ ಅತ್ಯಗತ್ಯವಾಗುತ್ತದೆ. ಅನೇಕಾನೇಕ ಆಧುನಿಕ ಚಿಕಿತ್ಸಾ ಪದ್ಧತಿಗಳು ಇರುವಂತಹ ಸಂದರ್ಭದಲ್ಲಿ ನಿಮ್ಮ ಉದ್ಯೋಗ ಯೋಜನೆಗಳ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸಂಭಾವ್ಯ ವ್ಯತಿರಿಕ್ತ ಪರಿಣಾಮವನ್ನು ಅರ್ಥಮಾಡಿಕೊಂಡು ಚಿಕಿತ್ಸಾ ಯೋಜನೆಗಳ ಮೌಲ್ಯಮಾಪನ ನಡೆಸುವುದು ಅವಶ್ಯಕವಾಗುತ್ತದೆ. ಆರೋಗ್ಯಕರವಾದ ಸಮತೋಲನ ಕಾಪಾಡಿಕೊಳ್ಳಲು, ಸಹೋದ್ಯೋಗಿಗಳು ಮತ್ತು ಸಂಸ್ಥೆಯೊಂದಿಗೆ ಚಿಕಿತ್ಸಾ ಯೋಜನೆಗಳು, ಶೆಡ್ಯೂಲ್‌ಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಚಿಕಿತ್ಸೆಯ ಸಮಯದಲ್ಲಿ ಎದುರಿಸುವ ಕಷ್ಟಗಳ ಕುರಿತು ಮುಕ್ತವಾಗಿರುವುದೂ ಕೂಡ ಮುಖ್ಯವೇ.”ಎಂದು ಹೇಳುತ್ತಾರೆ.
ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ಒಂದು ಮಸಾಲೆ ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ರಾಮಬಾಣ ಉಪಾಯ!
1.ನಿಮಗಾಗಿ ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಿ: ಚಿಕಿತ್ಸಾ ವಿಧಾನ ಮತ್ತು ಅದರ ತದನಂತರದ ಅಡ್ಡಪರಿಣಾಮಗಳು, ಚಿಕಿತ್ಸೆಯ ಸಮಯದಲ್ಲಿ ಮತ್ತು ತದನಂತರ ನೀವು ಮಾಡಬಹುದಾದ ಕೆಲಸದ ವಿಧವನ್ನು ಬಾಧಿಸಬಹುದು. ಚಿಕಿತ್ಸೆಯ ವಿಷಯಕ್ಕೆ ಬಂದರೆ, ಆಧುನಿಕ ಚಿಕಿತ್ಸಾ ಆಯ್ಕೆಗಳು ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತಿವೆ. ಕಿಮೋಥೆರಪಿಗೆ ಹೋಲಿಸಿದರೆ, ಆಧುನಿಕ ಚಿಕಿತ್ಸಾಪದ್ಧತಿಗಳನ್ನು ಇನ್ನಷ್ಟು ಉತ್ತಮವಾಗಿ ಸಹಿಸಿಕೊಳ್ಳಬಹುದು ಮತ್ತು ಇವು ಸ್ವಲ್ಪವೇ ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ನಿಮ್ಮ ವೈದ್ಯರೊಡನೆ ನಿಮ್ಮ ಆಯ್ಕೆಗಳ ಕುರಿತು ಚರ್ಚಿಸಿ ನಿಮಗೆ ಮತ್ತು ನಿಮ್ಮ ವಿಶಿಷ್ಟವಾದ ಪರಿಸ್ಥಿತಿಗೆ ಯಾವುದು ಅತ್ಯುತ್ತಮವಾದುದು ಎನ್ನುವುದರ ಬಗ್ಗೆ ಮಾಹಿತಿಯುಕ್ತ ತೀರ್ಮಾನವನ್ನು ಕೈಗೊಳ್ಳುವುದು ಅತಿಮುಖ್ಯ.
2. ನಿಮ್ಮ ಉದ್ಯೋಗದಾತರೊಡನೆ ಮುಕ್ತ ಸಂವಾದ: ನಿಮ್ಮ ರೋಗದ ಪತ್ತೆ ಮತ್ತು ಚಿಕಿತ್ಸಾ ಯೋಜನೆಯ ಬಗ್ಗೆ ನಿಮ್ಮ ಉದ್ಯೋಗದಾತರು ಮತ್ತು ಸಹೋದ್ಯೋಗಿಗಳಿಗೆ ತಿಳಿಯಪಡಿಸಿ. ಮುಕ್ತ ಸಂವಾದ ಏರ್ಪಡಿಸಿಕೊಳ್ಳುವುದರಿಂದ ವಾಸ್ತವ ನಿರೀಕ್ಷೆಗಳನ್ನು ಇರಿಸಿಕೊಂಡು ಉದ್ಯೋಗಸ್ಥಳದಲ್ಲಿ ಬೆಂಬಲ ಒದಗಿಸುವುದಕ್ಕೆ ಅವಕಾಶವಾಗುತ್ತದೆ. ನಿಮ್ಮ ಲಭ್ಯತೆ ಅಥವಾ ಉದ್ಯೋಗಹೊರೆಯಲ್ಲಿನ ಸಂಭಾವ್ಯ ಬದಲಾವಣೆಗಳನ್ನು ವಿವರಿಸುವುದರಿಂದ ಯಾವುದೇ ತಪ್ಪು ಅಭಿಪ್ರಾಯಗಳನ್ನು ತಡೆಗಟ್ಟಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
3. ನಿಮ್ಮ ಚಿಕಿತ್ಸಾ ಶೆಡ್ಯೂಲ್ ಯೋಜಿಸಿ: ಸಾಧ್ಯವಾದಲ್ಲಿ, ನಿಮ್ಮ ಕೆಲಸದ ವೇಳೆಗಳ ಮೇಲೆ ಕನಿಷ್ಟ ಪ್ರಭಾವ ಬೀರುವಂತಹ ಸಮಯಗಳಲ್ಲಿ ಚಿಕಿತ್ಸೆಗಳು ಮತ್ತು ಸಂದರ್ಶನ ಭೇಟಿಗಳನ್ನು ಶೆಡ್ಯೂಲ್ ಮಾಡಿಕೊಳ್ಳಲು ನಿಮ್ಮ ವೈದ್ಯಕೀಯ ತಂಡದೊಡನೆ ಸಹಯೋಗ ಏರ್ಪಡಿಸಿಕೊಳ್ಳಿ. ಇದು, ಬೆಳಿಗ್ಗಿನ ಝಾವಗಳಲ್ಲಿ ಅಥವಾ ಸಂಜೆ ತಡವಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಅಥವಾ ವಾರದ ನಿರ್ದಿಷ್ಟ ದಿನಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದನ್ನು ಒಳಗೊಂಡಿರಬಹುದು. ಉದಾಹರಣೆಗೆ, ನೀವು ಶುಕ್ರವಾರದಂದು ಚಿಕಿತ್ಸೆ ಪಡೆದುಕೊಳ್ಳಲು ಯೋಜಿಸಿದರೆ, ವಾರಾಂತ್ಯದಲ್ಲಿ ನಿಮಗೆ ವಿಶ್ರಾಂತಿ ಪಡೆದುಕೊಳ್ಳಲು ಸಮಯವಿರುತ್ತದೆ.
4. ಪರಿವರ್ತನೀಯ ಉದ್ಯೋಗ ಏರ್ಪಾಡುಗಳು: ದೂರದಿಂದಲೇ ಕೆಲಸ ಮಾಡುವುದು, ಅಥವಾ ಸರಿಪಡಿಸಿಕೊಳ್ಳಬಹುದಾದ ಉದ್ಯೋಗ ಸಮಯಗಳು, ಅಥವಾ ಸಾಧ್ಯವಾದಲ್ಲಿ ಕಡಿಮೆ ಕೆಲಸದ ಹೊರೆ ಮುಂತಾದ ಪರಿವರ್ತನೀಯ ಉದ್ಯೋಗ ಏರ್ಪಾಡುಗಳಿಗೆ ಕೋರಿಕೆ ಸಲ್ಲಿಸಿ. ಈ ರೀತಿ ಬದಲಾವಣೆ ಕೋರುವುದರಿಂದ ನಿಮ್ಮ ವೈದ್ಯಕೀಯ ಸಂದರ್ಶನಗಳಿಗೆ ಭೇಟಿ ನೀಡಲು, ಅಡ್ಡಪರಿಣಾಮಗಳನ್ನು ನಿರ್ವಹಿಸಲು ಮತ್ತುನಿಮ್ಮ ಉದ್ಯೋಗದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಸಮಯದಲ್ಲೇ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಲು ಸಮಯ ಮತ್ತು ಕಾಲಾವಕಾಶ ದೊರಕುತ್ತದೆ.
5. ಸ್ವಯಂ-ಆರೈಕೆಗೆ ಆದ್ಯತೆ ನೀಡಿ: ನಿಮ್ಮ ಆರೋಗ್ಯ ಎಲ್ಲಕ್ಕಿಂತಲೂ ಮಿಗಿಲಾದುದು ಎಂಬುದನ್ನು ಅರಿತುಕೊಳ್ಳಿ. ಸೂಕ್ತವಾದ ವ್ಯಾಯಾಮಗಳು, ಸಮತುಲಿತ ಪೋಷಣೆ, ಸಾಕಷ್ಟು ನಿದ್ರೆ ಒಳಗೊಂಡಂತೆ ಸ್ವಯಂ-ಆರೈಕೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ನಿಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ನೀವು ಚಿಕಿತ್ಸೆ ಮತ್ತು ಉದ್ಯೋಗದ ಬೇಡಿಕೆಗಳು ಎರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತೀರಿ.
6. ಬೆಂಬಲ ವ್ಯವಸ್ಥೆಗಳನ್ನು ಬಳಸಿಕೊಳ್ಳಿ: ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಬೆಂಬಲ ಗುಂಪುಗಳು ಒಳಗೊಂಡಂತೆ, ನಿಮ್ಮ ಬೆಂಬಲ ಕಾರ್ಯಜಾಲದ ಮೇಲೆ ಅವಲಂಬಿಸಿ. ಇತರರು ನಿಭಾಯಿಸಬಹುದಾದ ಕೆಲಸಗಳನ್ನು ನಿಯಮಿಸಿ. ಇದರಿಂದ ನೀವು ನಿಮ್ಮ ಚಿಕಿತ್ಸೆಯ ಮೇಲೆ ಗಮನ ಕೇಂದ್ರೀಕರಿಸಿ, ನಿತ್ರಾಣಭಾವವಿಲ್ಲದೆ ನಿಮ್ಮ ಕೆಲಸ ಮಾಡಬಹುದು. ಇವರುಗಳ ನೆರವು ನಿಮ್ಮ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ನೀವು ನಿಮ್ಮ ಉದ್ಯೋಗ-ಜೀವನದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.
7. ವಾಸ್ತವ ಗುರಿಗಳನ್ನು ಇರಿಸಿಕೊಳ್ಳಿ: ಚಿಕಿತ್ಸೆಯ ಸಮಯದಲ್ಲಿ ನೀವು ನಿಮ್ಮ ಪ್ರಸ್ತುತದ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವಂತಹ ವೃತ್ತಿಪರ ಗುರಿಗಳನ್ನು ಇರಿಸಿಕೊಳ್ಳಿ. ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ ನೀವು ಎಷ್ಟು ಸಾಧಿಸಬಲ್ಲಿರಿ ಎನ್ನುವುದರ ವಾಸ್ತವ ಅರಿವು ಇರಲಿ. ಸಾಧ್ಯಗೊಳಿಸುವಂತಹ ಮೈಲಿಗಲ್ಲುಗಳನ್ನು ಇರಿಸಿಕೊಳ್ಳುವುದರಿಂದ ನಿತ್ರಾಣಗೊಳ್ಳುವುದು ತಪ್ಪುವುದರ ಜೊತೆಗೆ ಸಾಧನೆಯ ಭಾವವೂ ಏರ್ಪಡುತ್ತದೆ.
ಇದನ್ನೂ ಓದಿ: ಈ ಸಮಸ್ಯೆಗಳನ್ನು ಮೂಲದಿಂದಲೇ ನಿವಾರಿಸಲು ಕೆಂಪು ದ್ರಾಕ್ಷಿ ಸೇವಿಸಿ !
ಮುಕ್ತವಾಗಿ ಮಾತುಕತೆಯಾಡುವುದರಿಂದ, ಸ್ವಯಂ-ಆರೈಕೆ ಮಾಡಿಕೊಳ್ಳುವುದರಿಂದ ಮತ್ತು ಪರಿವರ್ತನೀಯ ಉದ್ಯೋಗ ಏರ್ಪಾಡುಗಳ ಬಗ್ಗೆ ಆಲೋವಿಸುವುದರಿಂದ ನೀವು ಈ ಪಯಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಕ್ರಮಿಸಬಹುದು. ಚಿಕಿತ್ಸಾ ಆಯ್ಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವಾಗ, ನಿಮ್ಮ ಆರೋಗ್ಯಕ್ಕೆ ಮತ್ತು ತೃಪ್ತಿಕರವಾದ ಉದ್ಯೋಗ-ಜೀವನ ಸಮತೋಲನ ನಿರ್ವಹಿಸುವ ಸಾಮರ್ಥ್ಯಕ್ಕೆ ಆದ್ಯತೆ ನೀಡಿ. ಆರೋಗ್ಯ ಶುಶ್ರೂಷಾ ವೃತ್ತಿಪರರಿಂದ ಮಾರ್ಗದರ್ಶನ ಪಡೆದುಕೊಂಡು ನಿಮ್ಮ ಬೆಂಬಲ ಕಾರ್ಯಜಾಲವನ್ನು ಹೆಚ್ಚಿಸಿಕೊಳ್ಳುವುದರಿಂದ ನಿಮ್ಮ ವಿಶಿಷ್ಟಪರಿಸ್ಥಿತಿಗೆ ನೀವು ಅತ್ಯುತ್ತಮ ತೀರ್ಮಾನಗಳನ್ನು ಕೈಗೊಳ್ಳುವ ಶಕ್ತಿ ಪಡೆದುಕೊಳ್ಳುತ್ತೀರಿ ಎಂಬುದನ್ನು ನೆನಪಿಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.