ಬೆಂಗಳೂರು : ಮಧುಮೇಹ ಒಮ್ಮೆ ಕಾಣಿಸಿಕೊಂಡರೆ ಜೀವನಪರ್ಯಂತ ಕಾಡುವ ರೋಗವಾಗಿದೆ. ಈ ರೋಗ ಕಾಡುವುದಕ್ಕೆ ನಾನಾ ಕಾರಣಗಳಿರುತ್ತವೆ.   ಅನಾರೋಗ್ಯಕರ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಇತ್ಯಾದಿಗಳಿಂದಲೂ ಮಧುಮೇಹ ಕಾಣಿಸಿಕೊಳ್ಳುತ್ತದೆ. ಮಧುಮೇಹ ಇದ್ದಾಗ ಮೇದೋಜ್ಜೀರಕ ಗ್ರಂಥಿಯು ಕಡಿಮೆ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು,  ದೇಹದ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ತಲುಪಿಸಲು ಸಹಾಯ ಮಾಡುತ್ತದೆ. ಮಧುಮೆಹವಿದ್ದಾಗ ರೋಗಿಯು ತನ್ನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.


COMMERCIAL BREAK
SCROLL TO CONTINUE READING

ಕೆಲವರಿಗೆ ತಮಗೆ ಮಧುಮೇಹವಿದೆ ಎನ್ನುವುದೇ ಗೊತ್ತಿರುವುದಿಲ್ಲ. ಮಧುಮೇಹ ಇರುವಾಗ, ವ್ಯಕ್ತಿಗೆ ಆಗಾಗ ಮೂತ್ರ ವಿಸರ್ಜನೆ ಮಾಡಬೇಕು ಅನ್ನಿಸುತ್ತದೆ, ಅತಿಯಾದ ಬಾಯಾರಿಕೆಯಾಗುತ್ತದೆ, ನಿರಂತರ ಹಸಿವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಷ್ಟು ಮಾತ್ರವಲ್ಲದೆ, ಮಧುಮೇಹವಿದ್ದಾಗ  ಕಣ್ಣಿನಲ್ಲಿಯೂ  ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳತ್ತ ಸರಿಯಾಗಿ ಗಮನ ಹರಿಸಿದರೆ ನಿಮಗೆ ಮಧುಮೇಹ ಇದೆ ಎನ್ನುವುದು ತಿಳಿಯುತ್ತದೆ.


ಇದನ್ನೂ ಓದಿ : ರಾತ್ರಿ ಊಟದಲ್ಲಿ ರೊಟ್ಟಿ ಅಥವಾ ಅನ್ನ ಎರಡರಲ್ಲಿ ದೇಹಕ್ಕೆ ಯಾವುದು ಪ್ರಯೋಜನಕಾರಿ?


ಕಣ್ಣಿನ ಪೊರೆ  :
ಅಕಾಲಿಕ ಕಣ್ಣಿನ ಪೊರೆ ಸಮಸ್ಯೆ ಮಧುಮೇಹದ ಸಂಕೇತವಾಗಿರಬಹುದು. ಮಧುಮೇಹ ರೋಗಿಗಳಲ್ಲಿ, ಈ ಸಮಸ್ಯೆಯು ಸಮಯಕ್ಕಿಂತ ಮುಂಚೆಯೇ  ಕಾಣಿಸಿಕೊಳ್ಳುತ್ತದೆ. ಮಧುಮೇಹವಿದ್ದಾಗ ಈ ಸಮಸ್ಯೆಯು ತುಂಬಾ ಹೆಚ್ಚಾಗಬಹುದು.


ದೃಷ್ಟಿ ಮಂದವಾಗುವುದು : 
ಮಂದ ದೃಷ್ಟಿ ಮಧುಮೇಹದ ಲಕ್ಷಣವೂ ಆಗಿರಬಹುದು. ನಿಮ್ಮ ದೃಷ್ಟಿ ಸ್ಪಷ್ಟವಾಗಿಲ್ಲ ಎಂದಾದರೆ ತಕ್ಷಣ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ  ಈ ಸಮಸ್ಯೆಯನ್ನು ಗುಣಪಡಿಸಬಹುದು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಡಯಾಬಿಟಿಕ್ ರೆಟಿನೋಪತಿ :
ಡಯಾಬಿಟಿಕ್ ರೆಟಿನೋಪತಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರೆಟಿನಾವನ್ನು ಬಾಧಿಸುವ ಸಮಸ್ಯೆಯಾಗಿದೆ.ರೆಟಿನಾಕ್ಕೆ ರಕ್ತವನ್ನು ಪೂರೈಸುವ ನರಗಳು ಹಾನಿಗೊಳಗಾದಾಗ ಈ ಸ್ಥಿತಿಯು ಸಂಭವಿಸುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಕಣ್ಣು ಕುರುಡಾಗಲೂಬಹುದು.


ಗ್ಲುಕೋಮಾ :
ಈ ಸಮಸ್ಯೆಯಲ್ಲಿ, ದ್ರವವು ಕಣ್ಣುಗಳಿಂದ ಹೊರಬರುವುದಿಲ್ಲ, ಇದರಿಂದಾಗಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ರಕ್ತ ಕಣಗಳು ಮತ್ತು ಕಣ್ಣುಗಳ ನರಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ  ದೃಷ್ಟಿ ಸಮಸ್ಯೆ ಎದುರಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.