Weight Loss: ಕೆಲವೇ ದಿನಗಳಲ್ಲಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಎರಡೂ ಪದಾರ್ಥಗಳನ್ನು ಏಕಕಾಲಕ್ಕೆ ಸೇವಿಸಿ!
Weight Loss Recipe:ಸಾಮಾನ್ಯವಾಗಿ ಪನೀರ್ ಹಾಗೂ ಮೊಟ್ಟೆಯನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವುಗಳನ್ನು ಏಕಕಾಲಕ್ಕೆ ಸೇವಿಸಬೇಕೆ ಅಥವಾ ಬೇಡವೇ ಎಂಬ ಕಂಫ್ಯೋಶನ್ ಹಲವರ ಮನದಲ್ಲಿದೆ ಈ ಕುರಿತಾದ ನಿಜಾಂಶ ಏನು ತಿಳಿದುಕೊಳ್ಳೋಣ ಬನ್ನಿ (Health News In Kannada),
Weight Loss Diet: ಇಂದಿನ ಕಾಲದಲ್ಲಿ ಬಹುತೇಕರು ತಮ್ಮ ಹೆಚ್ಚಾಗಿರುವ ತೂಕವನ್ನು ನಿಯಂತ್ರಿಸಲು ಕಷ್ಟಪಡುವುದನ್ನು ನೀವು ನೋಡಿರಬಹುದು, ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಬಯಸಿದ ಫಲಿತಾಂಶವು ಸಿಗುವುದಿಲ್ಲ. ತೂಕವನ್ನು ನಿಯಂತ್ರಿಸಲು, ಕೆಲವರು ಮೊಟ್ಟೆ ಮತ್ತು ಪನೀರ್ ಅನ್ನು ತಿನ್ನುತ್ತಾರೆ, ಏಕೆಂದರೆ ಎರಡರಲ್ಲೂ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ. ಪ್ರೋಟೀನ್ ತಡವಾಗಿ ಜೀರ್ಣವಾದಾಗ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ, ಇದರ ಹೊರತಾಗಿ, ಈ ಎರಡೂ ವಸ್ತುಗಳು ಹಸಿವನ್ನು ಕಡಿಮೆ ಮಾಡುವ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ. ಆದರೆ, ಪನೀರ್ ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಏನಾದರೂ ಪ್ರಯೋಜನವಿದೆಯೇ ಎಂಬ ಪ್ರಶ್ನೆ ಬಹುತೇಕರಿಗೆ ಕಾಡುತ್ತದೆ. ಆದ್ದರಿಂದ ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸೋಣ ಬನ್ನಿ (Health News In Kannada).
ಪನೀರ್ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ? (How to use paneer and egg for weight loss)
ಪನೀರ್ ಒಂದು ತ್ವರಿತ ಶಕ್ತಿಯ ಮೂಲವಾಗಿದೆ, ಇದರಿಂದ ನಾವು ದೈನಂದಿನ ಜೀವನದ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದು, ಆದರೆ ಪನೀರ್ ನಿಂದ ತಯಾರಾಗುವ ಅನೇಕ ರುಚಿಕರವಾದ ಪದಾರ್ಥಗಳು ವಾಸ್ತವದಲ್ಲಿ ತೂಕವನ್ನು ಹೆಚ್ಚಿಸುತ್ತವೆ, ವಿಶೇಷವಾಗಿ ಎಣ್ಣೆ ಮತ್ತು ಮಸಾಲೆಗಳನ್ನು ಬಳಕೆ ಮಾಡಿ ಮಾಡಲಾಗುವ ಪಾಕವಿಧಾನಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ತೂಕ ಇಳಿಸಿಕೊಳ್ಳಲು ಬಯಸುವವರು ಪನೀರ್ ಟಿಕ್ಕಾದಂತಹ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಒಂದೇ ದಿನದಲ್ಲಿ ಹೆಚ್ಚು ಪನೀರ್ ಸೇವನೆಯನ್ನು ತಪ್ಪಿಸಿ, ಏಕೆಂದರೆ ಅದು ಲಾಭದ ಬದಲು ಹಾನಿಯನ್ನುಂಟುಮಾಡುತ್ತದೆ.
ಇದನ್ನೂ ಓದಿ-Bad Cholesterol Symptoms: ಕೆಟ್ಟ ಕೊಲೆಸ್ಟ್ರಾಲ್ ನ ಈ ಸಂಕೇತಗಳನ್ನು ಮರೆತೂ ನಿರ್ಲಕ್ಷಿಸಬೇಡಿ!
ಮೊಟ್ಟೆ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ? (Paneer and egg for weight loss recipe)
ಮೊಟ್ಟೆಯು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಆಹಾರವಾಗಿದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ, ಇದನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿನ ಅಗತ್ಯ ಅಮೈನೋ ಆಮ್ಲಗಳ ಸಮತೋಲನ ಏರ್ಪಡುತ್ತದೆ. ಮೊಟ್ಟೆಯು ನಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನಿಮ್ಮ ಸೊಂಟ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ-Diabetes Remedy: ಕೇವಲ ಎರಡೇ ವಾರಗಳಲ್ಲಿ ಮಧುಮೇಹ ಹಿಯಂತ್ರಿಸಬೇಕೆ? ಇಲ್ಲಿವೆ ಕೆಲ ಅದ್ಭುತ ಪರಿಹಾರಗಳು!
ಪನೀರ್ ಮತ್ತು ಮೊಟ್ಟೆಗಳನ್ನು ಏಕಕಾಲಕ್ಕೆ ಸೇವಿಸುವುದರಿಂದ ಪ್ರಯೋಜನವಾಗುತ್ತದೆಯೇ?
ತೂಕವನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಪ್ರೋಟೀನ್ ಭರಿತ ಮೊಟ್ಟೆಗಳು ಮತ್ತು ಪನೀರ್ ಸೇವನೆ ಬಹಳ ಮುಖ್ಯ. ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರಸಿದ್ಧ ಆಹಾರ ತಜ್ಞರಾದ ಡಾ. ಆಯುಷಿ ಯಾದವ್ ಹೇಳುವ ಪ್ರಕಾರ, ತೂಕ ಇಳಿಸಿಕೊಳ್ಳಲು ಎರಡೂ ಆಹಾರಗಳು ಸರಿಯಾದ ಆಯ್ಕೆಗಳಾಗಿವೆ. ಪ್ರೋಟೀನ್ ನಿಧಾನವಾಗಿ ಜೀರ್ಣವಾಗುವುದರಿಂದ, ನಿಮಗೆ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದ ಅನುಭವ ನೀಡುತ್ತದೆ. ನೀವು ಮೊಟ್ಟೆ ಮತ್ತು ಪನೀರ್ ಅನ್ನು ಒಂದೇ ಸಮಯದಲ್ಲಿ ತಿನ್ನಬಹುದು, ಅದರಲ್ಲಿ ಯಾವುದೇ ಹಾನಿ ಇಲ್ಲ, ಆದರೆ, ಅತಿಯಾದ ಸೇವನೆ ಸರಿಯಲ್ಲ ಎಂಬುದನ್ನು ಮಾತ್ರ ನೆನಪಿನಲ್ಲಿಡಿ
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ