Water Habits : ನೀರು ಅಮೃತ ಸಮಾನ ನಿಜ, ಹೀಗೆ ಮಾಡಿದರೆ ಅದು ವಿಷವಾಗಬಹುದು..!
ಉತ್ತಮ ಆರೋಗ್ಯಕ್ಕಾಗಿ ನೀರು ಎಷ್ಟು ಮುಖ್ಯ ಅನ್ನುವುದು ಎಲ್ಲರಿಗೋ ಗೊತ್ತಿರುವ ವಿಚಾರ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಬೆಂಗಳೂರು : ಉತ್ತಮ ಆರೋಗ್ಯಕ್ಕಾಗಿ ನೀರು (Water for good Health) ಎಷ್ಟು ಮುಖ್ಯ ಅನ್ನುವುದು ಎಲ್ಲರಿಗೋ ಗೊತ್ತಿರುವ ವಿಚಾರ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬಾಯಾರಿದೆರೆ ನೀರಿನ ಬದಲು ಇನ್ನೇನೋ ದ್ರವ ಪದಾರ್ಥಗಳನ್ನು ಸೇವಿಸುತ್ತೇವೆ ಅಂದುಕೊಂಡರೆ ಅದರಿಂದ ಖಂಡಿತವಾಗಿಯೂ ಬಾಯಾರಿಕೆ ನೀಗಲು ಸಾಧ್ಯವಿಲ್ಲ. ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 5ರಿಂದ 6 ಲೀಟರ್ ನೀರನ್ನು ಕುಡಿಯಬೇಕು. ಆದರೆ ನೀರು ಕುಡಿಯುವುದಕ್ಕೂ ನಿಯಮಗಳಿವೆ ಅನ್ನುವುದು ಗೊತ್ತಿದೆಯಾ? ತಿಳಿದಿಲ್ಲ ಎಂದಾದರೆ ಇಲ್ಲಿದೆ ಸಂಪೂರ್ಣ ಮಾಹಿತಿ..
ಈ ವಸ್ತುಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಹಾನಿಕಾರಕ :
ಕುಡಿಯುವ ನೀರಿಗಾಗಿ (Water) ಕೆಲವು ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಆರೋಗ್ಯಕ್ಕೆ (Health) ಹಾನಿಯುಂಟಾಗುತ್ತದೆ. ಸಾಮಾನ್ಯವಾಗಿ ಏನೇ ತಿಂದರೂ ತಕ್ಷಣವೇ ನೀರು ಕುಡಿಯುವ ಅಭ್ಯಾಸ ಬಹುತೇಕರಿಗಿದೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವ ವಸ್ತುಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯಬಾರದು ಅನ್ನೋದನ್ನ ನೋಡೋಣ.
ಇದನ್ನೂ ಓದಿ : Eye twitching ಕಣ್ಣು ಹೊಡೆದುಕೊಳ್ಳುತ್ತಿದೆಯಾ..? ಖಂಡಿತ ಮೆಡಿಕಲ್ ಕಾರಣ ತಿಳಿದುಕೊಳ್ಳಿ, ಶಕುನ ಫಲವನ್ನಲ್ಲ..!
ಕಾಫಿ ಕುಡಿದ ಮೇಲೆ ನೀರು ಕುಡಿಯಬಾರದು.
ಕಾಫಿ ಎಲ್ಲರಿಗೂ ಇಷ್ಟ . ಚಳಿಗಾಲದಲ್ಲಂತೂ (Winter) ಕಾಫಿ ಹೀರುವುದೇ ಒಂದು ರೀತಿಯ ಆನಂದ. ಕಾಫಿ ಹೀರಿದ ಬಳಿಕ ಕೆಲವೊಬ್ಬರಿಗೆ ಗಂಟಲು ಒಣಗುತ್ತದೆ. ನೀರು (Water) ಕುಡಿಯುವ ಅಭ್ಯಾಸ ವಿರುತ್ತದೆ. ತಿಳಿದುಕೊಳ್ಳಿ. ಕಾಫಿ ಕುಡಿದ ನಂತರ ನೀರು ಕುಡಿದರೆ, ಅದು ಜೀರ್ಣ ವ್ಯವಸ್ಥೆ (Digestive System) ಮೇಲೆ ಹಾನಿ ಮಾಡುತ್ತದೆ. ಜೀರ್ಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಟ್ಟೆಯಲ್ಲಿ ಸಮಸ್ಯೆಗಳುಂಟಾಗುತ್ತವೆ (Stomach Problems)
ಹಣ್ಣು ತಿಂದ ಕೂಡಲೇ ನೀರು ಕುಡಿಯುವುದು ಸರಿಯಲ್ಲ
ಹಣ್ಣು ಮತ್ತು ನೀರು ಒಳ್ಳೆಯ ಕಾಂಬಿನೇ಼ಶನ್ ಅಲ್ಲ. ಇದರಿಂದ ಕೆಮ್ಮು(Cough),, ಅಜೀರ್ಣ(Indigestion), ಶುಗರ್ (Sugar) ಬರುವ ಸಾಧ್ಯತೆಗಳಿವೆ. ದ್ರಾಕ್ಷಿ, ಕಿತ್ತಳೆ ತಿಂದ ಕೂಡಲೇ ನೀರು ಕುಡಿದರೆ, ಗಂಟಲು ನೋವು (Throat Pain), ಕೆಮ್ಮು(Cough), ಗಂಟಲಿನಲ್ಲಿ ಕೆರೆತ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಬಾಳೆ ಹಣ್ಣು, ದಾಳಿಂಬೆ, ಸೇಬು, ಚಿಕ್ಕು ಹಣ್ಣುಗಳಲ್ಲಿ ಶುಗರ್ ಮತ್ತು ಸಿಟ್ರಿಕ್ ಆಸಿಡ್ ಜಾಸ್ತಿ ಇರುತ್ತದೆ. ಹಾಗಾಗಿ ಈ ಹಣ್ಣುಗಳನ್ನು ತಿಂದ ಕೂಡಲೇ ನೀರು ಕುಡಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳುಂಟಾಗುತ್ತವೆ.
ಇದನ್ನೂ ಓದಿ : Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..! ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ
ಕಡಲೆ ತಿಂದು ನೀರು ಕುಡಿಯಬಾರದು :
ಕಡಲೆ (Gram) ತಿಂದ ಕೂಡಲೇ ನೀರು ಕುಡಿಯಬಾರದು. ಯಾಕಂದರೆ, ಕಡಲೆ ತಿಂದ ಕೂಡಲೇ ನೀರು ಕುಡಿದರೆ, ಕಡಲೆ ಚನ್ನಾಗಿ ಜೀರ್ಣವಾಗುವುದಿಲ್ಲ ಹಾಗಾಗಿ ಹೊಟ್ಟೆ ನೋವು (Stomach Pain) ಕಾಣಿಸಿಕೊಳ್ಳಬಹುದು.
ನೆಲಗಡಲೆ ಮತ್ತು ನೀರು ಬೇಡ..!
ಕೆಲವರಿಗೆ ನೆಲಗಡಲೆ (Peanut) ತಿಂದು ನೀರು ಕುಡಿಯುವ ಅಭ್ಯಾಸವಿದೆ. ಖಂಡಿತಾ ಹೀಗೆ ಮಾಡಬೇಡಿ. ನೆಲಗಡಲೆ ತಿಂದ ಕೂಡಲೇ ನೀರು (Cold Water) ಕುಡಿದರೆ ಒಣಕೆಮ್ಮು (Dry Cough) ಉಂಟಾಗುತ್ತದೆ. ನೆಲಗಡಲೆ ದೇಹದಲ್ಲಿ ಉಷ್ಣತೆಯನ್ನುಹೆಚ್ಚಿಸುತ್ತದೆ. ಅದನ್ನು ತಿಂದ ಕೂಡಲೇ ನೀರು ಕುಡಿದರೆ ಆರೋಗ್ಯ ಬಿಗಡಾಯಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ : Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
ಸ್ವೀಟ್ ತಿಂದು ನೀರು ಕುಡಿದರೆ ಏನಾಗಬಹುದು.
ಸ್ವೀಟ್ (Sweet) ತಿಂದಾಗ ಬಾಯಾರಿಕೆ ಆಗುವ ಸಾಧ್ಯತೆ ಹೆಚ್ಚು. ಸ್ವೀಟ್ ತಿಂದಾದ ಬಳಿಕ ನೀರು ಕುಡಿದರೆ ಡಯಾಬಿಟಿಸ್ ತಗಲುವ ಅಥವಾ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಬ್ಲಡ್ ಶುಗರ್ (Blood Sugar) ಕೂಡಾ ಹೆಚ್ಚಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.