Weight Loss: ಇಂದಿನ ಕಾಲದಲ್ಲಿ ತೂಕ ಹೆಚ್ಚಾಗುವುದು ಒಂದು ಗಂಭೀರ ಸಮಸ್ಯೆಯಾಗಿದೆ. ಕಛೇರಿಯಲ್ಲಿ ಒಂದೆಡೆ ಕೂತು, ಹೆಚ್ಚು ನಡೆದಾಡದಿರುವುದು, ಜಂಕ್ ಫುಡ್ ತಿನ್ನುವುದು. ಇವೆಲ್ಲವೂ ತೂಕ ಹೆಚ್ಚಾಗಲು ಕಾರಣಗಳಾಗಿವೆ. ನೀವೂ ಕೂಡ ನಿಮ್ಮ ಹೆಚ್ಚಿದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ, ಕೆಲವು ಚಿಕ್ಕ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಯಾವ ಸಮಯಕ್ಕೆ ಯಾವ ಆಹಾರ ಸೇವಿಸಬೇಕು, ಯಾವ ಆಹಾರಕ್ರಮವನ್ನು ಇಟ್ಟುಕೊಳ್ಳಬೇಕು ಎಂಬುದು ಇಲ್ಲಿ ತುಂಬಾ ಮುಖ್ಯ. ತೂಕವನ್ನು ಕಳೆದುಕೊಳ್ಳುವುದು ಎಂದರೆ ನೀವು ತಿನ್ನುವುದನ್ನು ನಿಲ್ಲಿಸುವುದು ಎಂದಲ್ಲ. ಬದಲಿಗೆ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಆಹಾರವನ್ನು ತಿನ್ನುವುದು ತುಂಬಾ ಮುಖ್ಯ. ಆದರೆ ಸರಿಯಾದ ಸಮಯದಲ್ಲಿ ಆಹಾರ ಸೇವಿಸಬೇಕು. ತೂಕ ಇಳಿಸಿಕೊಳ್ಳಲು ನಾವು ಯಾವ ಸಮಯದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
 
ಉಪಹಾರ
ಬೆಳಗಿನ ಉಪಾಹಾರವು ದಿನದ ಪ್ರಮುಖ ಮತ್ತು ಆರೋಗ್ಯಕರ ಆಹಾರವಾಗಿದೆ. ಆದ್ದರಿಂದ ನಿಮ್ಮ ತೂಕ ಇಳಿಸುವ ಪ್ರಯಾಸದಲ್ಲಿ, ನೀವು ಬೆಳಗ್ಗೆ 6 ರಿಂದ 10 ರವರೆಗೆ ಪ್ರೋಟೀನ್ ಭರಿತ ಉಪಹಾರವನ್ನು ತೆಗೆದುಕೊಳ್ಳಬೇಕು. ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಹಸಿವನ್ನು ಕಡಿಮೆ ಮಾಡುತ್ತದೆ. ಅಂಕಿಅಂಶಗಳ ಪ್ರಕಾರ, ಬೆಳಗ್ಗೆ 6 ರಿಂದ 10 ರ ನಡುವೆ ಉಪಹಾರ ಸೇವಿಸಿದ ಸುಮಾರು ಶೇ. 80 ಪ್ರತಿಶತದಷ್ಟು ಜನರು ಇತರರಿಗಿಂತ 15 ಕೆಜಿ ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ.
 
ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ 
ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ನಿಮಗೆ ಅಗತ್ಯವಿಲ್ಲ ಎಂದಾದಲ್ಲಿ ನೀವು ಅದನ್ನು ಬಿಡಬಹುದು, ಆದರೆ, ಇದು ನಿಮಗೆ ಹಸಿವಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ನಾವು ಸೇವಿಸಿದ ಆಹಾರ ಜೀರ್ಣಿಸಿಕೊಳ್ಳಲು ನಮ್ಮ ದೇಹವು ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಬೆಳಗಿನ ಉಪಾಹಾರದ ನಂತರ 2 ರಿಂದ 4 ಗಂಟೆಗಳ ನಂತರ ನೀವು ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ತೆಗೆದುಕೊಳ್ಳಬಹುದು. 
 
ಮಧ್ಯಾಹ್ನದ ಊಟ
ಯಾವುದೇ ಪರಿಸ್ಥಿತಿಯಲ್ಲಿ ನೀವು ಮಧ್ಯಾಹ್ನ 3 ಗಂಟೆಯ ಮೊದಲು ಊಟ ಮಾಡಲು ಪ್ರಯತ್ನಿಸಬೇಕು. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಶೋಧಕರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ 300 ಡಯಟರ್ಸ್ ರನ್ನು ಪರೀಕ್ಷಿಸಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಮೊದಲು ಊಟ ಮಾಡಿದವರು ಹೆಚ್ಚು ಕಿಲೋಗಳನ್ನು ಕಳೆದುಕೊಳ್ಳಲು ಸಮರ್ಥರಾಗಿದ್ದರು ಎಂಬುದನ್ನು ಕಂಡುಹಿಡಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-
 
ಸಂಜೆ ತಿಂಡಿ
ಮಿಡ್ ಮಾರ್ನಿಂಗ್ ಸ್ನ್ಯಾಕ್ಸ್ ನಂತೆಯೇ ಸಂಜೆಯ ತಿಂಡಿ ಸೇವಿಸುವುದು ತುಂಬಾ ಮುಖ್ಯ. ಆದ್ದರಿಂದ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ಅಂತರವನ್ನು ತುಂಬಲು, ಖಂಡಿತವಾಗಿಯೂ ಸಂಜೆ ಚಹಾದೊಂದಿಗೆ ಕೆಲವು ತಿಂಡಿಗಳನ್ನು ತೆಗೆದುಕೊಳ್ಳಿ. ನೀವು ಬಯಸಿದರೆ, ಸಂಜೆ 5 ರಿಂದ 6 ರ ನಡುವೆ, ನೀವು ಚಹಾದೊಂದಿಗೆ ಬಿಸ್ಕತ್ತು ಅಥವಾ ಬೇಳೆಕಾಳು  ಅಥವಾ ಮಖಾನಾವನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ-Body Insulin Level: ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ, ದೇಹದಲ್ಲಿನ ಇನ್ಸುಲಿನ್ ಮಟ್ಟಕ್ಕೆ ಮಾರಕ!
 
ಊಟ
ರಾತ್ರಿಯಲ್ಲಿ ಲಘು ಭೋಜನವನ್ನು ಮಾಡುವುದು ಒಳ್ಳೆಯದು ಮತ್ತು ಅದು ಕೂಡ ಸಂಜೆ 7 ಗಂಟೆಯ ಮೊದಲು. ರಾತ್ರಿಯಲ್ಲಿ ತುಂಬಾ ಹಗುರವಾದ ಆಹಾರವನ್ನು ಸೇವಿಸಬೇಕು ಅದು ಸುಲಭವಾಗಿ ಜೀರ್ಣವಾಗುತ್ತದೆ. ನಿಮಗೆ ಬೇಕಾದರೆ ರಾತ್ರಿಯಲ್ಲಿ ಸೂಪ್, ಖಿಚಡಿ ಅಥವಾ ಸ್ವಲ್ಪ ಓಟ್ಸ್ ತಯಾರಿಸಿ ಸೇವಿಸಬಹುದು. ಆದಷ್ಟು ಸಂಜೆ 7 ಗಂಟೆಯ ಮೊದಲು ನಿಮ್ಮ ಭೋಜನವನ್ನು ಮಾಡಲು ಪ್ರಯತ್ನಿಸಿ.


ಇದನ್ನೂ ಓದಿ-Health Tips: ಸ್ಟೀಲ್ ಪಾತ್ರೆಯಲ್ಲಿ ಆಹಾರ ಬೇಯಿಸುವುದರಿಂದಾಗುವ ಈ ಅಡ್ಡ ಪರಿಣಾಮಗಳು ನಿಮಗೂ ಗೊತ್ತಿರಲಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ