ಬೆಂಗಳೂರು : ಟಿವಿ ವೀಕ್ಷಣೆ ಪ್ರಪಂಚದಾದ್ಯಂತದ ಹೆಚ್ಚಿನ ಜನರ ನೆಚ್ಚಿನ ಹವ್ಯಾಸವಾಗಿದೆ. ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಿಕ ಟಿವಿಯನ್ನು ಅತಿ ಹೆಚ್ಚು ಕಾಲ ಬಳಸಲಾಗುತ್ತದೆ. ಆದರೆ ಹೊಸ ಅಧ್ಯಯನವೊಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ದೀರ್ಘಕಾಲ ಟಿವಿ ನೋಡುವುದು, ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಯಂತೆ. ಹೊಸ ಅಧ್ಯಯನದ ಪ್ರಕಾರ, ದೀರ್ಘಕಾಲದವರೆಗೆ ಟಿವಿ ನೋಡುವ ಅಭ್ಯಾಸವು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. 


COMMERCIAL BREAK
SCROLL TO CONTINUE READING

ಸ್ಕ್ರೀನ್ ಆಧಾರಿತ ಸಾಧನಗಳು ಅಂದರೆ ಟಿವಿ, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ವ್ಯಕ್ತಿಯ ಹೃದಯ ಕಾಯಿಲೆಯ  ಅಪಾಯವನ್ನು ಹೆಚ್ಚಿಸಲಿದೆಯೇ ಎನ್ನುವುದನ್ನು ಕಂಡು ಕೊಳ್ಳಲು  ಸಂಶೋಧಕರು UK ಬಯೋಬ್ಯಾಂಕ್‌ನಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ.


ಇದನ್ನೂ ಓದಿ : Egg Eating Benefits: ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ?


ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯದ ತಜ್ಞರ ತಂಡವು ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ ಒಂದು ಗಂಟೆಗಿಂತ ಕಡಿಮೆ ಅವಧಿಗೆ ಟಿವಿ ವೀಕ್ಷಿಸುವುದರಿಂದ ಕೊರೋನರಿ ಹೃದಯ ಕಾಯಿಲೆಯನ್ನು ಶೇಕಡಾ 11 ರಷ್ಟು ತಡೆಯಬಹುದು ಎಂದು ತೋರಿಸಿದೆ. ಮತ್ತು ಕಂಪ್ಯೂಟರ್‌ಗಳನ್ನು ಬಳಸುವುದರಿಂದ  ರೋಗದ ಅಪಾಯದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.


ಆದರೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಟಿವಿ ನೋಡುವುದರಿಂದ ಕಾಯಿಲೆಯ ಅಪಾಯ ಹೆಚ್ಚಾಗಬಹುದು. ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ದೂರದರ್ಶನವನ್ನು ವೀಕ್ಷಿಸುವ ಜನರು ಕರೋನರಿ ಹೃದಯ ಕಾಯಿಲೆಯ  ಅಪಾಯವನ್ನು ಹೊಂದಿರುತ್ತಾರೆ  ಎಂಬ ಅಂಶ ಸಂಶೋಧನೆಯ ವೇಳೆ ಬಯಲಾಗಿದೆ. 


ಇದನ್ನೂ ಓದಿ : Diabetes ರೋಗಿಗಳು ತಪ್ಪಿಯೂ ಈ ತರಕಾರಿಗಳನ್ನು ಸೇವಿಸಬಾರದು ..!


ಅಧ್ಯಯನಕ್ಕಾಗಿ, ಸಂಶೋಧಕರು 500,000 ಕ್ಕಿಂತ ಹೆಚ್ಚು ಜನರ ಪಾಲಿಜೆನಿಕ್ ರಿಸ್ಕ್ ಸ್ಕೋರ್ ಸಂಗ್ರಹಿಸಿದ್ದಾರೆ. ಯಾವಾಗಲೂ ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು ಮತ್ತು ಯಾವುದೇ ರೀತಿಯ ಚಟುಚಟುವಟಿಕೆ ಮಾಡದಿರುವುದು ಹೃದಯ ಕಾಯಿಲೆಗೆ ಕಾರಣವಾಗುವ  ಪ್ರಾಥಮಿಕ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಮೂಲಭೂತವಾಗಿ, ದೈಹಿಕವಾಗಿ ಸಕ್ರಿಯವಾಗಿರುವ ಬದಲು ದೀರ್ಘಕಾಲ ಕುಳಿತುಕೊಳ್ಳುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.