ಪ್ರತಿನಿತ್ಯ 5000 ಹೆಜ್ಜೆಗಳ ನಡಿಗೆ:  ತೂಕ ಹೆಚ್ಚಳವು ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿಯೇ, ತೂಕ ಕಡಿಮೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಕೆಲವರು ವಾಕಿಂಗ್ ಮಾಡಿದರೆ, ಇನ್ನೂ ಕೆಲವರು ಯೋಗ, ಜಿಮ್, ವ್ಯಾಯಾಮದ ಮೊರೆ ಹೋಗುತ್ತಾರೆ. ಆದಾಗ್ಯೂ, ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 5000 ಅಥವಾ ಅದಕ್ಕಿಂತ ಹೆಚ್ಚು ಹೆಜ್ಜೆ ನಡೆದರೆ ತೂಕ ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಆದರೆ, ಕೆಲವರು ತಾವು ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲ ಎಂದು ದೂರುತ್ತಾರೆ. ಇದಕ್ಕೆ ನೀವು ಮಾಡುವ ಕೆಲವು ತಪ್ಪುಗಳೂ ಕಾರಣ ಇರಬಹುದು.


COMMERCIAL BREAK
SCROLL TO CONTINUE READING

ವಾಕಿಂಗ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ:
ದಿನನಿತ್ಯದ ನಡಿಗೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹೃದಯಾಘಾತದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ವಾಕಿಂಗ್ ಮಾಡುವುದರಿಂದ ತೂಕ ಕಡಿಮೆ ಆಗಿಯೇ ಆಗುತ್ತದೆ ಎಂದು ಅರ್ಥವಲ್ಲ. ವಾಕಿಂಗ್ ಮಾಡಿಯೂ ನೀವು ತೂಕವನ್ನು ಕಳೆದುಕೊಳ್ಳದಿದ್ದರೆ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕಾಗಿರುವುದು ಬಹಳ ಮುಖ್ಯ.


ನಿತ್ಯ ಐದು ಸಾವಿರ ಹೆಜ್ಜೆ ಹೆಜ್ಜೆ ನಡೆದರೂ ಏಕೆ ಸಾಕಾಗುವುದಿಲ್ಲ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿತ್ಯ ನಾವು 5000 ಹೆಜ್ಜೆಗಳನ್ನು ನಡೆಯುವುದನ್ನು ವ್ಯಾಯಾಮದ ಅರೆ-ಸಕ್ರಿಯ ವರ್ಗದಲ್ಲಿ ಪರಿಗಣಿಸಲಾಗುತ್ತದೆ ಮತ್ತು 10000 ಹೆಜ್ಜೆ ನಡೆಯುವುದನ್ನು ಸಕ್ರಿಯ ವರ್ಗವೆಂದು ಪರಿಗಣಿಸಲಾಗುತ್ತದೆ ಎಂದು ಪ್ರಸಿದ್ಧ ಪೌಷ್ಟಿಕತಜ್ಞ 'ನಿಖಿಲ್ ವಾಟ್ಸ್' ಹೇಳಿದ್ದಾರೆ.


ಇದನ್ನೂ ಓದಿ- ನಿಂಬೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆಯೇ? ಏನಿದರ ಹಿಂದಿನ ಸತ್ಯ


ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗದಿದ್ದರೆ ಏನು ಮಾಡಬೇಕು?
1. ವಾಕಿಂಗ್ ಜೊತೆಗೆ ವ್ಯಾಯಾಮ ಅಗತ್ಯ:

ತೂಕವನ್ನು ಕಳೆದುಕೊಳ್ಳಲು, ನೀವು ಕೇವಲ ವಾಕಿಂಗ್ ಅನ್ನು ಅವಲಂಬಿಸಬಾರದು, ಆದರೆ ಅರ್ಧ ಘಂಟೆಯವರೆಗೆ ವರ್ಕೌಟ್ಗಳನ್ನು ಮಾಡಬೇಕು, ಇದು ಕೊಬ್ಬನ್ನು ಸುಡುತ್ತದೆ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ.


2. ಸಕ್ಕರೆ ಅಂಶ ಅಧಿಕವಾಗಿರುವ ಆಹಾರದಿಂದ ಅಂತರ ಕಾಯ್ದುಕೊಳ್ಳಿ:
ಸಕ್ಕರೆ ಅಂಶ ಹೆಚ್ಚು ಇರುವ ಆಹಾರದಿಂದ ಅಂತರ ಕಾಯ್ದುಕೊಳ್ಳಿ. ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ತೂಕ ಕಡಿಮೆಯಾಗುವುದಿಲ್ಲ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಸಹ ಉಳಿಸಿಕೊಳ್ಳುತ್ತದೆ ಎಂಬುದನ್ನು ನೆನಪಿಡಿ.


3. ಆರೋಗ್ಯಕರ ಆಹಾರ ಸೇವಿಸಿ:
ನಿಮ್ಮ ದೈನಂದಿನ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಮಾತ್ರ ಸೇರಿಸಿ, ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಇದಕ್ಕಾಗಿ ನೀವು ಋತುಮಾನದ ಹಣ್ಣುಗಳು, ಮೊಳಕೆ ಕಾಳುಗಳು, ಹಸಿರು ಎಲೆಗಳ ತರಕಾರಿಗಳು, ಬೀಜಗಳು ಮತ್ತು ಸಲಾಡ್ಗಳನ್ನು ತಿನ್ನಬಹುದು.


4. ದೇಹದಲ್ಲಿ ನೀರಿನ ಕೊರತೆಯಾಗದಂತೆ ನಿಗಾವಹಿಸಿ:
ಪ್ರತಿನಿತ್ಯ ನಡೆಯುವಾಗ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ, ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Raw Milk: ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಹಾನಿಕಾರಕವೇ?


5.  ಡಿಟಾಕ್ಸ್ ಪಾನೀಯಗಳನ್ನು ಕುಡಿಯಿರಿ:
ನೀರಿನ ಹೊರತಾಗಿ, ಅಂತಹ ಹಣ್ಣಿನ ರಸಗಳು ಮತ್ತು ಡಿಟಾಕ್ಸ್ ಪಾನೀಯಗಳನ್ನು ಕುಡಿಯಿರಿ, ಇದು ದೇಹದಲ್ಲಿ ಇರುವ ವಿಷವನ್ನು ತೆಗೆದುಹಾಕುತ್ತದೆ, ಇದು ದೇಹವನ್ನು ಫಿಟ್ ಆಗಿ ಇರಿಸಲು ಸಹಾಯ ಮಾಡುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.