ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಈ 1 ಪದಾರ್ಥ ಬೆರೆಸಿ ಸೇವಿಸಿ, ಕೆಲವೇ ದಿನಗಳಲ್ಲಿ ಸೊಂಟದ ಸೈಜ್ ನಾಲ್ಕು ಇಂಚು ಕಮ್ಮಿಯಾಗುತ್ತೆ!
Weigh Loss Home Remedies: ಹೆಚ್ಚುತ್ತಿರುವ ದೇಹದ ಕೊಬ್ಬನ್ನು ಕಡಿಮೆ ಮಾಡಲು, ರಾತ್ರಿ ಮಲಗುವ ಮೊದಲು ಹಾಲಿನಲ್ಲಿ ದಾಲ್ಚಿನ್ನಿ ಬೆರೆಸಿ ಕುಡಿಯಿರಿ. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ (Health News In Kannada)
ಬೆಂಗಳೂರು: ನಮ್ಮಲ್ಲಿ ಹಲವರು ತಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಹಗಲು ರಾತ್ರಿ ನಿರಂತರ ಪ್ರಯತ್ನಗಳನ್ನು ಮಾಡುತ್ತಾಳೆ ಇರುತ್ತಾರೆ, ಆದರೆ ನಿರಾಶೆಯೇ ಅಬರ ಪಾಲಿಗೆ ಸಿಗುತ್ತಿರುತ್ತದೆ. ನೀವೂ ಕೂಡ ಉತ್ತಮ ರೀತಿಯಲ್ಲಿ ತೂಕ ಇಳಿಕೆ ಮಾಡಿಕೊಳ್ಳಲು ಬಯಸುತ್ತಿದ್ದರೆ, ಮೊದಲನೆಯದಾಗಿ ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ನೀವು ಗಮನ ಹರಿಸಬೇಕು. ಅಲ್ಲದೆ, ತೂಕವನ್ನು ಕಳೆದುಕೊಳ್ಳಲು, ಸಿಹಿ ವಸ್ತುಗಳನ್ನು ತ್ಯಜಿಸುವ ಅವಶ್ಯಕತೆಯಿದೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವವರು ನಮ್ಮಲ್ಲಿ ಹಲವರಿದ್ದಾರೆ. ಅನೇಕರು ಈ ಹಾಲಿನಲ್ಲಿ ಸಕ್ಕರೆಯನ್ನು ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗಬಹುದು. ನಿಮ್ಮ ತೂಕವನ್ನು ನಿಯಂತ್ರಿಸಲು ನೀವು ಬಯಸಿದರೆ, ಹಾಲಿನಲ್ಲಿ ದಾಲ್ಚಿನ್ನಿ ಬೆರೆಸಿ ಕುಡಿಯಿರಿ. ಹೌದು, ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ದಾಲ್ಚಿನ್ನಿ ಬೆರೆಸಿ ಕುಡಿಯುವುದರಿಂದ ನಾವು ತೂಕವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ತೂಕ ಇಳಿಕೆಗೆ ರಾತ್ರಿ ಯಾವ ರೀತಿ ಹಾಲು ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ (Health News In Kannada)
ರಾತ್ರಿಯಲ್ಲಿ ದಾಲ್ಚಿನ್ನಿ ಹಾಲು ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ
ನಿಮ್ಮ ತೂಕವನ್ನು ತ್ವರಿತವಾಗಿ ನಿಯಂತ್ರಿಸಬೇಕೆಂದು ನೀವು ಬಯಸಿದರೆ, ಮೊದಲು ಹಾಲಿನಲ್ಲಿ ದಾಲ್ಚಿನ್ನಿ ಬೆರೆಸಿ ಕುಡಿಯಲು ಪ್ರಾರಂಭಿಸಿ. ಇದಕ್ಕಾಗಿ, 1 ಸ್ಟೀಲ್ ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ತೆಗೆದುಕೊಳ್ಳಿ, ಅದಕ್ಕೆ ದಾಲ್ಚಿನ್ನಿ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕುದಿಸಿ. ಈಗ ಮಲಗುವ ಮುನ್ನ ಈ ಹಾಲನ್ನು ಸೇವಿಸಿ, ಇದು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ-ಯುವಾವಸ್ಥೆಯಲ್ಲಿ ಬಿಳಿ ಕೂದಲು ಸಮಸ್ಯೆಗೆ ಗುರಿಯಾಗಿದ್ದೀರಾ? ಕೂದಲು ಕಪ್ಪಾಗಿಸಲು ಈ ಆಯುರ್ವೇದ ಎಣ್ಣೆ ಬಳಸಿ ನೋಡಿ!
ತೂಕ ಇಳಿಕೆಗೆ ಹಾಲು ಹೇಗೆ ಪ್ರಯೋಜನಕಾರಿ?
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಾರ, ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಡೈರಿ ಉತ್ಪನ್ನಗಳನ್ನು ಸೇವಿಸುವುದು ನಿಮಗೆ ಆರೋಗ್ಯಕರ ಆಯ್ಕೆಯಾಗಿದೆ. ಇದು ಸ್ನಾಯುಗಳನ್ನು ಬಳಪಡಿಸುವ ಮೂಲಕ ನಿಮ್ಮ ಮೊಂಡು ಕೊಬ್ಬನ್ನು ಕಡಿಮೆ ಮಾಡಬಹುದು.
>> ಹಾಲು ಪ್ರೋಟೀನ್‌ನ ಉತ್ತಮ ಮೂಲವಾಗಿದೆ, ಇದು ಸ್ನಾಯುವಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
>> ಪೆಪ್ಟೈಡ್ YY ಹಾರ್ಮೋನ್ ಹಾಲಿನಲ್ಲಿದೆ, ಇದು ತೂಕ ಇಳಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.
>> ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳು ವೇಗವಾಗಿ ಸುಡುತ್ತವೆ.
>> ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಬಿ 12, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿವೆ, ಅವು ನಿಮ್ಮ ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿಯಾಗಿವೆ.
>> ಹೆಚ್ಚುತ್ತಿರುವ ದೇಹದ ತೂಕವನ್ನು ಕಡಿಮೆ ಮಾಡಲು ದಾಲ್ಚಿನ್ನಿಯನ್ನು ಹಾಲಿನಲ್ಲಿ ಬೆರೆಸಿ ರಾತ್ರಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಆದಾಗ್ಯೂ, ಇದರೊಂದಿಗೆ ನೀವು ನಿಮ್ಮ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸಬೇಕು.
ಇದನ್ನೂ ಓದಿ-ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ... ಇಲ್ದಿದ್ರೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ