Signs of Heart Attack :ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೆ ಹೃದಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ. ನಮ್ಮ ಹೃದಯದಲ್ಲಿ ಏನೇ ಬದಲಾವಣೆಯಾದರೂ ನಮ್ಮ ದೇಹ ಮೊದಲೇ ನಮಗೆ ಮುನ್ಸೂಚನೆ ನೀಡುತ್ತದೆ. ಹಾಗೆಯೇ ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಗೋಚರಿಸುತ್ತದೆ. 


COMMERCIAL BREAK
SCROLL TO CONTINUE READING

ಹೃದಯಾಘಾತದ ಇತರ ಚಿಹ್ನೆಗಳು :
ಎದೆನೋವಿನ ಹೊರತಾಗಿ, ಹೃದಯಾಘಾತದ ಮೊದಲು  ಅನೇಕ ಲಕ್ಷಣಗಳು ಕಾಣಿಸುತ್ತವೆ.ಚರ್ಮವು ತೆಳುವಾಗಿ, ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರೂ ಬರುತ್ತದೆ.ವಾಕರಿಕೆ,ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾದ ಲಕ್ಷಣಗಳು ಕಾಣಿಸುತ್ತವೆ. 


ಇದನ್ನೂ ಓದಿ : ಯೂರಿಕ್ ಆಸಿಡ್ ಅನ್ನು ಮೂತ್ರದ ಮೂಲಕವೇ ದೇಹದಿಂದ ಹೊರ ಹಾಕುತ್ತದೆ ಈ ಕಪ್ಪು ಕಾಳು !


ಲಿಂಗವನ್ನು ಆಧರಿಸಿ ಗೋಚರಿಸುತ್ತವೆ ಈ ಲಕ್ಷಣಗಳು :
ಪುರುಷರಿಗೆ  ಹೃದಯಾಘಾತಕ್ಕೂ ಮೊದಲು ಎದೆ ನೋವು ಕಾಣಿಸಿಕೊಂಡರೆ,   ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು  ಕಾಣಿಸಿಕೊಳ್ಳುತ್ತದೆ. 


ಬ್ಲಡ್ ಶುಗರ್  :
ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ.ಮಧುಮೇಹವು ಹೃದಯಾಘಾತದ ಅತ್ಯಂತ  ಸಂದಿಗ್ದ ಲಕ್ಷಣಗಳಲ್ಲಿ ಒಂದಾಗಿದೆ.ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವೂ ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ. 


ಅಪಾಯವನ್ನು ಕಡಿಮೆ ಮಾಡುವುದು  ಹೇಗೆ ?:
ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. 


ಇದನ್ನೂ ಓದಿ : ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್


ತರಕಾರಿಗಳ ಸೇವನೆ :
ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು.ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ.ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.