Black Pepper Health Benefits - ಭಾರತೀಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಆಹಾರದ ರುಚಿ ಹೆಚ್ಚಿಸಲು ಕರಿ ಮೆಣಸನ್ನು (Black Pepperಬಳಸಲಾಗುತ್ತದೆ. ವಿವಿಧ ರೀತಿಯ ತರಕಾರಿ , ಕರ್ರಿ, ಕಶಾಯಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಇದು ತನ್ನ ಅದ್ಭುತ ಪರಿಮಳಕ್ಕಾಗಿ ಹೆಸರುವಾಸಿಯಾಗಿದೆ. ಇದಲ್ಲದೆ,  ಕರಿಮೆಣಸಿನಲ್ಲಿ ಅನೇಕ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ಸ್ ಗಳಿವೆ. ಇವ್ವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ (Black Pepper Health Benefits) ಉತ್ತಮವಾಗಿದೆ. ಕಪ್ಪು ಮೆಣಸಿನ ಚಹಾ ಒಂದು ಉತ್ತಮ ಹರ್ಬಲ್ ಚಹಾ ಆಗಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬನ್ನಿ, ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತು ಅದನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.


COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ ಕರಿಮೆಣಸಿನ ಚಹಾ ಪರಿಣಾಮಕಾರಿ
ತೂಕ ಇಳಿಕೆಗೆ ಕರಿಮೆಣಸು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಂದು ಮಸಾಲೆಯುಕ್ತ ಸುವಾಸನೆ ಇರುತ್ತದೆ. ಇದರಿಂದಲೇ ಇದು ಥರ್ಮೊಜೆನಿಕ್ ಪ್ರಭಾವ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಮೆಟಾಬಾಲಿಸಂ ಅನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಇದು ತುಂಬಾ ವೇಗವಾಗಿ ಕ್ಯಾಲೋರಿಗಳನ್ನು ಸುಡಲು ಸಹಕರಿಸುತ್ತದೆ. ಇದರಲ್ಲಿ ಪಿಪೆರಿನ್ ಕೂಡ ಇರುತ್ತದೆ. ಇದೊಂದು ಪಾಚಕ ಪದಾರ್ಥವಾಗಿದ್ದು, ಶರೀರದಲ್ಲಿ ಶೇಖರಣೆಯಾದ ಫ್ಯಾಟ್ ಇಳಿಕೆ ಮಾಡುತ್ತದೆ. ಕರಿಮೆಣಸಿನ ಚಹಾ ಸೇವನೆಯಿಂದ ತೂಕ ನಿಯಂತ್ರಣದಲ್ಲಿಡಲು (Black Pepper For Weight Loss) ಅನುಕೂಲವಾಗುತ್ತದೆ. 


ಹೇಗೆ ತಯಾರಿಸಬೇಕು? (How To Prepare Black Pepper Tea)
ಬೇಕಾಗುವ ಸಾಮಗ್ರಿ

>> 2 ಕಪ್ ನೀರು
>> 1 ಚಿಕ್ಕ ಸ್ಪೂನ್ ಕರಿಮೆಣಸಿನ ಪೌಡರ್
>> 1 ಟೀ ಸ್ಪೂನ್ ಜೇನು 
>> 1 ಟೀ ಸ್ಪೂನ್ ನಿಂಬೆ ಹಣ್ಣಿನ ರಸ
>> 1 ಚಿಕ್ಕ ಸ್ಪೂನ್ ಸಣ್ಣದಾಗಿ ಕತ್ತರಿಸಿದ ಹಸಿ ಶುಂಠಿ


ಕರಿಮೆಣಸಿನ ಚಹಾ (Black Pepper Tea) ತಯಾರಿಸುವ ವಿಧಾನ
ಪ್ಯಾನ್ ವೊಂದರಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಕುದಿಯುವ ನೀರಿಗೆ ಮೇಲೆ ಸೂಚಿಸಲಾಗಿರುವ ಎಲ್ಲಾ ಸಾಮಗ್ರಿಗಳನ್ನು ಬೆರೆಸಿ ಸಣ್ಣನೆಯ ಬೆಂಕಿ ಜ್ವಾಲೆಯ ಮೇಲೆ ಕುದಿಸಿ. ಸುಮಾರು 3 ರಿಂದ 5 ನಿಮಿಷದ ಬಳಿಕ ಅದನ್ನು ಸೋಸಿ. ಈಗ ಅದರಲ್ಲಿ ಜೇನು ತುಪ್ಪ ಬೆರೆಸಿ. ಜಾಸ್ತಿ ಕಡಕ್ ಬೇಕಿದ್ದರೆ ಹೆಚ್ಚು ಸಮಯದವರೆಗೆ ಕುದಿಸಿ.


ಕರಿಮೆಣಸಿನ ಚಹಾ ಸೇವನೆಯ ಲಾಭಗಳು (Black Pepper Tea Benefits)
ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ -
 ಕರಿಮೆಣಸು ಚಹಾವು ಪೈಪೆರಿನ್ ಅನ್ನು ಹೊಂದಿರುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಕರಿಮೆಣಸಿನಲ್ಲಿ ಉರಿಯೂತ ನಿವಾರಕ ಗುಣಗಳಿದ್ದು, ಇದು ದೇಹದಲ್ಲಿರುವ ರಾಡಿಕಲ್ ವಿರುದ್ಧ ಹೋರಾಡುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುತ್ತದೆ.


ಇದನ್ನೂ ಓದಿ-Low Sodium Diet : ಕಡಿಮೆ ಉಪ್ಪು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ : ಯಾಕೆ ಇಲ್ಲಿದೆ ನೋಡಿ 


ಚಳಿಗಾಲದಲ್ಲಿ ಶೀತದಿಂದ ರಕ್ಷಿಸುತ್ತದೆ - ಶೀತ ಮತ್ತು ಕೆಮ್ಮಿನ ಸಮಸ್ಯೆ ಚಳಿಗಾಲದಲ್ಲಿ ಸಾಮಾನ್ಯವಾಗಿರುತ್ತದೆ. ಈ ಚಹಾವು ಋತುಮಾನದ ಸಮಸ್ಯೆಗಳನ್ನು ತಡೆಯುತ್ತದೆ. ಆಸ್ತಮಾದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ.


ಮೂಡ್ ಸುಧಾರಕ - ಕರಿಮೆಣಸು ಚಹಾ ಕುಡಿಯುವುದು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಆದರೆ, ಇದನ್ನು ಅತಿಯಾಗಿ ಸೇವಿಸಬಾರದು.


ಇದನ್ನೂ ಓದಿ- ಸೂರ್ಯಾಸ್ತದ ನಂತರ ಹಣ್ಣುಗಳನ್ನು ಯಾಕೆ ತಿನ್ನಲೇಬಾರದು ಎನ್ನುವುದು ತಿಳಿದೆದೆಯಾ ? ಇಂದೇ ಬಿಟ್ಟು ಬಿಡಿ ಈ ಅಭ್ಯಾಸ


ನೆನಪಿನಲ್ಲಿಡಿ
ಕರಿಮೆಣಸು ಚಹಾದ ಹಲವು ಪ್ರಯೋಜನಗಳಿವೆ, ಆದರೆ ಇದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿಮ್ಮ ಆಹಾರದಲ್ಲಿ ನೀವೂ ಕೂಡ ಕರಿಮೆಣಸಿನ ಚಹಾ ಸೇರಿಸಲು ಬಯಸುತ್ತಿದ್ದರೆ ಖಂಡಿತವಾಗಿಯೂ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ.


ಇದನ್ನೂ ಓದಿ-Badam Oil For Dark Circles: ಡಾರ್ಕ್ ಸರ್ಕಲ್ ನಿವಾರಣೆಗಾಗಿ ಬಾದಾಮಿ ಎಣ್ಣೆಯನ್ನು ಈ ರೀತಿ ಬಳಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.