Dal For Weight Loss: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಕೆಲವು ವಿಧಾನಗಳನ್ನು ಅನುಸರಿಸಬೇಕು, ತೂಕ ಇಳಿಸಲು ಏನೆಲ್ಲಾ ತಿಂದರೂ ಅದರಲ್ಲಿ ಪ್ರೊಟೀನ್ ಮತ್ತು ನಾರಿನಂಶ ಅತ್ಯಗತ್ಯ. ತೂಕ ಇಳಿಸಿಕೊಳ್ಳಲು ಮಸೂರ್ ದಾಲ್ ಅಥವಾ ಮಸೂರಿ ಬೆಳೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಮಸೂರಿ ಬೆಳೆ ಫೈಬರ್, ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇದು ನಿಮ್ಮ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ, ನೀವು ಸರಿಯಾದ ರೀತಿಯಲ್ಲಿ ಮಸೂರಿ ಬೆಳೆಯನ್ನು ಸೇವಿಸಿದರೆ, ಅದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ನೀವು ಬೇಳೆಕಾಳುಗಳನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

1. ಮಸೂರ್ ದಾಲ್ ಅನ್ನು ನೆನೆಸಿಡಿ
ಮಸೂರಿ ಬೆಳೆಯನ್ನು ಸೇವಿಸುವ ಮುನ್ನ ಆ ಬೇಳೆಯನ್ನು ಮೊದಲು ಕೆಲವು ಗಂಟೆಗಳ ಕಾಲ ನೆನೆಹಾಕುವುದರಿಂದ ಅದು ದಾಲ್‌ನಲ್ಲಿರುವ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹವು ಹಸಿವನ್ನು ಅನುಭವಿಸುವುದಿಲ್ಲ ಮತ್ತು ತೂಕವನ್ನು ಕಡಿಮೆ ಮಾಡುವಲ್ಲಿ ನೀವು ಯಶಸ್ವಿಯಾಗಬಹುದು.

2. ಹೆಚ್ಚು ನೀರು ಕುಡಿಯಿರಿ
ಮಸೂರ್ ದಾಲ್ ತಿಂದರೆ ಹೆಚ್ಚು ನೀರು ಕುಡಿಯಬೇಕು. ಇದು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Relationship Tips: ವಿವಾಹಿತ ಮಹಿಳೆ ಇತರ ಪುರುಷನ ಮೇಲೆ ಫಿದಾ ಆದಾಗ ಏನ್ ಮಾಡ್ತಾಳೆ ಗೊತ್ತಾ...?

3. ಬೇಳೆಯನ್ನು ಕಡಿಮೆ ಉರಿಯಲ್ಲಿ ಬೇಯಿಸಿ
ಮಸೂರ್ ದಾಲ್ ಅನ್ನು ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಸಂರಕ್ಷಿಸಲ್ಪಡುತ್ತವೆ.


ಇದನ್ನೂ ಓದಿ-Honey-Garlic Health Benefits: ನಿತ್ಯ ಖಾಲಿ ಹೊಟ್ಟೆ ಬೆಳ್ಳುಳ್ಳಿಯ ಜೊತೆಗೆ ಈ ಪದಾರ್ಥ ಸೇವಿಸಿದರೆ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತವೆ!

4. ಕಡಿಮೆ ಅಥವಾ ಅತ್ಯಲ್ಪ ಎಣ್ಣೆಯನ್ನು ಸೇರಿಸಿ
 ಮಸೂರಿ ಬೆಳೆ ನೈಸರ್ಗಿಕವಾಗಿ ಎಣ್ಣೆಯನ್ನು ಹೊಂದಿರುತ್ತದೆ, ಆದ್ದರಿಂದ ನೀವು ಹೆಚ್ಚು ಎಣ್ಣೆಯನ್ನು ಸೇರಿಸಬಾರದು, ನೀವು ದಾಲ್ಗೆ ಎಣ್ಣೆಯನ್ನು ಸೇರಿಸಲು ಬಯಸಿದರೆ, ನೀವು ಎಣ್ಣೆಯ ಬದಲಿಗೆ ತುಪ್ಪ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.