ಹೃದಯಾಘಾತದ ಅಪಾಯದಿಂದ ಪಾರಾಗಲು ತಪ್ಪದೇ ಸೇವಿಸಿ ಈ ಡ್ರೈ ಫ್ರೂಟ್
Dry Fruits For Heart: ಒಣ ಹಣ್ಣುಗಳ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೇ ಇದೆ. ಒಣ ಹಣ್ಣುಗಳಲ್ಲಿ ಒಂದು ಹಣ್ಣು ಮಾತ್ರ ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ?
ಆರೋಗ್ಯಕರ ಹೃದಯಕ್ಕಾಗಿ ವಾಲ್ನಟ್: ಭಾರತದಲ್ಲಿ ಪ್ರತಿ ವರ್ಷ, ಹೆಚ್ಚಿನ ಜನರು ಹೃದಯಾಘಾತದಿಂದ ತಮ್ಮ ಸಾವನ್ನಪ್ಪುತ್ತಾರೆ. ಹಾರ್ಟ್ ಅಟ್ಯಾಕ್ ಯಾವಾಗ ಯಾರಿಗೆ ಸಂಭವಿಸುತ್ತದೆ ಎಂಬ ಬಗ್ಗೆ ಊಹಿಸಲೂ ಸಾಧ್ಯವಿಲ್ಲ ಹಾಗಾಗಿ ಈ ಮಾರಣಾಂತಿಕ ಕಾಯಿಲೆ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ದೇಶದಲ್ಲಿ, ಜನರು ಹೆಚ್ಚು ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವನ್ನು ತೆಗೆದುಕೊಳ್ಳುತ್ತಾರೆ, ಇದು ರುಚಿಕರವಾಗಿರಬಹುದು, ಆದರೆ ಹೃದಯದ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಒಣ ಹಣ್ಣುಗಳನ್ನು ತಿನ್ನುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
ಈ ಡ್ರೈ ಫ್ರೂಟ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:
ಅಂದಹಾಗೆ, ಪ್ರತಿಯೊಂದು ಡ್ರೈ ಫ್ರೂಟ್ ಸಹ ಆರೋಯ್ಗಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ವಾಲ್ನಟ್ ಹೃದಯದ ಆರೋಗ್ಯಕ್ಕೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ ಎಂದು ನಿಮಗೆ ತಿಳಿದಿದೆಯೇ?
ಹೃದಯವು ನಮ್ಮ ದೇಹದ ಬಹುಮುಖ್ಯ ಅಂಗವಾಗಿದ್ದು, ಅದನ್ನು ಆರೋಗ್ಯವಾಗಿಡಲು, ಪೋಷಕಾಂಶಗಳ ಕೊರತೆಯಾಗದಂತೆ ನಿಗಾವಹಿಸುವುದು ಬಹಳ ಮುಖ್ಯ.
ಇದನ್ನೂ ಓದಿ- White Hair: ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುತ್ತೆ ಅಡುಗೆ ಮನೆಯಲ್ಲಿರುವ ಈ ವಸ್ತು
ವಾಲ್ನಟ್ ಹೃದಯಕ್ಕೆ ಏಕೆ ಪ್ರಯೋಜನಕಾರಿ?
ವಾಲ್ನಟ್ ಅನ್ನು ಸ್ಟೆರಾಲ್ಗಳು ಮತ್ತು ಸಸ್ಯ-ಆಧಾರಿತ ಒಮೆಗಾ-3 ಕೊಬ್ಬಿನಾಮ್ಲಗಳ ಮೂಲವೆಂದು ಪರಿಗಣಿಸಲಾಗುತ್ತದೆ ಮತ್ತು ಲಿನೋಲೆನಿಕ್ ಆಮ್ಲ ಇದರಲ್ಲಿ ಸಮೃದ್ಧವಾಗಿದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಅದು ಮೊದಲು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಂತರ ಹೃದಯಾಘಾತದಂತಹ ಹೃದಯ ಸಂಬಂಧಿ ಕಾಯಿಲೆಗಳ ಭಯ ಉಂಟಾಗುತ್ತದೆ ಎಂಬುದನ್ನು ನೆನಪಿಡಿ. ಸಸ್ಯಾಹಾರಿಗಳು ವಿಶೇಷವಾಗಿ ಒಮೆಗಾ -3 ಮತ್ತು 6 ಕೊಬ್ಬಿನಾಮ್ಲಗಳ ದೈನಂದಿನ ಅಗತ್ಯವನ್ನು ಪೂರೈಸುವುದರಿಂದ ವಾಲ್ನಟ್ಸ್ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ.
ಮಧುಮೇಹದಲ್ಲಿ ಪರಿಣಾಮಕಾರಿ:
ವಾಲ್‌ನಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ, ಫೈಬರ್, ವಿಟಮಿನ್ ಇ, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬು ಇದರಲ್ಲಿ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಹೃದಯಾಘಾತವನ್ನು ತಡೆಗಟ್ಟಬಹುದು. ಅಷ್ಟು ಮಾತ್ರವಲ್ಲಿ ಸೀಮಿತ ಪ್ರಮಾಣದಲ್ಲಿ ಇದನ್ನು ತಿನ್ನುವುದರಿಂದ ಟೈಪ್ 2 ಮಧುಮೇಹದ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ- ಮಕ್ಕಳ ಹಲ್ಲು-ಒಸಡುಗಳಿಗೆ ಹಾನಿಕಾರಕ ಆಹಾರಗಳಿವು
ಹೆಚ್ಚು ವಾಲ್ನಟ್ಸ್ ತಿನ್ನುವುದು ಹಾನಿಕಾರಕ:
ವಾಲ್ನಟ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು, ದುರ್ಬಲ ಜನರು 10-12 ತುಂಡು ವಾಲ್ನಟ್ಗಳನ್ನು ತಿನ್ನಬಹುದು, ಆದರೆ ಆರೋಗ್ಯವಂತ ಜನರು 6-7 ತುಂಡುಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಹೃದ್ರೋಗ ರೋಗಿಗಳು 2 ರಿಂದ 4 ತುಂಡು ವಾಲ್ನಟ್ಸ್ ಅನ್ನು ಮಾತ್ರ ತಿನ್ನಬೇಕು. ಇದನ್ನು ಅಗತ್ಯಕ್ಕಿಂತ ಹೆಚ್ಚು ತಿಂದರೆ ಕ್ಯಾಲೋರಿ ಹೆಚ್ಚುತ್ತದೆ ಮತ್ತು ಲಾಭದ ಬದಲು ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.