ಬೇಸಿಗೆಯಲ್ಲಿ ಪ್ರತಿ ನಿತ್ಯ ಎಳನೀರನ್ನು ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ!
ಎಳನೀರಿನ ಪ್ರಮುಖ ವೈಶಿಷ್ಟ್ಯವೆಂದರೆ ಅದು ದೇಹ ಉಷ್ಣತೆಯನ್ನು ನಿಯಂತ್ರಿಸಿ, ದೇಹವನ್ನು ತಂಪಾಗಿರಿಸುತ್ತದೆ.
ಬೆಂಗಳೂರು: ಬೇಸಿಗೆಯಲ್ಲಿ ನೀವು ನಿಮ್ಮ ಶರೀರವನ್ನು ಸ್ವಸ್ಥ ಹಾಗೂ ತಂಪಾಗಿರಬೇಕೆಂದು ಬಯಸಿದರೆ ಎಳನೀರು ನಿಮಗೆ ಸಹಕರಿಸುತ್ತದೆ. ಬೇಸಿಗೆಯಲ್ಲಿ ಎಳನೀರು ಸೇವಿಸುವುದರಿಂದ ಅದು ಆರೋಗ್ಯಕ್ಕೆ ಅನೇಕ ವಿಧದಲ್ಲಿ ಪ್ರಯೋಜನಕಾರಿಯಾಗಿದೆ. ಮನೆಯಿಂದ ಹೊರಹೋಗುವ ಮೊದಲು ಎಳನೀರು ಸೇವಿಸುವುದರಿಂದ ಅದು ದೇಹ ಉಷ್ಣತೆಯನ್ನು ನಿಯಂತ್ರಿಸಿ, ದೇಹವನ್ನು ತಂಪಾಗಿರಿಸುತ್ತದೆ.
ಶಕ್ತಿಯ ಅತ್ಯುತ್ತಮ ಮೂಲ:
ಎಳನೀರಿನ ಮುಖ್ಯ ವೈಶಿಷ್ಟ್ಯವೆಂದರೆ ಇದು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ನಮ್ಮ ದೇಹಕ್ಕೆ ಅಗತ್ಯವಿರುವ ಹೆಚ್ಚು ಅಂಶಗಳನ್ನು ಎಳನೀರು ಒಳಗೊಂಡಿರುತ್ತದೆ. ಇದು ದೇಹವನ್ನು ದಿನವಿಡೀ ಶಕ್ತಿಯುತವಾಗಿಸುತ್ತದೆ ಮತ್ತು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ.
ಖನಿಜಗಳು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ:
ಎಳನೀರು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ಗಳನ್ನು ಒಳಗೊಂಡಿದೆ, ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದು ಕಾರ್ಬೋಹೈಡ್ರೇಟ್ನ ಉತ್ತಮ ಮೂಲವಾಗಿದೆ. ಜೀರ್ಣಕ್ರಿಯೆ ಸರಿಯಾಗಿಲ್ಲವಾದರೆ, ಎಳನೀರು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಜೊತೆಗೆ ಇದರಲ್ಲಿರುವ ಜೈವಿಕ ಕಿಣ್ವಗಳು ದೇಹದಲ್ಲಿ ಬೇಡವಾದ ಕೊಬ್ಬನ್ನು ಕರಗಿಸುತ್ತದೆ. ಹಾಗಾಗಿ ಇದು ತೂಕ ಕಡಿಮೆ ಮಾಡಲು ಸಹಾಯಕವಾಗಿದೆ.