Diabetes symptoms in morning :ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಾಗ ಸಾಮಾನ್ಯವಾಗಿ ನಮಗೆ ತಿಳಿಯುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಧುಮೇಹದ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಆ ಲಕ್ಷಣಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಮಧುಮೇಹದ ಕೆಲವು ಲಕ್ಷಣಗಳು ಬೆಳಿಗ್ಗೆ ಮಾತ್ರ ಗೋಚರಿಸುತ್ತವೆ. ಒಂದು ವೇಳೆ ನಿಮ್ಮ ದೇಹದಲ್ಲಿಯೂ ಮುಂಜಾನೆ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ. 


COMMERCIAL BREAK
SCROLL TO CONTINUE READING

ದಣಿದ ಭಾವನೆ:
8-9 ಗಂಟೆಗಳ ಕಾಲ ಮಲಗಿದ ನಂತರವೂ ಬೆಳಿಗ್ಗೆ ತುಂಬಾ ದಣಿವಾದ ಅನುಭವ ಆಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದರಿಂದ, ನರಗಳ ಒತ್ತಡ ಮತ್ತು ಆಯಾಸದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. 


ಇದನ್ನೂ ಓದಿ : ಎರಡೂ ಕೈಗಳನ್ನು ಉಜ್ಜುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?


ಕೈ ನಡುಕ : 
ಸಕ್ಕರೆಯ ಮಟ್ಟವು ಹೆಚ್ಚಾದಾಗ ಅಥವಾ ಕಡಿಮೆಯಾದಾಗ, ದೇಹದಲ್ಲಿ ಹಲವಾರು ರೀತಿಯ ಪ್ರತಿಕ್ರಿಯೆಗಳು ನಡೆಯಲು ಪ್ರಾರಂಭಿಸುತ್ತವೆ. ಕೈ ಮತ್ತು ಕಾಲುಗಳಲ್ಲಿ ನಡುಕ ಮಧುಮೇಹದ ಪ್ರಮುಖ ಲಕ್ಷಣವಾಗಿದೆ.


ಬಾಯಿ ಒಣಗುವುದು : 
ಮಧುಮೇಹದಲ್ಲಿ, ಪದೇ ಪದೇ ಬಾಯಾರಿಕೆಯಾಗುತ್ತದೆ.ಅನೇಕ ಬಾರಿ ರೋಗಿಯು ಬೆಳಿಗ್ಗೆ ಎದ್ದಾಗ, ನಿರ್ಜಲೀಕರಣದಿಂದಾಗಿ ಬಾಯಿ ಒಣಗುತ್ತದೆ. ನಿಮಗೂ ಹೀಗಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.


ಗಂಟಲು ನೋವು : 
ನಿರ್ಜಲೀಕರಣ ಮತ್ತು ಅತಿಯಾದ ಬಾಯಾರಿಕೆಯಿಂದಾಗಿ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 


ಇದನ್ನೂ ಓದಿ : ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ..? ಇದು ಮಧುಮೇಹ ಮತ್ತು ಕ್ಯಾನ್ಸರ್‌ಗೆ ರಾಮಬಾಣ


ಮಂದ ಅದೃಷ್ಟಿ : 
ಮಧುಮೇಹದಲ್ಲಿ, ದೃಷ್ಟಿ ಮಸುಕಾಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದ ಕೂಡಲೇ ದೃಷ್ಟಿ ಮಂಜು ಮಂಜಾಗಲು ಆರಂಭಿಸುತ್ತದೆ. ಇದು ಗಂಭೀರವಾದ ರೋಗಲಕ್ಷಣವಾಗಿದ್ದು, ಇದನ್ನು ನಿರ್ಲಕ್ಷಿಸಬಾರದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.