ಬೆಂಗಳೂರು : ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಹಾರ್ಟ್ ಬ್ಲಾಕ್ ಆಗುತ್ತದೆ.ಮೊದಲ ಹಂತದಲ್ಲಿ ಹೆಚ್ಚು  ಸಮಸ್ಯೆಯಾಗುವುದಿಲ್ಲ.ಆದರೆ,ಮೂರನೇ ಹಂತ ತಲುಪಿದಾಗ ಹೃದಯ ಬಡಿತ ನಿಲ್ಲಿಸಿ ಬಿಡಬಹುದು.ಅಂದರೆ ವ್ಯಕ್ತಿಯ ಪ್ರಾಣವೇ ಹೋಗಬಹುದು. ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ.ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ನಾವು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.ಇದು ಕೊನೆಗೆ ಹೃದಯಾಘಾತ, ಹೃದಯ ಸ್ತಂಭನದಲ್ಲಿ ಕೊನೆಯಾಗುತ್ತದೆ.  


COMMERCIAL BREAK
SCROLL TO CONTINUE READING

ಉಸಿರಾಟದ ಸಮಸ್ಯೆ : 
ಕೆಲವರಿಗೆ ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಉಸಿರಾಟ ಬಹಳ ಕಷ್ಟದಾಯಕವಾಗಿರುತ್ತದೆ. ಈ ಕಾರಣದಿಂದ ಹೀಗಾರಿಬಹುದು,ಆ ಕಾರಣದಿಂದ ಹೀಗಾಗಿರಬಹುದು ಎಂದು ನಮ್ಮಲ್ಲೇ ಊಹೆ ಮಾಡಿಕೊಳ್ಳುವ ಬದಲು ತಕ್ಷಣ ವೈದ್ಯರನ್ನು  ಸಂಪರ್ಕಿಸುವುದು ಜಾಣತನ.  


ಇದನ್ನೂ ಓದಿ : ಈ ಸೊಪ್ಪನ್ನು ಅರೆದು ಹಣೆಗೆ ಹಚ್ಚಿದರೆ ತಿಂಗಳುಗಟ್ಟಲೆ ಕಡಿಮೆಯಾಗದ ಶೀತ, ಕೆಮ್ಮಿಗೆ ಒಂದೇ ನಿಮಿಷದಲ್ಲಿ ಪರಿಹಾರ ಸಿಗುತ್ತದೆ! ತಲೆನೋವಿಗೂ ಇದೇ ಮದ್ದು


ಮೂರ್ಛೆ ಹೋಗುವುದು : 
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ,ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು.ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.


ಎದೆ ನೋವು : 
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ.ಎದೆನೋವು ಕಾಣಿಸಿಕೊಂಡಾಗ ಸಾಮಾನ್ಯವಾಗಿ ನಾವು ಗ್ಯಾಸ್, ಆಸಿಡಿಟಿ ಎಂದು ಮನೆ ಮದ್ದಿನ ಮೊಇರೆ ಹೋಗುತ್ತೇವೆ. ಆದರೆ, ದೀರ್ಘಕಾಲದವರೆಗೆ ಎದೆ ಮತ್ತು ಸುತ್ತ ಮುತ್ತ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. 


ಇದನ್ನೂ ಓದಿ : ಹಲ್ಲುಗಳಲ್ಲಿ ಕಚ್ಚಿ ಕುಳಿತಿರುವ ಹಳದಿ ಕಲೆ ತೆಗೆಯಲು ಈ ಹಣ್ಣುಗಳನ್ನು ಕಚ್ಚಿ ತಿನ್ನಿ! ಇದರ ರಸವೇ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ


ತಲೆಸುತ್ತುವುದು : 
ತಲೆ ಸುತ್ತುವುದು ಕೂಡಾ ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.


ವಾಕರಿಕೆ : 
ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿಯಾಗುವುದು ಆಗುತ್ತಿದ್ದರೆ ಅದು  ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.