ನವದೆಹಲಿ: ವಾಕಿಂಗ್ ವ್ಯಾಯಾಮದ ಸರಳ ಮತ್ತು ಅತ್ಯಂತ ಪರಿಣಾಮಕಾರಿ ರೂಪಗಳಲ್ಲಿ ಒಂದಾಗಿದೆ. ಇದು ಕಡಿಮೆ-ಪ್ರಭಾವದ ಚಟುವಟಿಕೆಯಾಗಿದ್ದು, ಅದು ಎಲ್ಲಿ ಬೇಕಾದರೂ ನೀವು ಸುಲಭವಾಗಿ ಮಾಡಬಹುದಾಗಿದೆ. ಪ್ರತಿದಿನ ವಾಕಿಂಗ್ ಮಾಡಿದ್ರೆ ನೀವು ಅನೇಕ ಆರೋಗ್ಯ ಪ್ರಯೋಜನ ಪಡೆಯುತ್ತೀರಿ.


COMMERCIAL BREAK
SCROLL TO CONTINUE READING

ಅನೇಕ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ದಿನಕ್ಕೆ 10 ಸಾವಿರ ಹೆಜ್ಜೆಗಳ ಗುರಿ ಇಟ್ಟುಕೊಂಡಿರುತ್ತಾರೆ. ಇದು ದೈಹಿಕ ಚಟುವಟಿಕೆಗೆ ಜನಪ್ರಿಯ ಶಿಫಾರಸು ಆಗಿದೆ. ವಾಕಿಂಗ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಹೃದಯ ಮತ್ತು ಶ್ವಾಸಕೋಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: Health Tipes: ಹರಿವೆ ಸೊಪ್ಪಿನ ಬಗ್ಗೆ ಅರಿವು ಇದೆಯೇ 


ವಾಕಿಂಗ್ ಸ್ನಾಯುಗಳನ್ನು ಮತ್ತು ಬಲಪಡಿಸಲು ಸಹಕಾರಿ. ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ, ಇದು ಆಸ್ಟಿಯೊಪೊರೋಸಿಸ್ ತಡೆಯಲು ಸಹಾಯ ಮಾಡುತ್ತದೆ. ಆದರೆ ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವುದು ಇಡೀ ದಿನದ ವ್ಯಾಯಾಮಕ್ಕೆ ಸಮನಾಗಿರುತ್ತದೆಯೇ? ಫಿಟ್‌ನೆಸ್ ತರಬೇತುದಾರರ ಪ್ರಕಾರ, ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವವರು ವೈದ್ಯರನ್ನು ದೂರವಿಡಬಹುದು ಎಂದು ಸೂಚಿಸಿದ್ದಾರೆ. ನಿಮ್ಮ ಫಿಟ್‌ನೆಸ್ ಗುರಿ ಸಾಧಿಸಲು ನಿಮಗೆ ಇದು ಸಂಪೂರ್ಣ ತಾಲೀಮಾಗಿದೆ. ದಿನಕ್ಕೆ ಕೆಲವು ಸಾವಿರ ಹೆಜ್ಜೆ ನಡೆಯುವುದು ನೀವು ಸಕ್ರಿಯವಾಗಿರಲು ಮತ್ತು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವ ಉತ್ತಮ ಮಾರ್ಗವಾಗಿದೆ.


ನಡಿಗೆ ಪರಿಣಾಮಕಾರಿ


ಹಗಲು ಮನೆಯ ಸುತ್ತಮುತ್ತ ನಡೆಯಲು ಅಥವಾ ಉದ್ಯಾನವನಕ್ಕೆ ಹೋಗಲು ಸಾಧ್ಯವಾಗದಿದ್ದರೆ ನಿಮ್ಮದು ಜಡ ಜೀವನಶೈಲಿಯಾಗುತ್ತದೆ. ಪ್ರತಿದಿನ 10 ಸಾವಿರ ಹೆಜ್ಜೆ ನಡೆಯುವ ಗುರಿ ಹೊಂದುವುದು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಮೊದಲು ಕೆಲವು ಸಾವಿರ ಹೆಜ್ಜೆಗಳನ್ನು ಪೂರ್ಣಗೊಳಿಸಿ ಹಂತ ಹಂತವಾಗಿ ನೀವು 10 ಸಾವಿರ ಹೆಜ್ಜೆಗಳ ಗುರಿ ಸಾಧಿಸುವ ಬಗ್ಗೆ ಪ್ಲಾನ್ ಮಾಡಬೇಕು.


ಇದನ್ನೂ ಓದಿ: ಮಸೂರ್‌ ದಾಲ್‌ನಿಂದ ತ್ವಚೆಗೆ ಆಗುವ ಅನುಕೂಲಗಳಿವು..!


10 ಸಾವಿರ ಹೆಜ್ಜೆಗೆ 500 ಕ್ಯಾಲೋರಿ ಬರ್ನ್! 


ವಾಕಿಂಗ್‌ನ ದೊಡ್ಡ ಪ್ರಯೋಜನವೆಂದರೆ ಕ್ಯಾಲೊರಿಗಳನ್ನು ಬರ್ನ್ ಸಾಮರ್ಥ್ಯ ಮತ್ತು ತೂಕ ನಷ್ಟಕ್ಕೆ ಸಹಕಾರಿ. ಪ್ರತಿದಿನ 10 ಸಾವಿರ ಹೆಜ್ಜೆಗಳನ್ನು ನಡೆಯುವುದರಿಂದ ಸುಮಾರು 500 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಇದು ತೂಕ ನಷ್ಟ ಪ್ರಯತ್ನಕ್ಕೆ ಉತ್ತಮ ಮಾರ್ಗವಾಗಿದೆ. ವಾಕಿಂಗ್ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


10 ಸಾವಿರ ಹೆಜ್ಜೆಯ ಗುರಿ ಮುಟ್ಟುವುದು ಹೇಗೆ? 


ನೀವು ಮೊದಲು ಸಣ್ಣ ಗುರಿಯೊಂದಿಗೆ ಪ್ರಾರಂಭಿಸಿ. ದಿನಕ್ಕೆ 3000, 5000 ಹೀಗೆ ಹೆಚ್ಚಿಸುತ್ತಾ 10 ಸಾವಿರ ಹೆಜ್ಜೆಗಳ ಗುರಿ ಮುಟ್ಟಬಹುದು.  Fitbit, Apple Watch ಮುಂತಾದ ಸ್ಮಾರ್ಟ್ ಟ್ರ್ಯಾಕರ್ ಅಥವಾ ನಿಮ್ಮ Android ಅಥವಾ iPhoneನಲ್ಲಿ Health ಅಪ್ಲಿಕೇಶನ್ ಸಹ ಬಳಸಬಹುದು.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯಕೀಯ ಸಲಹೆ  ಪಡೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.