Weight Loss Drink: ಬೆಣ್ಣೆಯಂತೆ ಹೊಟ್ಟೆ ಕೊಬ್ಬು ಕರಗಿಸಲು ಮನೆಯಲ್ಲಿಯೇ ತಯಾರಿಸಿ ಸೇವಿಸಿ ಈ ಹಸಿರು ಜ್ಯೂಸ್
How To Burn Belly Fat: ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿನ ಕೊಬ್ಬು ಕರಗಿಸುವುದು ತುಂಬಾನೇ ಕಷ್ಟಸಾಧ್ಯದ ಕೆಲಸ. ಆದರೆ, ನೀವು ನಿಮ್ಮ ಕಿಚನ್ ನಲ್ಲಿರಿಸಿರುವ ಒಂದು ವಿಶೇಷ ಪದಾರ್ಥವನ್ನು ಸೇವಿಸಿದರೆ, ಅದರಿಂದ ನಿಮಗೆ ಭಾರಿ ಲಾಭ ಸಿಗಲಿದೆ.
Coriander Water For Weight Loss: ನೀವೂ ಒಂದು ವೇಳೆ ನಿಮ್ಮ ತೂಕವನ್ನು ನಿಯಂತ್ರಿಸಲು ಬಯಸುತ್ತಿದ್ದು, ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮನಸ್ಥಿತಿ ಇಲ್ಲದಿದ್ದರೆ. ನಿಮಗೆ ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಹೊಟ್ಟೆ ಭಾಗದಲ್ಲಿರುವ ಕೊಬ್ಬು ಕರಗಿಸುವಲ್ಲಿ ವ್ಯಾಯಾಮ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆಯೋ ಅಷ್ಟೇ ನಿಮ್ಮ ಆಹಾರ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತೂಕ ಇಳಿಕೆಗಾಗಿ ನೀವು ಈ ವಿಶೇಷ ಜ್ಯೂಸ್ ಅನ್ನು ಸೇವಿಸಬಹುದು.
ಕೊತಂಬರಿ ಸೊಪ್ಪಿನಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ
ಆಹಾರ ಪದಾರ್ಥಗಳ ರುಚಿ ಹೆಚ್ಚಿಸಲು ಮತ್ತು ಅಲಂಕಾರಕ್ಕಾಗಿ ಬಳಸಲಾಗುವ ಕೊತಂಬರಿ ಸೊಪ್ಪಿನ ಕುರಿತು ನಾವು ಮಾತನಾಡುತ್ತಿದ್ದೇವೆ. ಹೌದು, ಹಸಿರಾಗಿರುವ ಈ ಕೊತಂಬರಿ ಸೊಪ್ಪು ನಿಮ್ಮ ತೂಕ ಇಳಿಕೆಗೂ ಕೂಡ ತುಂಬಾ ಲಾಭಕಾರಿಯಾಗಿದೆ.
ಬಹುತೇಕ ಆರೋಗ್ಯ ತಜ್ಞರು ತೂಕ ಹೆಚ್ಚಳದಿಂದ ತೊಂದರೆಗೊಳಗಾದವರಿಗೆ ಕೊತಂಬರಿ ಸೊಪ್ಪನ್ನು ಸೇವಿಸುವ ಸಲಹೆ ನೀಡುತ್ತಾರೆ. ಏಕೆಂದರೆ, ಈ ಹಸಿರು ತರಕಾರಿಯಿಂದ ಮೆಟಾಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳುವುದಲ್ಲದೆ, ಜೀರ್ಣಕ್ರಿಯೆ ಕೂಡ ಸುಧಾರಿಸುತ್ತಾದೆ. ಇದರಿಂದ ದೇಹದ ಹೆಚ್ಚುವರಿ ಕೊಬ್ಬು ಕರಗಲಾರಂಭಿಸುತ್ತದೆ.
ಕೊತಂಬರಿ ಜ್ಯೂಸ್ ನಿಂದ ತೂಕ ಇಳಿಕೆ
ಕೊತಂಬರಿ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಇದೇ ಕಾರಣದಿಂದ ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ. ಡೈಜೆಶನ್ ಸರಿಯಾಗಿಲ್ಲದಿದ್ದರೆ, ಹೊಟ್ಟೆ ಮತ್ತು ಸೊಂಟದ ಸುತ್ತಮುತ್ತಲಿನ ಬೊಜ್ಜು ಹೆಚ್ಚಾಗುತ್ತದೆ.
ಕೊತಂಬರಿ ಸೊಪ್ಪಿನ ನೀರು ತಯಾರಿಸುವ ವಿಧಾನ ತುಂಬಾ ಸುಲಭವಾಗಿದೆ. ಇದಕ್ಕಾಗಿ ಕೊತಂಬರಿ ಸೊಪ್ಪನ್ನು ರಾತ್ರಿ ಇಡೀ ನೀರಿನಿಂದ ತುಂಬಿದ ಪಾತ್ರೆಯಲ್ಲಿ ಹಾಕಿ ಇರಿಸಿ. ಮಾರನೆಯ ದಿನ ಬೆಳಗ್ಗೆ ಎದ್ದು ದೇಹದಿಂದ ವಿಷಪದಾರ್ಥಗಳನ್ನು ಹೊರಹಾಕುವ ಈ ನೀರನ್ನು ಸೇವಿಸಿ. ಇದಲ್ಲದೆ ನೀವು ಹಸಿರು ಕೊತಂಬರಿ ಸೊಪ್ಪನ್ನು ರುಬ್ಬಿ, ಅದಕ್ಕೆ ನೀರು ಹಾಗೂ ನಿಂಬೆ ರಸವನ್ನು ಬೆರೆಸಿ ಕೂಡ ಸೇವಿಸಬಹುದು.
ಇದನ್ನೂ ಓದಿ-Dehydration: ಮುಖದಲ್ಲಾಗುವ ಈ ಬದಲಾವಣೆಗಳನ್ನು ನಿರ್ಲಕ್ಷಿಸಿದರೆ ಅಪಾಯ ಗ್ಯಾರೆಂಟಿ!
ಕೊತಂಬರಿ ಬೀಜ ಕೂಡ ತುಂಬಾ ಲಾಭಕಾರಿಯಾಗಿದೆ
ಒಂದು ವೇಳೆ ನೀವು ಕೊತಂಬರಿ ಬೀಜಗಳನ್ನು ಕೂಡ ಬಳಸಲು ಯೋಚಿಸುತ್ತಿದ್ದರೆ, ಒಣ ಬೀಜಗಳನ್ನು ಒಂದು ಪಾತ್ರೆಗೆ ನೀರು ಹಾಕಿ ಕುದಿಸಿಕೊಳ್ಳಿ. ನಂತರ ಈ ನೀರನ್ನು ರಾತ್ರಿ ಇಡೀ ಹಾಗೆಯೇ ಬಿಡಿ ಮತ್ತು ಬೆಳಗ್ಗೆ ಎದ್ದು ಖಾಲಿ ಹೊಟ್ಟೆ ಅದನ್ನು ಸೇವಿಸಿ.
ಇದನ್ನೂ ಓದಿ-Bitter Gourd For Diabetes: ಡಯಾಬಿಟಿಸ್ ರೋಗಿಗಳಿಗೆ ಹಾಗಲಕಾಯಿ ಬೀಜಗಳು ತುಂಬಾ ಲಾಭಕಾರಿ, ಈ ರೀತಿ ಬಳಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.