ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬೇಕೆ? ಸಲಾಡ್ ಗೆ ಈ ಒಂದು ಪದಾರ್ಥ ಬೆರೆಸಿ ಸೇವಿಸಿ ಸಾಕು!
Taming Diabetes: ನೀವು ಕೂಡ ಒಂದು ವೇಳೆ ಮಧುಮೇಹದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪ್ರತಿದಿನ ಬೆಳಗ್ಗೆ ನೀವು ಸೇವಿಸುವ ಸಲಾಡ್ನೊಂದಿಗೆ ಈ ಬೀಜವನ್ನು ಸೇವಿಸಿ, ಇದು ನಿಮ್ಮ ಸಕ್ಕರೆಯನ್ನು ದಿನದ ಆರಂಭದಿಂದ ಕೊನೆಯವರೆಗೆ ನಿಯಂತ್ರಣದಲ್ಲಿಡುತ್ತದೆ (Health News In Kannada).
ಬೆಂಗಳೂರು: ವಿಶ್ವಾದ್ಯಂತ ಕೋಟ್ಯಾಂತರ ಜನರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ ಒಂದು ಜೀವನಶೈಲಿಯ ಕಾಯಿಲೆಯಾಗಿದ್ದು, ಅದನ್ನು ಜಯಿಸಲು, ರೋಗಿಯು ತನ್ನ ಆಹಾರ ಮತ್ತು ಜೀವನಶೈಲಿಯ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅವನ ಸಕ್ಕರೆ ಮಟ್ಟವನ್ನು ನಿರಂತರವಾಗಿ ನಿಗವಹಿಸಬೇಕು (Health News In Kannada). ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ತುಂಬಾ ಅಪಾಯಕಾರಿಯಾಗಿರುತ್ತದೆ. ಹೀಗಾಗಿ ನಿಮ್ಮ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನೀವು ಸಹ ಮಧುಮೇಹದಿಂದ ಬಳಲುತ್ತಿದ್ದರೆ, ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳು ಮತ್ತು ಆಹಾರದಲ್ಲಿ ಕೆಲವು ವಿಶೇಷ ಸಂಗತಿಗಳನ್ನು ಶಾಮೀಲುಗೊಳಿಸುವ ಮೂಲಕ ನೀವು ಅದನ್ನು ನಿಯಂತ್ರಿಸಬಹುದು. ಇಂದು ನಾವು ನಿಮಗೆ ಅಂತಹ ಒಂದು ವಿಶೇಷ ಸಂಗತಿಯ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದು, ಅದನ್ನು ಪ್ರತಿದಿನ ಬೆಳಗೆ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಅದು ಸಹಾಯ ಮಾಡುತ್ತದೆ. ಬನ್ನಿ ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ,
ಅಗಸೆ ಬೀಜಗಳು
ಇತ್ತೀಚಿನ ಸಂಶೋಧನೆಯ ಪ್ರಕಾರ, ಅಗಸೆ ಬೀಜಗಳಲ್ಲಿ ಕರಗುವ ಮತ್ತು ಕರಗದ ನಾರುಗಳೆರಡರಿರುವುದರಿಂದ, ಈ ಬೀಜಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳ ವರ್ಗಕ್ಕೆ ಸೇರುತ್ತದೆ ಎನ್ನಲಾಗಿದೆ. ಅಂದರೆ, ಅವುಗಳನ್ನು ಸೇವಿಸುವುದರಿಂದ ವ್ಯಕ್ತಿಯಲ್ಲಿ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವ ಅಪಾಯವಿಲ್ಲ. ಅಷ್ಟೇ ಅಲ್ಲ, ನಾರಿನಂಶವಿರುವ ಆಹಾರವಾಗಿರುವುದರಿಂದ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಲು ಬಿಡುವುದಿಲ್ಲ.
ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತದೆ
ಒಂದು ಅಧ್ಯಯನದ ಪ್ರಕಾರ, ಅಗಸೆ ಬೀಜಗಳಿಂದ ತಯಾರಿಸಿದ 10 ಗ್ರಾಂ ಪುಡಿಯನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶೇ.20 ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಈ ಅಧ್ಯಯನದಲ್ಲಿ ಪ್ರತಿದಿನ 5 ಗ್ರಾಂ ಲಿನ್ಸೆಡ್ ಅನ್ನು ಆಹಾರದೊಂದಿಗೆ ಸೇವಿಸುವ ಜನರು ಉಪವಾಸದಲ್ಲಿ ರಕ್ತದಲ್ಲಿನ ಗ್ಲೂಕೋಸ್ನಲ್ಲಿ ಶೇ. 12 ರಷ್ಟು ಕಡಿಮೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಲಿನ್ಸೆಡ್ ಬೀಜಗಳು ಮಧುಮೇಹಕ್ಕೆ ರಾಮಬಾಣವೆಂದು ಸಾಬೀತಾಗಬಹುದು. .
ಬಳಕೆಯ ವಿಧಾನ ಏನು
ಇದಕ್ಕಾಗಿ, 10 ಗ್ರಾಂ ಲಿನ್ಸೆಡ್ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಬೆಳಗ್ಗೆ ನೀರನ್ನು ಫಿಲ್ಟರ್ ಮಾಡಿ ಮತ್ತು ಎಲೆಕೋಸು, ಈರುಳ್ಳಿ, ಟೊಮೆಟೊ, ಕರಿಮೆಣಸು ಮತ್ತು ಉಪ್ಪಿನೊಂದಿಗೆ ತಯಾರಿಸಿದ ಸಲಾಡ್ನಲ್ಲಿ ಈ ಬೀಜಗಳನ್ನು ಮಿಶ್ರಣ ಮಾಡಿ ನಂತರ ಸೇವಿಸಿ.
ಇದನ್ನೂ ಓದಿ-ಬೆಳಗ್ಗೆ ಹಳಸಿದ ಬಾಯಿಯಿಂದ ಈ ಎಲೆಗಳನ್ನು ಅಗೆಯಿರಿ, ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ!
ಇಲ್ಲಿದೆ ಮತ್ತೊಂದು ವಿಧಾನ
ನೀವು ಬಯಸಿದರೆ, ಈ ಬೀಜಗಳನ್ನು ಎಣ್ಣೆ ಇಲ್ಲದೆ ನಿಧಾನ ಉರಿಯಲ್ಲಿ ಹುರಿದು ನಂತರ ನುಣ್ಣಗೆ ರುಬ್ಬಿಕೊಳ್ಳಿ, ಕರಿಮೆಣಸಿನ ಪುಡಿ, ಕಪ್ಪು ಉಪ್ಪನ್ನು ಮೊಸರಿನೊಂದಿಗೆ ಬೆರೆಸಿ ಮತ್ತು ಪ್ರತಿದಿನ ತಿನ್ನಿರಿ. ಇದರೊಂದಿಗೆ ನಿಮ್ಮ ರಕ್ತದ ಸಕ್ಕರೆ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ-ಸುಖಕರ ದಾಂಪತ್ಯ ಜೀವನದಲ್ಲಿ ತೊಡಕನ್ನುಂಟು ಮಾಡುತ್ತವೆ ಈ ಕಾಯಿಲೆಗಳು.. ಎಚ್ಚರ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.